ದೈವಜ್ಞ ಬ್ರಾಹ್ಮಣ ಸಮಾಜದ ಉಭಯ ಶ್ರೀಗಳಿಂದ ನಗರದಲ್ಲಿ ದೈವಜ್ಞ ದರ್ಶನ ಕಾರ್ಯಕ್ರಮ: ಅರವಿಂದ ಪಾಲನಕರ

 ದೈವಜ್ಞ ಬ್ರಾಹ್ಮಣ ಸಮಾಜದ ಉಭಯ ಶ್ರೀಗಳಿಂದ  ನಗರದಲ್ಲಿ ದೈವಜ್ಞ ದರ್ಶನ ಕಾರ್ಯಕ್ರಮ: ಅರವಿಂದ ಪಾಲನಕರ Two saints from the Daivajna Brahmin community to hold a Daivajna Darshan program in the city: Aravi

ಲೋಕದರ್ಶನ ವರದಿ 

  

ದೈವಜ್ಞ ಬ್ರಾಹ್ಮಣ ಸಮಾಜದ ಉಭಯ ಶ್ರೀಗಳಿಂದ  ನಗರದಲ್ಲಿ ದೈವಜ್ಞ ದರ್ಶನ ಕಾರ್ಯಕ್ರಮ: ಅರವಿಂದ ಪಾಲನಕರ 

ಗದಗ 09:-  ದೈವಜ್ಞ ಬ್ರಾಹ್ಮಣ ಸಮಾಜದ ಸರ್ವಾಗಿಣ ವಿಕಾಸ, ಸಮಾಜ ಸಂಘಟನೆ ಹಾಗೂ ಧಾರ್ಮಿಕ ಭಾವನೆಗಳ ಸಂವರ್ಧನೆಗಾಗಿ ನಾಲ್ಕು ದಶಕಗಳ ಹಿಂದೆ ಅನುಷ್ಠಾನಗೊಂಡ ದೈವಜ್ಞ ಬ್ರಾಹ್ಮಣ ಸಮಾಜದ ​‍್ರ​‍್ರಥಮ,   ಮಠವಾದ ಹೊನ್ನಾವರ ತಾಲೂಕಿನ ಸುಕ್ಷೇತ್ರ ಕರ್ಕಿ ಶ್ರೀ ಜ್ಞಾನೇಶ್ವರಿ ಪೀಠದ ​‍್ರ​‍್ರಥಮ ಮಠಾಧೀಶರಾದ   ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರ ಹಾಗೂ   ಸುಜ್ಞಾನೇಶ್ವರ ಭಾರತೀ ಸ್ವಾಮಿಗಳವರ ದೈವಜ್ಞ ದರ್ಶನ ಕಾರ್ಯಕ್ರಮವನ್ನು ಗದಗ ಶಹರದ ದೈವಜ್ಞ ಸಮಾಜ್ಯೋನ್ನತಿ ಸಂಫ (ರಿ),  ದೈವಜ್ಞ ಮಹಿಳಾ ಮಂಡಳಿ, ಹಾಗೂ ದೈವಜ್ಞ ಯುವಕ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಇದೇ ದಿನಾಂಕ 16 ರಂದು ಸಾಯಂಕಾಲ 04 ಘಂಟೆಗೆ ಗದಗ ಶಹರದ ಮುಳಗುಂದ ನಾಕಾದಲ್ಲಿರುವ ವಿಠಲಾರೂಢ ಸಮುದಾಯ ಭವನದಲ್ಲಿ  ದೈವಜ್ಞ ದರ್ಶನವನ್ನು ಹಮ್ಮಿಕೊಳ್ಳಲಾಗಿರುತ್ತದೆ. 

ಸದರ ಧಾರ್ಮಿಕ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಇದೇ ದಿನಾಂಕ 09 ರಂದು ದೈವಜ್ಞ ಸಮಾಜ್ಯೋನ್ನತಿ ಸಂಘದ ಕಚೇರಿಯಲ್ಲಿ ಜರುಗಿತು.ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಅರವಿಂದ ಪಾಲನಕರ ರವರು ಉಭಯ ಶ್ರೀಗಳು ನಮ್ಮ ಊರಿನಲ್ಲಿ ಆಗಮಿಸಿ ಸಾನಿಧ್ಯ ನೀಡುತ್ತಿರುವ ಈ ಸಂದರ್ಭದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರಾದ ನಾವುಗಳೆಲ್ಲರೂ ಸೇರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ   ಶ್ರೀಗಳವರನ್ನು ಸ್ವಾಗತಿಸಿ ಅವರ ಕೃಪಾಶೀರ್ವಾದ ಪಡೆಯುವುದು ಕರ್ತವ್ಯವಾಗಿದೆ. ಇದೇ ಬರುವ ದಿ . 16  ರಂದು ಮಂಗಳವಾರ, ಸಾಯಂಕಾಲ 4.00 ಗಂಟೆಗೆ ನಾವೆಲ್ಲರೂ ಭವ್ಯ ಕಾರ್ಯಕ್ರಮದಲ್ಲಿ ತನು ಮನ ಧನದೊಂದಿಗೆ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೋಳಿಸಿ ಉಭಯ ಶ್ರೀಗಳವರ ಕೃಪೆಗೆ ಪಾತ್ರರಾಗೋಣ ಎಂದು ನುಡಿದರು. 

ಈ ಸಂದರ್ಭದಲ್ಲಿ ದೈವಜ್ಞ ಸಮಾಜ್ಯೋನ್ನತಿ ಸಂಘದ ಅಧ್ಯಕ್ಷರಾದ ಅರವಿಂದ ಪಾಲನಕರ ಉಪಾಧ್ಯಕ್ಷರಾದ ದೇವರಾಜ ಡಿ. ದೈವಜ್ಞ, ಕಾರ್ಯದರ್ಶಿಗಳಾದ ಕಿಶೋರ ಎನ್‌. ರೇವಣಕರ ಜಂಟಿ ಕಾರ್ಯದರ್ಶಿಗಳಾದ ಚೇತನ ಜಿ. ಪಾಲನಕರ ಕೋಶಾಧ್ಯೇಕ್ಷರಾದ ಪ್ರಕಾಶ್ ಸುಬ್ರಾಯ ವೇರ್ಣೇಕರ, ಸದಸ್ಯರಾದ ಸಂತೋಷ ಎನ್‌. ಕುಡತರಕರ, ರಾಮಚಂದ್ರ ಎಸ್‌. ಪಾಲನಕರ, ನರಸಿಂಹ ಎಮ್‌. ಕುಡತರಕರ, ರಾಜು ವೇರ್ಣೇಕರ, ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ,  ದೈವಜ್ಞ ಸಮಾಜ ಮಹಿಳಾ ಮಂಡಳಿಯ ಅಧ್ಯಕ್ಷರಾದ   ಪದ್ಮಾ ವೆಂಕಟೇಶ ವೇರ್ಣೇಕರ್, ಸಿಂಧೂ ರಾಯಕರ,   ಚೇತನಾ ಆರ್‌. ವೇರ್ಣೆಕರ, ದೈವಜ್ಞ ಸಮಾಜ ಯುವಕ ಮಂಡಳಿಯ ಅಧ್ಯಕ್ಷರಾದ ಗಣೇಶ ಆರ್‌. ವೆರ್ಣೇಕರ ರೋಹಿತ ಆರ್‌. ರೇವಣಕರ, ವಿನಾಯಕ ಎನ್‌. ರೇವಣಕರ ಕಿಶನ್ ಎಸ್‌. ವೆರ್ಣೇಕರ, ಅರುಣ ಸಿ. ರಾಯ್ಕರ ನಾಗರಾಜ ಎಂ. ರೇವಣಕರ ಕಿರಣ ವಿ. ವೆರ್ಣೇಕರ, ಅಮಿತ ಸಿ. ವೆರ್ಣೇಕರ 

ಮಂಜುನಾಥ ಎಸ್‌. ಪಾಲನಕರ ಪರಶುರಾಮ ಎಸ್‌. ವೇರ್ಣೇಕರ, ವಿಶಾಲ ವೇರ್ಣೇಕರ, ಪ್ರಣವ್ ಎಸ್‌. ರೇವಣಕರ, ಹಾಗೂ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜ ಭಾಂಧವರು ಉಪಸ್ಥಿತರಿದ್ದರು.