ಪೆಟ್ರೊಪ್ಲವೋಸ್ಕ್, ರಷ್ಯಾ, ಏ 16,ರಷ್ಯಾದ ಕಮ್ಚಟ್ಕಾ ದ್ವೀಪಕಲ್ಪದಲ್ಲಿ ಗುರುವಾರ ಎರಡು ಬಾರಿ ಭೂಮಿ ಕಂಪನಿಸಿದೆ ಎಂದು ರಷ್ಯಾದ ಭೂಗೋಳ ಸಮೀಕ್ಷಾ ಕೇಂದ್ರ ತಿಳಿಸಿದೆ. ಗುರುವಾರ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.2 ಮತ್ತು 4.2 ರಷ್ಟು ದಾಖಲಾಗಿತ್ತು ಎಂದು ವರದಿಯಾಗಿದೆ.5.2 ತೀವ್ರತೆಯ ಭೂಕಂಪದ ಕೇಂದ್ರ ಬಿಂದು ಪೆಟ್ರೊಪ್ಲವೋಸ್ಕ್, ಕಮ್ಚಟ್ಕಾ ದಿಂದ 180 ಕಿಲೋಮೀಟರ್ ಆಗ್ನೇಯಕ್ಕೆ 50 ಕಿಲೋಮೀಟರ್ ಆಳದಲ್ಲಿತ್ತು. ಇದಕ್ಕೂ ಮುನ್ನ ಪೆಸಿಫಿಕ್ ಸಮುದ್ರದ ಅದೇ ಪ್ರದೇಶದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿತ್ತು ಎಂದು ಭೂಕಂಪ ಕೇಂದ್ರದ ವಕ್ತಾರರು ಮಾಹಿತಿ ನೀಡಿದ್ದಾರೆ. ಸ್ಥಳೀಯರಿಗೆ ಕಂಪನದ ಅನುಭವವಾಗಿಲ್ಲ ಎಂದು ತಿಳಿದುಬಂದಿದೆ. ಈ ಕಂಪನಗಳಿಂದ ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ.