ಎರಡು ದಿನಗಳ ರಂಗಾಭಿನಯ ಕಾರ್ಯಾಗಾರ ಸಂಪನ್ನ
Two-day theatre workshop complete
ಲೋಕದರ್ಶನ ವರದಿ
ಬೆಳಗಾವಿ 27: ಬೆಳಗಾವಿಯ ರಂಗಸಂಪದವು ಹಮ್ಮಿಕೊಂಡಿದ್ದ ರಂಗಾಭಿನಯ ಕಾರ್ಯಾಗಾರವು ಯಶಸ್ವಿಯಾಗಿ ಸಂಪನ್ನಗೊಂಡಿತು. ಎರಡು ದಿನಗಳ ಕಾರ್ಯಾಗಾರದಲ್ಲಿ ಬೆಳಿಗ್ಗೆಯ 10.30 ರಿಂದ ಸಂಜೆ 6.30 ರ ವರೆಗೆ 25 ಪ್ರಶಿಕ್ಷಣಾರ್ಥಿಗಳು ರಂಗಭೂಮಿಯ ವಿವಿಧ ಆಯಾಮಗಳನ್ನು ಪ್ರಾತ್ಯಕ್ಷಿತವಾಗಿ ಮತ್ತು ವಾಚಿಕವಾಗಿ ರಂಗಭೂಮಿಯಲ್ಲಿ ಸತತ 40-50 ವರ್ಷದ ಅನುಭವದ ಡಾ.ಪ್ರಕಾಶ ಮತ್ತು ರಜನ ಗರುಡ ಅವರಿಂದ ಅತ್ಯುತ್ತಮವಾಗಿ ಶಿಕ್ಷಣ ಪಡೆದರು.
ಸಂಜೆ 5.30 ರಿಂದ ನಡೆದ ಸಮಾರೋಪ ಸಮಾರಂಭದಲ್ಲಿ ಧಾರವಾಡದ ರಂಗಾಯಣದ ನರ್ದೇಶಕರಾಗಿ ಸಾರಥ್ಯವಹಿಸುತ್ತಿರುವ ಖ್ಯಾತ ನಟ ನಿರ್ದೇಶಕ ಲೇಖಕ ಝಕೀರ ನದಾಫ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲ 25 ಅಭ್ಯರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ರಂಗಭೂಮಿಯ ಬಗ್ಗೆ ತಮ್ಮ ಅನುಭವಗಳನ್ನು ರೋಚಕವಾಗಿ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಝಕೀರ ನದಾಫ ಅವರನ್ನು ಆದರದಿಂದ ಸತ್ಕರಿಸಲಾಯಿತು .ಆರು ಜನ ತರಬೇತಿ ಪಡೆದವರು ತಮ್ಮ ಅನುಭವ ಹಂಚಿಕೊಂಡು ರಂಗಸಂಪದಕ್ಕೆ ಧನ್ಯವಾದ ಅರ್ಿಸಿದರು.
ಸಂಪನ್ಮೂಲ ದಂಪತಿಗಳಾದ ರಜನ ಮತ್ತು ಡಾ.ಪ್ರಕಾಶ ಗರುಡ ಅವರು ಈ ರೀತಿಯ ಕಾರ್ಯಾಗಾರದ ಆಯೋಜನೆ ಮಾಡಬೇಕಾದ ಸರ್ಕಾರಿ ಸಂಸ್ಥೆಗಳು ಮಾಡದೇ ಇರುವುದರಿಂದ ರಂಗಸಂಪದ ಬೆಳಗಾವಿಯ ತಂಡದವರು ಮಾಡುತ್ತಿರುವದು ಮತ್ತು ಇದಕ್ಕೆ ಇಷ್ಟು 25 ಅಭ್ಯರ್ಥಿಗಳು ಹಾಜರಿರುವದು ಅಭಿನಂದನೀಯ ಎಂದರು.
ಎಲ್ ಎಸ್ ಶಾಸ್ತ್ರೀ ಅವರು ಹಳೆಯ ವೃತ್ತಿ ರಂಗಭೂಮಿಯ ಮತ್ತು ಇಂದಿನ ಹವ್ಯಾಸೀ ರಂಗಭೂಮಿಯ ಬಗ್ಗೆ ಹೇಳಿದರು.ಶ್ರೀ ಪ್ರಸಾದ ಕಾರಜೋಳ ಸ್ವಾಗತಿಸಿದರು. ಚಿದಾನಂದ ವಾಳಕೆ ವಂದಿಸಿದರು. ಪದ್ಮಾ ಕುಲಕರ್ಣಿಯವರು ಅತಿಥಿಗಳ ಪರಿಚಯ ನೀಡಿದರು.
ಡಾ.ಅರವಿಂದ ಕುಲಕರ್ಣಿಯವರು ಕಾರ್ಯಾಗಾರದ ಸಾಫಲ್ಯತೆ ಮತ್ತು ಮುಂದಿನ ರಂಗಪಯಣದ ಬಗ್ಗೆ ಮನದಾಳದ ಮಾತು ಹೇಳಿದರು.
ವೀಣಾ ಹೆಗಡೆ ನರೂಪಿಸಿದರು. ರಾಮಚಂದ್ರ ಕಟ್ಟಿ, ಬಸವರಾಜ ಹುಣಶೀಕಟ್ಟಿ, ಶಿವಾನಂದ ಮಾರೀಹಾಳ, ಚಂದ್ರಶೇಖರ ನವಲಗುಂದ, ಮುದೇನೂರ, ಆನಂದ ಪುರಾಣಿಕ, ನದಾಫ ಮುಂತಾದವರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 