ಅಕ್ರಮ ಮರಳು ದಂಧೆಗೆ ನಲುಗಿದ ತುಂಗಭದ್ರಾ ನದಿ ಒಡಲು
Tungabhadra river, devastated by illegal sand mining, bursts into flames
ಅಕ್ರಮ ಮರಳು ದಂಧೆಗೆ ನಲುಗಿದ ತುಂಗಭದ್ರಾ ನದಿ ಒಡಲು
ಲೋಕದರ್ಶನ ವರದಿ
ಹೂವಿನಹಡಗಲಿ 27: ತಾಲೂಕಿನಜೀವಾಳವಾಗಿರುವ ತುಂಗಭದ್ರಾ ಬಲ ದಂಡೆಯ ನದಿ ತೀರದಲ್ಲಿಕಬ್ಬಿಣದ ತೆಪ್ಪಗಳ ಮೂಲಕ ಅಕ್ರಮ ಮರಳು ದಂಧೆ ನಿರಂತರವಾಗಿ ನಡೆಯುತ್ತಿದೆ. ಮರಳು ನೀತಿ ಜಾರಿಗೊಳಿಸುವಲ್ಲಿ ತೋರಿರುವ ನಿರ್ಲಕ್ಷ್ಯದ ಫಲವಾಗಿ ಸರಕಾರಕ್ಕೆ ಲಕ್ಷಾಂತರ ರೂ. ಮೌಲ್ಯದ ರಾಜಧನ ನಷ್ಟವಾಗುತ್ತಿದೆ. ಅಲ್ಲದೇ, ಅವೈಜ್ಞಾನಿಕವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆಯಿಂದ ಪರಿಸರ, ಅಂತರ್ಜಲದ ಮೇಲೂ ದುಷ್ಪರಿಣಾಮ ಬೀರುವ ಆತಂಕ ಮನೆ ಮಾಡಿದೆ. ತಾಲೂಕಿನ ಬಲ ದಂಡೆಯ ತುಂಗಭದ್ರಾ ನದಿ ತೀರದ ಬನ್ನಿಮಟ್ಟಿ, ನಂದಿಗಾವಿ, ಮೈಲಾರ,ಕುರುವತ್ತಿ, ಲಿಂಗನಾಯ್ಕನಹಳ್ಳಿ ಹಾಗೂ ಹಾವೇರಿ ಜಿಲ್ಲೆಯ ಎಡ ದಂಡೆಯ ನದಿ ತೀರದ ಹಾವನೂರು,ಗಳಗನಾಥ ,ಮೇವುಂಡಿ ಭಾಗದಲ್ಲಿ ಬಿಹಾರದ ಕಾರ್ಮಿಕರು ಕಬ್ಬಿಣದ ತೆಪ್ಪಗಳ ಮೂಲಕ ಹಾವೇರಿ ಜಿಲ್ಲೆ ಗೆ ನಿರಂತರ ಅಕ್ರಮ ಮರಳು ಸಾಗಣೆ ನಡೆಯುತ್ತದೆ. ಈಗಾಗಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರಂತರವಾಗಿ ಹಲವು ಕಡೆಗಳಲ್ಲಿ ಅಕ್ರಮ ಮರಳು ದಂಧೆಕೋರರು ವಿರುದ್ಧ ದಾಳಿ ಮಾಡಿ ಕೇಸ್ ದಾಖಲು ಮಾಡಿದ್ದಾರೆ. ಈಗಾಗಲೇ ವಿಜಯನಗರ ಜಿಲ್ಲೆಯ ಹೂವಿನಹಡಗಲಿ -6, ಹರಪನಹಳ್ಳಿ-2 ಮರಳಿನ ಬ್ಲಾಕ್ಗಳು ಟೆಂಡರಾ ಪ್ರಕ್ರಿಯೆಯಲ್ಲಿವೆ. ಕೆಲ ಕಾರಣಗಳಿಂದ ಬ್ಲಾಕ್ ಟೆಂಡರ್ ವಿಳಂಬ ನೀತಿಯಿಂದ ಮರಳು ದಂಧೆಕೋರರಿಗೆ ಲೂಟಿ ಮಾಡಲು ಅನುಕೂಲವಾಗಿದೆ. ಸರ್ಕಾರಕ್ಕೆ ಲಕ್ಷಾಂತದ ರೂ. ನಷ್ಟವಾಗುತ್ತಿದೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 