ರೈತನ ಬೆನ್ನೆಲುಬು ಬಸವಣ್ಣ ಹಿ ಕಾರಹುಣ್ಣುಮೆ ಹಬ್ಬದಲ್ಲಿ ಮಹಾದೇವ ಸ್ವಾಮೀಜಿ ಕರೆ
Mahadeva Swamiji calls upon people during the Basavanna-Hikarahunnume festival, highlighting Basavan
ಕುಕನೂರ 29 : ಕಾರಹುಣ್ಣುಮೆ ನಮ್ಮ ನಾಡಿನ ಕೃಷಿ ಸಂಸ್ಕೃತಿಯ ಪ್ರತೀಕ. ರೈತನ ಜೀವನಾಡಿಯಾದ ಎತ್ತುಗಳನ್ನು ಪೂಜಿಸುವ ಮೂಲಕ ಕೃತಜ್ಞತೆ ಸಲ್ಲಿಸುವುದು ನಮ್ಮ ಪರಂಪರೆ. ಬಸವಣ್ಣನ ಸೇವೆ ಲೋಕಕಲ್ಯಾಣಕ್ಕಾಗಿ" ಎಂದು ಕುಕನೂರ ತಳಕಲ್ ಮಠದ ಪೂಜ್ಯ ಮಹಾದೇವ ಸ್ವಾಮೀಜಿ ಹೇಳಿದರು. ಅವರು ತಳಕಲ್ ಗ್ರಾಮದ ಅನ್ನದಾನೀಶ್ವರ ಶಾಖಾಮಠದಲ್ಲಿ ಕಾರಹುಣ್ಣುಮೆ ಹಬ್ಬದ ಅಂಗವಾಗಿ ಸೋಮವಾರ ಬಸವಣ್ಣನಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡುತ್ತ "ರೈತ ದೇಶದ ಬೆನ್ನೆಲುಬು ಎಂದರೆ, ಆ ರೈತನ ಬೆನ್ನೆಲುಬು ಬಸವಣ್ಣ.
ಹೊಲದಲ್ಲಿ ಬೆವರು ಸುರಿಸುವ ರೈತನಿಗೆ, ನೇಗಿಲು ಹೊರುವ ಎತ್ತು ದೇವರ ಸಮಾನ. ಕಾರಹುಣ್ಣುಮೆ ಕೇವಲ ಹಬ್ಬವಲ್ಲ, ಇದು ರೈತ ತನ್ನ ಜೊತೆಗಾರನಿಗೆ ಸಲ್ಲಿಸುವ ಕೃತಜ್ಞತಾ ಸಮರೆ್ಣ" ಎಂದು ಹೇಳಿದರು. ನಂತರ ಮಾತನಾಡಿದ ರೈತ ಮುಖಂಡ ಪಕ್ಕಪ್ಪ ಅಳವಂಡಿ ನಮ್ಮ ಹಿರಿಯರು ಕಷ್ಟಪಟ್ಟು ಉಳಿಸಿ ತಂದ ಕೃಷಿ ಪದ್ಧತಿಯನ್ನು ನಾವು ಮುಂದುವರಿಸಬೇಕು. ಮಳೆ, ಬೆಳೆ, ಎತ್ತು, ನೇಗಿಲು ಇವೆಲ್ಲವೂ ನಮ್ಮ ಬದುಕಿನ ಭಾಗ. ಮಠದ ಸ್ವಾಮೀಜಿಯವರು ರೈತರ ಪರವಾಗಿ ನಿಂತಿರುವುದು ನಮಗೆಲ್ಲ ಧೈರ್ಯ ತಂದಿದೆ ಮತ್ತು "ಇಂದಿನ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ.
ಮಣ್ಣಿನ ಋಣವನ್ನು ಮರೆಯಬಾರದು. ಮಠದ ಆವರಣದಲ್ಲಿ ನಾವೆಲ್ಲರೂ ಒಟ್ಟಾಗಿ ಬಸವಣ್ಣನಿಗೆ ಪೂಜೆ ಸಲ್ಲಿಸಿದ್ದೇವೆ. ಈ ಮಠವು ಮುಂದಿನ ದಿನಗಳಲ್ಲಿ ರೈತರಿಗೆ ಮಾರ್ಗದರ್ಶನ ಕೇಂದ್ರವಾಗಲಿ ಎಂದರು. ಬಸವರಾಜ ಬ್ಯಾಳಿ ಅವರು, "ಒಂದು ಕಾಲದಲ್ಲಿ ಪ್ರತಿ ಮನೆಯಲ್ಲೂ ಎತ್ತುಗಳಿದ್ದವು. ಈಗ ಯಾಂತ್ರೀಕರಣ ಬಂದರೂ ಬಸವಣ್ಣನ ಮೇಲಿನ ಭಕ್ತಿ ಕಡಿಮೆಯಾಗಿಲ್ಲ. ತಳಕಲ್ ಗ್ರಾಮದ ರೈತರು ಇಂದಿಗೂ ಒಗ್ಗಟ್ಟಾಗಿದ್ದಾರೆ ಎನ್ನುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ಮಳೆಯಾಶ್ರಿತ ಬೇಸಾಯ ಮಾಡುವ ನಮಗೆ ಇಂತಹ ಆಚರಣೆಗಳು ಮನೋಸ್ಥೈರ್ಯ ನೀಡುತ್ತವೆ" ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುಕನೂರಿನ ಸಂಗಮೇಶ ಕಲ್ಮಠ, ನಾಗರಾಜ ಚರಂತಿಮಠ, ಮಲ್ಲಯ್ಯ ಲಕಮಾಪೂರಮಠ, ಪಕ್ಕಪ್ಪ ಮುರಿಗಿ, ಮುದಿಯಪ್ಪ ಯೋಗೆಮ್ಮನವರ, ಪ್ರವೀಣ ಕರ್ಜಗಿ, ಶಿವಪ್ಪ ಬ್ಯಾಳಿ, ಸುನಿಲ ಗೋರಿ, ಗವಿಸಿದ್ದಪ್ಪ ದೊಡ್ಡಮನಿ, ಬಾವರಾಜ ಚಿಲವಾಡಿಗಿ, ರವಿ ತಳವಾರ, ಶರಣಪ್ಪ ಬ್ಯಾಳಿ,ವಿರುಪಾಕ್ಷೀ ನಿಟ್ಟಾಲಿ, ರುದ್ರ್ಪ ಚಿಲವಾಡಿಗಿ, ಮುತ್ತಪ್ಪ ಗೋರಿ, ಅಬ್ಬಾಸಾಲಿ, ಕಲ್ಲಯ್ಯ ಮುಂಡರಗಿ ಸೇರಿದಂತೆ ಇತರರು ಇದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 