ಗಡಿ ಬಾಗದಲ್ಲಿ ಕನ್ನಡ ಶಾಲೆಗಳು ಮುಚ್ಚದಂತೆ ನೊಡಿಕೊಳ್ಳಿ

Try not to close down Kannada schools in Boarder

ಯಮಕನಮರಡಿ   24  : ಹುಕ್ಕೇರಿ ತಾಲೂಕಿನ ಸಾಹಿತ್ಯ ಪರಿಷತ್ತು 12 ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಸ್ಥಳೀಯ ಹುಣಸಿಕೋಳ್ಳಮಠದ ಆವರಣದಲ್ಲಿ ದಿ. 23 ರಂದು ವಿಜೃಂಭಣೆಯಿಂದ ಜರುಗಿತು ಕಾರ್ಯಕ್ರಮದ ಸರ್ವಾಧ್ಯಕ್ಷರಾಗಿದ್ದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಈಗಾಗಲೇ ಗಡಿ ಬಾಗದಲ್ಲಿರುವ ಕನ್ನಡ ಶಾಲೆಗಳಲ್ಲಿ ಶಿಕ್ಷಕರ ಕೋರತೆಯಿಂದ ಮುಚ್ಚಿಹೊಗಿದ್ದು ಅವುಗಳಿಗೆ ಶಿಕ್ಷಕರನ್ನು ನೆಮಿಸಿ ಮತ್ತೆ ಪ್ರಾರಂಭಿಸಬೇಕೆಂದು ಸ್ವಾಮಿಜಿ ಹೆಳಿದರು. ನಮ್ಮ ವಲಯದಲ್ಲಿ 3 ಕಾರ್ಖಾನೆಗಳು ಇಂಜಿನಿಯರಿಂಗ ಕಾಲೇಜುಗಳಿದ್ದರು ತಾಲೂಕಿಗೆ ಹಲವಾರು ಅಗತ್ಯಗಳಿವೆ ತಾಲೂಕಾ ಅಧ್ಯಕ್ಷರು ಅವುಗಳನ್ನು ಸಮ್ಮತಿಸಿ ಜಾರಿಗೆ ತರಬೇಕು ಎಂದು ಹೇಳುತ್ತಾ ಮಠದಿಂದ ಗಡಿಬಾಗದಲ್ಲಿರುವ ಕನ್ನಡ ಸಮಸ್ಯಗಳ ಕುರಿತು ಉಪನ್ಯಾಸ ಹಾಗೂ ಅಧ್ಯಯನ ಮಾಡಲು ದತ್ತಿ ಉಪನ್ಯಾಸಕ್ಕೆ 1 ಲಕ್ಷರೂ ನಿಡುವುದಾಗಿ ಘೋಷಿಸಿದರು ಬೆಳಗಾವಿಯಲ್ಲಿ ನಡೆದ ಬಸ್ ನಿರ್ವಾಹಕನ ಮೇಲಿನ ಹಲ್ಲೇ ಖಂಡಿಸಿದರು.  

ಸಾನಿದ್ಯ ವಹಿಸಿದ್ದ ನೀಡಸೋಸಿ ಜಗದ್ಗುರು  ಪಂಚಮ ಶಿವಲಿಂಗೇಶ್ವರ ಸ್ವಾಮಿಜಿ ಮಾತನಾಡಿ ಕನ್ನಡಕ್ಕಾಗಿ ನಮ್ಮನ್ನು ನಾವು ಅರ​‍್ಿಸಿಕೋಳ್ಳವು ಕಾರ್ಯಕ್ರಮ ಇದಾಗಿದೆ. ಚಿಂತನೆಗಳಿಂದ ಗಡಿನಾಡಿನಲ್ಲಿ ಕನ್ನಡ ಗಟ್ಟಿಗೋಳಿಸಬೇಕು ಇಂದು ಸಾಹಿತ್ಯ ಸಂಘಟನೆಯ ಅಗತ್ಯವಿದೆ. ಮಹಾರಾಷ್ಟ್ರದ ಮುತ್ನಾಳ ಹಳ್ಳಿಯಲ್ಲಿ 11 ವರ್ಷಗಳಿಂದ ಕನ್ನಡದಲ್ಲೆ ಕಾರ್ಯಕ್ರಮ ನಡೆಯುತ್ತಿದೆ, 200 ಕ್ಕೂ ಹೆಚ್ಚು ಜನ ಸ್ಮಶಾನದಲ್ಲಿ ಕುಳಿತು ಇಂದಿಗು ಪ್ರವಚನ ಕೆಳುತ್ತಿದ್ದಾರೆ ಎಂದರೂ.  

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ ರವರು ಮಾತನಾಡಿ  ಕನ್ನಡದ ಗಟ್ಟಿತನ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಮ್ಮಾರ ಅವರು ಹುಕ್ಕೇರಿ ತಾಲೂಕಿನ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಹುಣಸಿಕೋಳ್ಳಮಠದ ರಾಚೋಟಿ ಸ್ವಾಮೀಜಿ ಹತ್ತರಗಿ ಕಾರಿಮಠದ ಗುರುಸಿದ್ದೇಶ್ವರ ಸ್ವಾಮೀಜಿ ಹತ್ತರಗಿ ಹರಿ ಮಂದಿರದ ಡಾ. ಆನಂದ ಮಹಾರಾಜ ಗೋಸಾವಿ ಯಮಕನಮರಡಿ ಸಿದ್ದಬಸವ ದೇವರು ಸಾಹಿತಿ ಎಲ್ ವಿ ಪಾಟೀಲ, ಕಸಾಪ ಹುಕ್ಕೇರಿ ತಾಲ್ಲೂಕಾಧ್ಯಕ್ಷ ಪ್ರಕಾಶ ಅವಲಕ್ಕಿ ನಿಕಟಪೂರ್ವ ಸರ್ವಾಧ್ಯಕ್ಷ ಮಹಾವೀರ ಬಾಳೆಕಾಯಿ, ತಾಲೂಕು ದಂಢಾದಿಕಾರಿ ಮಂಜುಳಾ ನಾಯಿಕ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಯಮಕನಮರಡಿ ಸಿಪಿಐ ಜಾವೇದ ಮುಸಾಪುರಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕಿರಣ ರಜಪೂತ, ರವೀಂದ್ರ ಜಿಂಡ್ರಾಳಿ, ಡಾ. ಗುರುದೇವಿ ಹುಲೆಪ್ಪನವರಮಠ, ನಿವೃತ್ತ ಯೋಧ ಬಸವರಾಜ ಕುಂಭಾರ ಇತರರು ಉಪಸ್ಥಿತರಿದ್ದರು. ಈ ಸಂದರ್ಬದಲ್ಲಿ ಕವಿಗೋಷ್ಟಿಯಲ್ಲಿ 8 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು ಹಾಗೂ ಮಸ್ತಕದ ಮೇಲೆ ಪುಸ್ತಕ ಎಂಬ ಮೇರವಣಿಗೆ ಹಾಗೂ ಕುಂಬಮೆಳ ಆಯೋಜಿಸಿ ಜನರ ಮೆಚ್ಚುಗೆ ಪಡೆಯಿತು. ಇದೇ ಸಂದರ್ಬದಲ್ಲಿ ವಿವಿಧ ಪುಸ್ತಕಗಲನ್ನು ಬಿಡುಗಡೆ ಮಾಡಲಾಯಿತು.