ಅಹಮಾದಾಬಾದ್, ಫೆ 24, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೇನು ಕೆಲ ಗಂಟೆಗಳ ಅವಧಿಯಲ್ಲಿ ಇಲ್ಲಿಗೆ ಆಗಮಿಸಲಿದ್ದು, ಅವರನ್ನು ಸ್ವಾಗತಿಸಲು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ವಿಮಾನ ನಿಲ್ದಾಣದಲ್ಲಿ ಹಾಜರಿರಲಿದ್ದಾರೆ.35 ಗಂಟೆಗಳ ಪ್ರಯಾಣ ಮಾಡಿ ಬರುವ ಟ್ರಂಪ್ ಆತಿಥ್ಯಕ್ಕೆ ನಗರ ಪೂರ್ಣ ಸಜ್ಜಾಗಿದೆ. ಇನ್ನು ಎರಡು ದಿನಗಳ ಕಾಲ ರಾಷ್ಟ್ರಮಟ್ಟದ ಮಾಧ್ಯಮಗಳಲ್ಲಿ ಟ್ರಂಪ್ ಬೇಟಿಯದ್ದೆ ಮಾತು, ಸುದ್ದಿ.!! ಈವರೆಗೆ ಐವರು ಅಮೆರಿಕ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ್ದು . ಟ್ರಂಪ್ ಗೆ ಜಗತ್ತಿನ ಯಾವುದೇ ಭಾಗದಲ್ಲಿ ಸಿಗದ ಅದ್ದೂರಿಯ ಸ್ವಾಗತ ಮತ್ತು ವ್ಯವಸ್ಥಿತ ರೀತಿಯ ಆದರಾತಿಥ್ಯಗಳನ್ನು ನೀಡಲು ಭಾರತ ಸಜ್ಜಾಗಿದೆ.
ಟ್ರಂಪ್ ಮೋದಿಯವರನ್ನು ತನ್ನ ಆಪ್ತ ಸ್ನೇಹಿತ ಎಂದು ಹೇಳಿ ಕೊಂಡಿದ್ದಾರೆ ಈ ವರ್ಷವೆ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಲಾಭ ಪಡೆಯಲು ಟ್ರಂಪ್ ಇದನ್ನು ಬಳಕೆ ಮಾಡಿಕೊಳ್ಳುಲಾಗುತ್ತಿದೆ ಎಂಬ ಮಾತು ಸಹ ರಾಜಕೀಯವಾಗಿ ಕೇಳಿಬರುತ್ತಿವೆ. ಅಹ್ಮದಾಬಾದಿನಲ್ಲಿ ಮೂರು ತಾಸಿನ ಕಾರ್ಯಕ್ರಮಕ್ಕಾಗಿ ಗುಜರಾತ್ ಸರಕಾರ ಸುಮಾರು ನೂರು ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಎಲ್ಲ ಕಡೆ ಟ್ರಂಪ್ ಮೋದಿಯ ಅಳೆತ್ತರದ ಕೌಟೌಟ್ಗ ಳು ರಾರಾಜಿಸುತ್ತಿವೆ, ಇಡಿ ನಗರ ನವವಧುವಿನಂತೆ ಕಂಗೊಳಿಸುತ್ತಿದೆ, ಹಬ್ಬದ ವಾತವರಣ ಮನೆ ಮಾಡಿದೆ. ಪ್ರಧಾನಿ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಇಲ್ಲಿಯೇ ಬಿಡಾರ ಹೂಡಿ ಭದ್ರತಾ ಎರ್ಪಾಡುಗಳು ಬಗ್ಗೆ ಗಮನ ಹರಿಸಿದ್ದಾರೆ.
ಸಂಜೆ ಟ್ರಂಪ್ ದಂಪತಿ ಆಗ್ರಾದ ತಾಜ್ ಮಹಲ್ ಭೇಟಿ ನೀಡಿ ದೆಹಲಿಗೆ ಹಿಂತಿರುಗಲಿದ್ದಾರೆ .ನಾಳೆ ಬೆಳಿಗ್ಗೆ ರಾಷ್ಟ್ರಪತಿಭವನದಲ್ಲಿ ಅವರಿಗೆ ಭವ್ಯ ಮತ್ತು ಸಾಂಪ್ರದಾಯಿಕ ಸ್ವಾಗತ ನೀಡಲಾಗುತ್ತಿದೆ ರಾತ್ರಿ ಅವರ ಅವರ ಗೌರವಾರ್ಥ ಬೋಜನ ಕೂಟ ಏರ್ಪಡಿಸಿದ್ದು,. ಅನೇಕ ಗಣ್ಯರನ್ನು ಬೋಜನ ಕೂಟಕ್ಕೆ ಆಹ್ವಾನಿಸಲಾಗಿದೆ. ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಹ ಈ ಕೂಟದಲ್ಲಿ ಭಾಗಿಯಾಗಲಿದ್ದಾರೆ ಎಂದೂ ಹೇಳಲಾಗಿದೆ.