ಹೂಸ್ಟನ್ನಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಲಿರುವ ಟ್ರಂಪ್, ಮೋದಿ

 ವಾಷಿಂಗ್ಟನ್, ಸೆಪ್ಟೆಂಬರ್ 22    ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಟೆಕ್ಸಾಸ್ನ ಹೂಸ್ಟನ್ನಲ್ಲಿ ಭಾನುವಾರ ಬೆಂಬಲಿಗರ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. 

 "ಹೌಡಿ, ಮೋದಿ!" ಎಂಬ ಶೀರ್ಷಿಕೆಯ ಗಾಲಾ ಕಾರ್ಯಕ್ರಮವು ಎನ್ಆರ್ಜಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೋದಿ ಅವರು ಅಮೆರಿಕ ಭೇಟಿಯ ಭಾಗವಾಗಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 

 ಮೋದಿ ಶನಿವಾರ ಹೂಸ್ಟನ್ಗೆ ಪ್ರಯಾಣಿಸಿದ್ದು, ಸೆಪ್ಟೆಂಬರ್ 24 ರಂದು ನ್ಯೂಯಾರಕರ್್ನಲ್ಲಿ ಪ್ರಾರಂಭವಾಗುವ ವಿಶ್ವಸಂಸ್ಥೆ ಸಭೆಯಲ್ಲಿ ಭಾಗಿಯಾಗುತ್ತಾರೆ.   

ವಿಶ್ವಸಂಸ್ಥೆ ಸಭೆಯ ಬಳಿಕ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ಮತ್ತು ಅಮೆರಿಕದ ಸಂಸದರೊಂದಿಗೆ ಸಭೆ ಮತ್ತು ಭಾನುವಾರ 16 ಪ್ರಮುಖ ಅಮೆರಿಕ ಇಂಧನ ಕಂಪನಿಗಳ ಮುಖ್ಯ ಅಧಿಕಾರಿಗಳೊಂದಿಗೆ ದುಂಡು ಮೇಜಿನ ಸಭೆ ಮೋದಿ ಭೇಟಿ ಕಾರ್ಯಸೂಚಿಯಲ್ಲಿದೆ.