ವಾಷಿಂಗ್ಟನ್, ನ ೩೦ - ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಡಿಸೆಂಬರ್ ೫ ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಪ್ರತಿನಿಧಿಗಳನ್ನು ಶ್ವೇತಭವನಕ್ಕೆ ಸ್ವಾಗತಿಸಲಿದ್ದಾರೆ ಎಂದು ಶ್ವೇತಭವನ ದೃಢಪಡಿಸಿದೆ.
ಶುಕ್ರವಾರ, ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ ಮೂಲಗಳು, ಭೇಟಿಯ ಬಗ್ಗೆ ಸ್ಪುಟ್ನಿಕ್‌ಗೆ ಮಾಹಿತಿ ನೀಡಿವೆ.
"ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಪ್ರತಿನಿಧಿಗಳನ್ನು ಡಿಸೆಂಬರ್ ೫ ರಂದು ಶ್ವೇತಭವನಕ್ಕೆ ಸ್ವಾಗತಿಸಲಿದ್ದಾರೆ. ಈ ಭೇಟಿಯು ಯುನೈಟೆಡ್ ಸ್ಟೇಟ್ಸ್ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಡಿಸೆಂಬರ್‌ನಲ್ಲಿ ವಹಿಸುವುದರೊಂದಿಗೆ ಸೇರಿಕೊಳ್ಳುತ್ತದೆ" ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ
ಭೇಟಿಯ ಸಮಯದಲ್ಲಿ, ಅಂತರರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಗೆ ಸವಾಲುಗಳನ್ನು ಎದುರಿಸಲು ಶಾಶ್ವತ ಪ್ರತಿನಿಧಿಗಳು ಒಟ್ಟಾಗಿ ಕೆಲಸ ಮಾಡುವಂತೆ ಟ್ರಂಪ್ ಒತ್ತಾಯಿಸಲಿದ್ದಾರೆ ಎಂದು ಹೇಳಲಾಗಿದೆ.