ಲಿಬಿಯಾದಲ್ಲಿ ಸಂಘರ್ಷ ಅಂತ್ಯಕ್ಕೆ ತುರ್ತು ಕ್ರಮಗಳಿಗಾಗಿ ಟ್ರಂಪ್, ಈಜಿಪ್ಟ್ ಅಧ್ಯಕ್ಷ ಕರೆ-ಶ್ವೇತಭವನ

ವಾಷಿಂಗ್ಟನ್, ಡಿ 27 (ಸ್ಪುಟ್ನಿಕ್) ಲಿಬಿಯಾದಲ್ಲಿ ಅಂತಾರರಾಷ್ಟ್ರೀಯ ಶೋಷಣೆಯನ್ನು ಕೊನೆಗಾಣಿಸಲು ಆ ದೇಶದಲ್ಲಿನ ಸಂಘರ್ಷವನ್ನು ಪರಿಹರಿಸುವ ಗುರಿಯನ್ನು ಕೈಗೊಳ್ಳಲು ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಈಜಿಪ್ಟ್ ಅಧ್ಯಕ್ಷ ಪಾರ್ಟ್ ಅಬ್ಡೆಲ್ ಫತ್ತಾಹ್ ಎಲ್ ಸಿಸಿ ಕರೆ ನೀಡಿದ್ದಾರೆ ಎಂದು ಶ್ವೇತಭವನದ ಹೇಳಿಕೆ ತಿಳಿಸಿರುವುದಾಗಿ ವರದಿಯೊಂದು ಹೇಳಿದೆ.  ‘ಇಂದು, ಅಧ್ಯಕ್ಷ ಡೊನಾಲ್ಡ್  ಟ್ರಂಪ್ ಅವರು ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್ ಸಿಸಿ ಅವರೊಂದಿಗೆ ಮಾತನಾಡಿ,. ಪ್ರಮುಖ ಪ್ರಾದೇಶಿಕ ಮತ್ತು ದ್ವಿಪಕ್ಷೀಯ ವಿಷಯಗಳ ಬಗ್ಗೆ  ಚರ್ಚಿಸಿದ್ದಾರೆ.’ ಎಂದು ಹೇಳಿಕೆ ಗುರುವಾರ ತಿಳಿಸಿದೆ.  ‘ಲಿಬಿಯಾಕ್ಕೆ ಸಂಬಂಧಿಸಿದಂತೆ, ನಾಯಕರು ವಿದೇಶಿ ಶೋಷಣೆಯನ್ನು ತೀವ್ರವಾಗಿ ವಿರೋಧಿಸಿದ್ದು,  ಲಿಬಿಯನ್ನರು ವಿದೇಶಿ ಶಕ್ತಿಗಳ  ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುವ ಮೊದಲು  ಸಂಘರ್ಷವನ್ನು ಪರಿಹರಿಸಲು ಸಂಬಂಧಿಸಿದ ಕಡೆಯವರು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು.’ ಎಂದು ಉಭಯ ನಾಯಕರು ಕರೆ ನೀಡಿದ್ದಾರೆ