ಸಂಪ್ರದಾಯಕ್ಕಿಂತ ಸತ್ಯದ ಬದುಕು ಶ್ರೇಷ್ಠ: ಮಲ್ಲಿಕಾರ್ಜುನ ಕೋಳಿ

ಲೋಕದರ್ಶನ ವರದಿ

ಬೆಳಗಾವಿ 06:  ಕಾಯಕ ದಾಸೋಹದ ತತ್ವ ಸಿದ್ಧಾಂತಗಳ ಮೂಲಕ ಆದರ್ಶದ ಬದುಕನ್ನು  ಬಾಳುವದರೊಂದಿಗೆ ಸಹಜವಾದ ಬದುಕನ್ನು  ಕಲಿಸಿದವರು 12 ನೇ ಶತಮಾನದ ಶರಣರು. ಮೂಢನಂಬಿಕೆ, ಕಂದಾಚಾರಗಳನ್ನು ದಿಕ್ಕರಿಸಿ ಶರಣ ಸಮಾಜವನ್ನು ಕಟ್ಟಿದ ಶರಣರು ತತ್ವಾಧಾರಿತವಾದ ಆಚರಣೆಗಳನ್ನು  ಬದಿಗಿಟ್ಟು ಸಂಪ್ರದಾಯಕ್ಕಿಂತ  ಸತ್ಯ, ನಿಜವಾದ ಬದುಕು ಶ್ರೇಷ್ಠವೆಂದು  ಹೇಳಿದರು ಎಂದು ಹಿರೇಕೊಪ್ಪದ ಶಿಕ್ಷಕರಾದ ಮಲ್ಲಿಕಾರ್ಜುನ  ಕೋಳಿಯವರು ಇಂದಿಲ್ಲಿ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭೆ(ರಿ) ಜಿಲ್ಲಾ ಘಟಕ  ಹಾಗೂ ರಾಷ್ಟ್ರೀಯ ಬಸವಸೇನಾ ಜಿಲ್ಲಾ ಘಟಕ ಬೆಳಗಾವಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. 6 ಬುಧವಾರದಂದು ಸಾಯಂಕಾಲ 6 ಕ್ಕೆ ಮಹಾಂತೇಶನಗರದಲ್ಲಿರುವ ಮಹಾಂತ ಭವನದಲ್ಲಿ ಮಾಸಿಕ ಅನುಭಾವ ಸಂತ್ಸಂಗ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ 'ಶರಣರ ಜೀವನ ದರ್ಶನ' ವಿಷಯ ಕುರಿತಂತೆ ಉಪನ್ಯಾಸ ನೀಡುತ್ತ  ಮಲ್ಲಿಕಾಜರ್ುನ ಕೋಳಿಯವರು ಮೇಲಿನಂತೆ ಅಭಿಪ್ರಾಯ ಪಟ್ಟರು.

ಇದೇ ಸಂದರ್ಭದಲ್ಲಿ ನಾಗನೂರು ರುದ್ರಾಕ್ಷಿ ಮಠಕ್ಕೆ ಉತ್ತರಾಧಿಕಾರಿಯಾಗಿ ನಿಯೋಜನೆಗೊಂಡಿರುವ ಡಾ. ಸಾವಳಗೀಶ್ವರ ದೇವರು ಇವರನ್ನು ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಪೂಜ್ಯರು ಇಂತಹ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದುಕೊಂಡು ಬರುವುದು ಅವಶ್ಯವಾಗಿದೆ. ಯುವಕರಿಗೆ ಸತ್ ಸಂಪ್ರಾಯದ ಜೊತೆಗೆ ಶರಣರ ವಚನಗಳ ದರ್ಶನದ ಅವಶ್ಯಕತೆಯಿದೆ ಎಂದು ಹೇಳಿದರು. 

ರಾಜು ಪದ್ಮಣ್ಣವರ ಪ್ರಸ್ತಾವಿಕ ನುಡಿಗಳನ್ನಾಡಿದರು. ಶೋಭಾ ಹಾಗೂ ಚಂದ್ರಪ್ಪ ಅಂಗಡಿ ದಂಪತಿಗಳು ಷಟ್ಸ್ಥಳ ಧ್ವಜಾರೋಹಣವನ್ನು ನೆರವೇರಿಸಿಕೊಟ್ಟರು. ಅನಸೂಯಾ ಬಸಟ್ಟಿ ವಂದಿಸಿದರು. ಅಶೋಕ ಮಳಗಲಿ ನಿರೂಪಿಸಿದರು