ಸಾಮಾಜಿಕ ಕಾರ್ಯಕರ್ತೆ ಸುರೇಖಾ ಪಾಟೀಲಗೆ ಸನ್ಮಾನ
Tribute to social activist Surekha Patil
ಗೋಕಾಕ 16: ಬೆಳಗಾವಿಯ ಮಹಿಳಾ ಕಲ್ಯಾಣ ಸಂಸ್ಥೆಯ ಸಾಮಾಜಿಕ ಕಾರ್ಯಕರ್ತೆ ಸುರೇಖಾ ಪಾಟೀಲಗೆ ರೋಟರಿ ಕ್ಲಬ್ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಗೋಕಾಕವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಗೋಕಾಕ ನಗರದ ರಕ್ತಭಂಡಾರ ಸಭಾಭವನದಲ್ಲಿ ಆಯೋಜಿಸಿದ್ದ ರೋಟರಿ ಸಂಸ್ಥೆ ಹಾಗೂ ಇನ್ನರ ವ್ಹೀಲ್ ಸಂಸ್ಥೆಯ 2025-26 ನೇ ಸಾಲಿನ ಪದಾಧಿಕಾರಿಗಳ ಅಧಿಕಾರ ಹಸ್ತಂತರ ಸಮಾರಂಭದಲ್ಲಿ ಘೋಡಗೇರಿ ಗ್ರಾಮದ ಶಿವಾನಂದ ಮಠದ ಮಲ್ಲಯ್ಯ ಮಹಾಸ್ವಾಮಿಗಳು ಸನ್ಮಾನಿಸಿ ಮಾತನಾಡುತ್ತಾ ರೋಟರಿ ಸಂಸ್ಥೆಯಿಂದ ಅನೇಕ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ ಮನುಷ್ಯ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜವಾಬ್ದಾರಿ ಮರೆಯುತ್ತಿದ್ದು ಇದನ್ನು ನೆನಪಿಸುವ ಕಾರ್ಯವನ್ನು ರೋಟರಿ ಸಂಸ್ಥೆ ಮಾಡುತ್ತಿದೆ ಎಂದರು.
ವೈಯಕ್ತಿಕ ಬೇಕು ಬೇಡಿಕೆಗಳ ನಡುವೆ ಮಾನವನ ಸಾಮಾಜಿಕ ಜವಾಬ್ದಾರಿ, ಸಮಾಜಕ್ಕೆ ತಮ್ಮ ಜವಾಬ್ದಾರಿ ಏನು? ಎಂಬುದನ್ನು ರೋಟರಿ ಸಂಸ್ಥೆ ತೋರಿಸುವ ಕಾರ್ಯ ಮಾಡುತ್ತಿದೆ ಸೇವಾ ಅಂತಾ ಬಂದಾಗ ದೇಶದಲ್ಲಿ ದೊಡ್ಡ ಸೇವಾ ಸಂಸ್ಥೆ ಅಂದರೆ ರೋಟರಿ ಸಂಸ್ಥೆ. ಈ ಸಂಸ್ಥೆಯಲ್ಲಿ ಗೋಕಾಕ ನಗರದಲ್ಲಿ 1969 ರಿಂದ ನಿರಂತರ ಸಮಾಜ ಸೇವೆ ಮಾಡುತ್ತಿದೆ. ಸಾಮಾಜಿಕ ಶೈಕ್ಷಣಿಕವಾಗಿ ಹಿಂದುಳಿದದವರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಅಧಿಕಾರ ಹಸ್ತಾಂತರ ಅಧಿಕಾರಿ ರಾಜಶೇಖರ ತಾಲಗಾಂವ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ನೂತನ ಅಧ್ಯಕ್ಷರು ರೋಟರಿ ಮೌಲ್ಯ ಅರಿತು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪಣ ತೊಡಬೇಕು ರೋಟರಿಯಲ್ಲಿ ಗುರುತಿಸಿಕೊಂಡವರು ಸಮಾಜದೊಂದಿಗೆ ಬೆರೆತು ಜನರ ಕಷ್ಟಗಳಿಗೆ ಸ್ಪಂದಿಸಬೇಕು ಮತ್ತು ನೂತನ ಪದಾಧಿಕಾರಿಗಳು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಲಿ ಎಂದು ಹಾರೈಸಿದರು.
ಘೋಡಗೇರಿ ಮಲ್ಲಯ್ಯ ಮಹಾಸ್ವಾಮೀಜಿ ಸಾನ್ನಿದ್ಯಾ ವಹಿಸಿದ್ದರು ನಂತರ ಇನ್ನರ ವ್ಹಿಲ್ ಸಂಸ್ಥೆ ಅಧ್ಯಕ್ಷೆಯಾಗಿ ಅನುಪಾ ಕೌಶಿಕ, ಕಾರ್ಯದರ್ಶಿಯಾಗಿ ಗಿರಿಜಾ ಮುನ್ನೊಳಿಮಠ ಖಜಾಂಚಿಯಾಗಿ ಸುಮನ ಕಲ್ಯಾಣಶೆಟ್ಟಿ ಅವರಿಗೆ ಶಾಲಿನಿ ಚೌಗಲೆ ಅಧಿಕಾರ ಹಾಸ್ತಾಂತರಿಸಿದರು.
ಈ ವೇಳೆ ರೋಟರಿ ಸಹಾಯಕ ಪ್ರಾಂತಪಾಲ ಮೇಘರಾಜ ಪರಮಾರ, ನೂತನ ಅಧ್ಯಕ್ಷ ಗೀರೀಶ ಝಂವರ ಕಾರ್ಯದರ್ಶಿ ಬಸವರಾಜ ಹೂಳ್ಳೇರ, ಖಜಾಂಚಿ ವಿಶ್ವನಾಥ ಕಡಕೋಳ, ನಿಕಟಪೂರ್ವ ಅಧ್ಯಕ್ಷ ಡಾಽಽ ಸಿದ್ದಣ್ಣ ಕಮತ್, ಕಾರ್ಯದರ್ಶಿ ರಾಜಶೇಖರ ಮುನ್ನೊಳಿಮಠ, ಜಯಾ ಕಮತ್ ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 