ಸೇವಾ ನಿವೃತ್ತ ಮಹೇಶ ನಾಡಗೇರಿಯವರಿಗೆ ಸನ್ಮಾನ
Tribute to retired Mahesh Nadageri
ವಿಜಯಪುರ- ಜು 9, ವಿಜಯಪುರ ನಗರದಲ್ಲಿ ವಿವಿಧ ಸಹಕಾರಿ ಸಂಘಗಳ ಹಾಗೂ ಶಿಕ್ಷಣ ಸಂಸ್ಥೆಗಳ ಮತ್ತು ಸಮಸ್ತ ಅಭಿಮಾನಿ ಗೆಳೆಯರ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸೇವಾ ನಿವೃತ್ತಿ ಹೊಂದಿದ ಶ್ರೀ ಮಹೇಶ.ನಾಡಗೇರಿಯವರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾಗಿದ್ದ ಮಹೇಶ ನಾಡಗೇರಿ ಇವರ ಸನ್ಮಾನ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಕಾರ್ಯಕ್ರಮದ ಅಧ್ಕ್ಷಕ್ಷತೆ ವಹಿಸಿ ಮಾತನಾಡಿದರು.
ಸೇವಾ ನಿವೃತ್ತಿ ಹೊಂದಿದ ಶ್ರೀ ಮಹೇಶ ನಾಡಗೇರಿಯವರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಮಹೇಶ ನಾಡಗೇರಿ ಸನ್ಮಾನ ಸ್ವೀಕರಿಸಿ ಮಾತನಾಡಿ, 'ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ, ಮುಂದೆ ಮುಖ್ಯ ಶಿಕ್ಷಕನಾಗಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸಿದ ಸೇವಾ ಸಂತೃಪ್ತಿಯಿದೆ. ವೃತ್ತಿಗಳಲ್ಲಿ ಶಿಕ್ಷಕ ವೃತ್ತಿ ಎಲ್ಲಕ್ಕಿಂತ ಶ್ರೇಷ್ಠವಾದದ್ದು, ಆದ್ದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಶೈಕ್ಷಣಿಕ ಶ್ರೇಯೋಭಿವೃದ್ದಿಗೆ ಶ್ರಮಿಸಬೇಕು' ಎಂದು ಸಲಹೆ ನೀಡಿದರು.
ಶಾಲಾ ಶಿಕ್ಷಕಕರ ಸಿಬ್ಬಂದಿ ವರ್ಗದವರು ಮತ್ತು ಎಸ್‌ಡಿಎಂಸಿ ಅಧ್ಯಕ್ಷರು ಪರುಶುರಾಮ ನಾವಿ, ಎಸ್‌ಡಿಎಂಸಿ. ಸದಸ್ಯರಾದ ಶಿವಾನಂದ ಅಫಜಲಪೂರ. ಸದಸ್ಯರಾದ ಹಿರೇಮಠ, ಗಣ್ಯರು ಸನ್ಮಾನಿಸಿ ಅಭಿನಂದಿಸಿದರು. ಈ ವೇಳೆ, ಸುತ್ತಲೀನ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ಅಭಿಮಾನಿ ಗೆಳೆಯರ ಬಳಗವು ಸಹ ಸನ್ಮಾನಿಸಿ ಅಭಿನಂದಿಸಿದರು.
ಈ ಸೇವಾ ನಿವೃತ್ರಿ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕರು ಎಮ್.ಸಿ.ನಾಡಗೇರಿ, ಸರ್ ರವರಿಗೆ ಅಭಿನಂದಿಸಿ ಸನ್ಮಾನಿಸಲಾಯಿತು. ಶ್ರೀಮತಿ ಎಮ್. ಎನ್.ಮುಂಜಣ್ಣಿ, ಶ್ರೀಮತಿ ಝಡ್.ಎಸ್.ಆಸ್ಕಿ, ಶ್ರೀಮತಿ ಎ.ಐ. ಮಾಗಿ, ಶಬಾನ ಬೇಗಂ ಕೋತ್ವಾಲ್, ಪಿ.ಕೆ.ಖರಾತ ಸರ್, ಶಿಕ್ಷಕರು, ಹಿರಿಯ ಮಾತೆಯರಾದ ಗೊಳಸಂಗಿ ಮೆಡಮ್, ಸಹ ಶಿಕ್ಷಕಿಯರಾದ ಮಲ್ಲಮ್ಮ ಮೆಡಮ್ ಶಿಕ್ಷಕಿಯರು ಮತ್ತು ಶಾಲಾ ಸಿಬ್ಬಂದಿಯವರು ಎಸ್‌ಡಿಎಂಸಿ ಅಧ್ಯಕ್ಷರಾದ ಪರಶುರಾಮ. ನಾವಿ, ಎಸ್‌ಡಿಎಂಸಿ ಸದಸ್ಯರಾದ ಶಿವಾನಂದ. ಅಫಜಲಪೂರ, ಎಸ್‌ಡಿಎಂಸಿ ಸದಸ್ಯರಾದ ಹಿರೇಮಠರವರು, ಇನ್ನೀತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎಲ್ಲ ವರ್ಗದ ವಿದ್ಯಾರ್ಥಿ-ವಿದ್ಯಾರ್ಥಿನೀಯರು, ಪಾಲಕರು, ತಾಯಂದಿರರು, ಇನ್ನೀತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ಖರಾತ ಸರ್‌ರವರು ಸ್ವಾಗತಿಸಿದರು, ಮಾಗಿ ಮೇಡಂ ನಿರೂಪಿಸಿದರು, ಆಸ್ಕಿ ಮೇಡಂರವರು ವಂದಿಸಿದರು,
'ಸೇವಾ ನಿವೃತ್ತ ಶಿಕ್ಷಕ ಮಹೇಶ ನಾಡಗೇರಿಯವರು ಶಿಕ್ಷಕರು ಶಿಕ್ಷಣದಲ್ಲಿ ನಿವೃತ್ತಿಯಾದರೂ ಪ್ರವೃತ್ತಿಯಲ್ಲಿ ನಿವೃತ್ತಿಯಾಗಿಲ್ಲ, ಅವರ ಶಿಕ್ಷಕ ಸೇವಾವದಿ ಕಾರ್ಯವು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಿ ಎಷ್ಟೋ ವಿದ್ಯಾರ್ಥಿಗಳು ಉನ್ನತ ಹುದ್ದೆ ಪಡೆದುಕೊಂಡಿದ್ದಾರೆ ಅವರ ಕಾರ್ಯ ಶ್ಲಾಘನೀಯ' ಎಂದು ಶಿಕ್ಷಕರ ಶಾಲೆಯ ಸಿಬ್ಬಂದಿ ವರ್ಗದವರು ವಿಜಯಪುರ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 