ಸಾಮೂಹಿಕ ಉಪನಯನ ಸಾಧಕರಿಗೆ ಸನ್ಮಾನ
ಯಮಕನಮರಡಿ 07: ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಯಮಕನಮರಡಿ ಗ್ರಾಮದ ಪ್ರಸಿದ್ದ ಬಾಸಿಂಗ ತಯಾರಕರಾದ ಸೋಮಶೇಖರ ಹೊರಕೇರಿ ಅವರನ್ನು ದಿ. 6 ರಂದು ಮನವಳ್ಳಿ ಗ್ರಾಮದ ವಿಶ್ವಕರ್ಮ ಸಮುದದಾಯದವರು ಆಯೋಜಿಸಲಾಗಿದ್ದ ಕಾಳೀಕಾದೇವಿ ಯಾತ್ರಾ ಮಹೋತ್ಸವದ ಸಂದರ್ಬದಲ್ಲಿ ಸುಮಾರು 80 ವಿಶ್ವಕರ್ಮ ಹಾಗೂ ಇತರೆ ಒಟುಗಳಿಗೆ ಮುಂಜಿ ಸಂಸ್ಕಾರ ಸಮಾರಂಭ ಆಯೋಜಿಸಲಾಗಿತ್ತು .
ಈ ಕಾರ್ಯಕ್ರಮಕ್ಕೆ ಸೋಮಶೇಖರ ಹೋರಕೇರಿಯವರು 100 ಒಟುಗಳಿಗೆ ಮುತ್ತಿನ ಮಂಡವಳಿ ಉಚಿತವಾಗಿ ಕೋಡಮಾಡಿದರು. ಇವರು ಬಹಳಷ್ಟು ಸಾಮೂಹಿಕ ಲಗ್ನ ಸಮಾರಂಭಗಳಿಗೆ ಉಚಿತವಾಗಿ ದಂಡೆ ಬಾಸಿಂಗಗಳನ್ನು ನಿಡಿದ್ದು ಇಲ್ಲಿ ಸ್ಮರಿಸಬಹುದಾಗಿದೆ.
ಸನ್ಮಾನ ಕಾರ್ಯಕ್ರಮದಲ್ಲಿ ಕಾಳಿಕಾದೇವಿ ಟ್ರಸ್ಟ ಕಮೀಟಿ ಸರ್ವ ಸಧ್ಯಸರು ಹಾಗೂ ಸವದತ್ತಿ ಶಾಸಕರು ವಿಶ್ವಾಸ ವೈದ್ಯರು ಹಾಗೂ ಮಠಾದಿಶರು ಉಪಸ್ಥಿತರಿದ್ದು ಜನರಿಗೆ ಆಧ್ಯಾತ್ಮಿಕ ಪ್ರವಚನ ಹಾಗೂ ಸಮಾಜದ ಒಗ್ಗಟ್ಟು ಕುರಿತು ಮಾತನಾಡಿದರು ಒಗ್ಗಟ್ಟಿದ್ದರೆ ಸನಾತನ ದರ್ಮ ಉಳಿಯಲು ಅನೂಕೂಲ ವಾಗುತ್ತದೆ ಒಗ್ಗಟ್ಟು ಇಲ್ಲವಾದಲ್ಲಿ ನಮ್ಮನ್ನು ಬೇರೆ ಸಮಾಜದವರು ತುಳಿಯುತ್ತಾರೆ ಕಾರಣ ಎಲ್ಲ ಹಿಂದೂ ಸಮುದಾಯದವರು ಒಗ್ಗಟ್ಟಿನಿಂದ ಇರಬೇಕೆಂದು ಶ್ರಿಗಳು ಹೆಳಿದರು.