ಹಿರಿಯ ಮುಖ್ಯ ಗುರುಮಾತೆ ಆಲೂರಗೆ ಸನ್ಮಾನ
Tribute to Senior Chief Gurumaa Alur
ತಾಳಿಕೋಟಿ 10: ತಾಲೂಕಿನ ಶಿವಪೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಹಿರಿಯ ಮುಖ್ಯಗುರು ಮಾತೆಯಾಗಿ ನೇಮಕಗೊಂಡಿರುವ ಆರ್ ಬಿ ಆಲೂರ ಇವರಿಗೆ ದಲಿತ ಸಂಘಟನೆಗಳ ಮುಖಂಡರು ಶುಕ್ರವಾರ ಸನ್ಮಾನಿಸಿ ಗೌರವಿಸಿದರು.
ಗಡಿನಾಡು ಜೈ ಭೀಮ ವೇದಿಕೆ ರಾಜ್ಯ ಉಪಾಧ್ಯಕ್ಷ ಅಶೋಕ ಚಲವಾದಿ ಅವರು ಮಾತನಾಡಿ ತಾಳಿಕೋಟಿ ಎಂಪಿಎಸ್‌ನಲ್ಲಿ ಮುಖ್ಯ ಗುರುಮಾತೆಯಾಗಿ ಕ್ರಿಯಾಶೀಲತೆಯೊಂದಿಗೆ ಸೇವೆಯನ್ನು ಸಲ್ಲಿಸಿ ಇಲಾಖೆಗೆ ಒಳ್ಳೆಯ ಹೆಸರನ್ನು ತಂದುಕೊಟ್ಟ ಅನುಭವಿ ಶಿಕ್ಷಕಿ ಸಹೋದರಿ ಆಲೂರ ಅವರು ಈ ಶಾಲೆಗೆ ವರ್ಗಾವಣೆಗೊಂಡು ಬಂದಿರುವುದು ಸಂತಸದ ವಿಷಯ ಅವರ ಸೇವಾ ಅವಧಿಯಲ್ಲಿ ಈ ಶಾಲೆ ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸಲಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯಗುರುಮಾತೆ ಆಲೂರ ಅವರು ಈ ನಿಮ್ಮ ಸನ್ಮಾನ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ನಾನು ಇಲ್ಲಿ ಸೇವೆಯಲ್ಲಿ ಇರುವವರೆಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಇದಕ್ಕೆ ನನ್ನ ಸಹೋದ್ಯೋಗಿಗಳೊಂದಿಗೆ ನಿಮ್ಮ ಹಾಗೂ ಗ್ರಾಮದ ಎಲ್ಲ ಜನರ ಸಹಕಾರ ನನಗೆ ಬೇಕು ಎಂದರು.
ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುರೇಶ ವಾಲಿಕಾರ, ದಲಿತ ಮುಖಂಡರಾದ ಜುಮ್ಮಪ್ಪ ಗುಂಡುಕನಾಳ, ಹುಸೇನಪ್ಪ ಮೂಕಿಹಾಳ, ರಾಜು ಅಲ್ಲಪೂರ, ಮಂಜುನಾಥ ಪೂಜಾರಿ, ಡೂಗಪ್ಪ ಚಲವಾದಿ, ರವಿರಾಜ ಬಾಗೇವಾಡಿ, ಅಪ್ಪು ತಳವಾರ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 