ಹಿಂದೂಸ್ತಾನಿ ಸಂಗೀತ ಕಲಾವಿದೆ ಶಿವಾನಿ ಕವಠೇಕರ್‌ಗೆ ಸನ್ಮಾನ
Tribute to Hindustani music artist Shivani Kavthekar
ಹುಬ್ಬಳ್ಳಿ 26 : ಅಕ್ಷಯ ಕಾಲೋನಿಯ ಮಹಾಶರಣೆ ಗಂಗಾಂಬಿಕಾ ಬಳಗದವರು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀ ಶಕ್ತಿಯ ಪ್ರತಿಪಾದಕಿಯಾಗಿ, ಮಹಾನ್ ಸಾಧಕಿ, ಕನ್ನಡದ ್ರ್ರಥಮ ಕವಯಿತ್ರಿ, ವೈರಾಗ್ಯನಿಧಿ, ಶಿವಶರಣೆ ಅಕ್ಕಮಹಾದೇವಿಯ ಜಯಂತಿ ಹಾಗೂ ಜಗಜ್ಯೋತಿ, ವಿಶ್ವಗುರು, ಕರ್ನಾಟಕದ ಸಾಂಸ್ಕೃತಿಕ ನಾಯಕರಾದ ಗುರುಬಸವಣ್ಣನವರ 893ನೇ. ಜಯಂತೋತ್ಸವ ಮತ್ತು ವಚನ ಸಂಗೀತ್ ಕಾರ್ಯಕ್ರಮವನ್ನು ಆಯೋಜಿಸಿದ್ದರು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಜಗಜ್ಯೋತಿ ಬಸವೇಶ್ವರ ಅವರ ಭಾವಚಿತ್ರಕ್ಕೆ ಹಾಗೂ ವೈರಾಗ್ಯನಿಧಿ, ಶಿವಶರಣೆ ಅಕ್ಕಮಹಾದೇವಿಯ ಅವರ ಭಾವಚಿತ್ರಕ್ಕೆ ಪುಷ್ಾರೆ್ಪಣ ಮಾಡುವ ಮೂಲಕ ಗೌರವ ಅರೆ್ಣ ಮಾಡಿ, ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸಿದರು.
ವಚನ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿದ ಹಿಂದೂಸ್ತಾನಿ ಸಂಗೀತ್ ಕಲಾವಿದೆ, ಕೆಸಿಡಿಯ ವಿದ್ಯಾರ್ಥಿನಿ ಶಿವಾನಿ ಕವಠೇಕರ್ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ಅಭಿಮಾನದಿಂದ ಶಾಲು, ಮಾಲಾರೆ್ಣ ಮಾಡಿ ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಿದರು. ಅಭಿನಂದಿಸಿ, ಮುಂದಿನ ಶೈಕ್ಷಣಿಕ ಜೀವನ ಯಶಸ್ವಿಯಾಗಿ ನೆರವೇರಲಿ, ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಲಿ ಎಂದು ಶುಭ ಕೋರಿದರು. ಪ್ರತಿ ಸೋಮವಾರ ಸಂಜೆ ವಿದ್ಯಾನಗರದ ಅಕ್ಷಯ ಕಾಲನಿ 4ನೇ ಹಂತ ಬನ್ನಿ ಮಂಟಪ ಉದ್ಯಾನವನದಲ್ಲಿ ಶರಣರ ಮಹಾತ್ಮರ ಚಿಂತನೆಗಳನ್ನು ಹಂಚಿಕೊಳ್ಳುವ ಉದ್ಧೇಶದಿಂದ ಕೆಲವು ಹಿರಿಯ ಮಹಿಳೆಯರು ಪ್ರೊ ಸ್ನೇಹಾ ಭೂಸನೂರ ಅವರ ಜೋತೆ ಸೇರಿ ಕಟ್ಟಿಕೊಂಡ ಶರಣೆ ಗಂಗಾಂಬಿಕಾ ಬಳಗದ ವತಿಯಿಂದ ಮಹಾಮನೆ ವಿಶಿಷ್ಟ ಹಾಗೂ ವಿನೂತನ ಕಾರ್ಯಕ್ರಮ ಮಾಡುತ್ತಾ ಬಂದಿದ್ದಾರೆ. ಶರಣೆ ಗಂಗಾಂಬಿಕಾ ಬಳಗದವರು ವೈರಾಗ್ಯನಿಧಿ, ಶಿವಶರಣೆ ಅಕ್ಕಮಹಾದೇವಿಯ ಹಾಗೂ ಜಗಜ್ಯೋತಿ ಬಸವೇಶ್ವರ ಅವರ ಜಯಂತೋತ್ಸವ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.
ನಿವೃತ್ ಪ್ರಾದ್ಯಾಪಕರು, ಸಂಯೋಜಕರಾದ ಡಾ. ಸ್ನೇಹಾ ಭೂಸನೂರ, ಸಾಹಿತಿ ಕೆ ಶಾಂತಾ ಬಸವರಾಜ, ಡಾ. ಪ್ರಕಾಶ್ ಮುನ್ನೋಳಿ, ಸುಜಯ್ ಸುರೇಶ ಹೊರಕೇರಿ ಸೋಹನ ಸುರೇಶ ಹೊರಕೇರಿ, ಸಹನಾ ಸುರೇಶ ಹೊರಕೇರಿ, ಸುಪ್ರಿಯಾ ಸುರೇಶ ಹೊರಕೇರಿ, ವಿಜಯಲಕ್ಷ್ಮಿ ಗಂಗಲ್, ಶಾಂತಾ ಪಟ್ಟಣಶೆಟ್ಟಿ, ಶಶಿಕಲಾ ಕೊಡೇಕಲ್, ಉಮಾ ಹುಲಿಕಂತಿಮಠ, ಆಶಾ ಕವಳಿ, ರತ್ನಾ ಬಸಾಪುರ ,ಮಂಜುಳಾ ಪಾಟೀಲ, ಮಂಜುಳಾ ಹಿರೇಮಠ, ಗೀತಾ ಸಾಲಿಮಠ, ರವೀಂದ್ರ ದಂಪತಿ, ವಿರುಪಾಕ್ಷಪ್ಪ ಭೂಸನೂರ ,ಬಿಬಿ ಪಟ್ಟಣಶೆಟ್ಟಿ, ರೇಖಾ ನಾರಾ, ಸೀಮಾ ಮದನಭಾವಿ, ಮುಂತಾದವರು ಭಾಗವಹಿಸಿ, ಜಯಂತೋತ್ಸವ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದರು. ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಶರಣೆ ಗಂಗಾಂಬಿಕಾ ಬಳಗದವರು ಮಾಡುತ್ತಿರುವ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಟಿವಿ ಮೊಬೈಲ್ ಹಾವಳಿಯಲ್ಲಿ ಪ್ರತಿ ಸೋಮವಾರ ಸಂಜೆ ಸೇರಿ ಶರಣರ, ಮಹಾತ್ಮರ ವಿಚಾರ ಚಿಂತನ ಮಂಥನ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿ, ಶುಭ ಕೋರಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 