ಚೌಡಯ್ಯಾ ಸಮಾಜದಿಂದ ಪ್ರತಿಭಾ ಪುರಸ್ಕಾರ: ಸಾಧಕರಿಗೆ ಸನ್ಮಾನ

ಧಾರವಾಡ: ನಮ್ಮ ದೇಶದ ಕಲೆ ಸಾಹಿತ್ಯ, ಸಂಸ್ಕೃತಿ ಎಲ್ಲಾವೂ ದೇಶದ ಘನತೆ ಗೌರವವನ್ನು ಎತ್ತಿ ಹಿಡಿಯುವ ಕೆಲಸ ಈಗಿನ ಯುವ ಪೀಳಿಗೆಯ ಗಾಯಕ, ವಾದಕ, ಸಾಹಿತ್ಯಗಾರರಿಂದ ಹಾಗೂ ಸಾಧಕರಿಂದ ಸಾಧ್ಯ ಎಂದು ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಈ ಧನರಾಜ ಎಂದು ಮಾತನಾಡಿದ್ದರು. 

ನಗರದ ಜಿಲ್ಲಾಮಟ್ಟದ ಅಂಬಿಗರ ಚೌಡಯ್ಯಾ ಕ್ಷೇಮಾವೃದ್ಧಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರಿಗೆ ಸನ್ಮಾನ ಮಾಡಲಾಯಿತು. ಅದೇ ರೀತಿ ರಾಜ್ಯ ಮಟ್ಟ, ರಾಷ್ಟ್ರಮಟ್ಟದಲ್ಲಿ ತಂಡದ ಮೂಲಕ ಕಾರ್ಯಕ್ರಮಗಳನ್ನು ನೀಡಿ ಸಾಧನೆ ಮಾಡುತ್ತಿರುವ ಧಾರವಾಡದ ನಾದ ಝೇಂಕಾರ ಸಾಂಸ್ಕೃತಿಕ ತಂಡದ ಕಾರ್ಯದರ್ಶಿ  ಹಾಗೂ ತಬಲಾ ಕಲಾವಿದ ಯಮನಪ್ಪ ಜಾಲಗಾರ ಮತ್ತು ಶಹನಾಯಿ ವಾದಕ ಶ್ರೀಧರ ಭಜಂತ್ರಿ ಇವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಗಂಗಾಮತ ನೌಕರರ ಸಂಘದ ಅಧ್ಯಕ್ಷ ಶಂಕರಗೌಡರು, ಜಿಲ್ಲಾ ಗಂಗಾಮತ ಸಂಘದ ರಾಯಚೂರು, ರಂಗನಾಥ, ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಈ ಧನರಾಜ ನೇತ್ರ ತಜ್ಞರಾದ ಡಾ. ಹನುಮಂತಪ್ಪ, ಹನುಮಂತಪ್ಪ ಜಾಲಗಾರ ಗಿಣಿಗೇರಿ, ದಂತ ವೈದ್ಯ ಡಾ. ಶ್ರೀಧರ, ಪ್ರಾಂಶುಪಾಲ ಕಾಶಪ್ಪ ಹೆಡಿಗೆ ಮುದ್ರಾ, ತಾಲುಕಾ ಅಧ್ಯಕ್ಷ ವಾಯ್.ಎಸ್. ಮನಗುಳ್ಳಿ ಸಾಧಕರಿಗೆ ಸನ್ಮಾನಿಸಲಾಯಿತು.