ತ್ರಿಕೋನ ಮಹಿಳಾ ಟಿ-20: ಆಸೀಸ್ ಗೆ ಮಣಿದ ಭಾರತ

ಮೆಲ್ಬೋರ್ನ್, ಫೆ.12 :  ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ (66) ಅವರ ಅರ್ಧಶತಕದ  ಹೊರತಾಗಿಯೂ, ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಬುಧವಾರ ನಡೆದ ಟ್ರೈ-ವುಮೆನ್ ಟಿ 20 ಕ್ರಿಕೆಟ್ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ 11 ರನ್‌ಗಳ ಸೋಲು ಕಂಡಿದೆ.  

ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 155 ರನ್ ಕಲೆ ಹಾಕಿತು. ಗುರಿಯನ್ನು ಹಿಂಬಾಲಿಸಿದ ಭಾರತ 20 ಓವರ್ ಗಳಲ್ಲಿ 144 ರನ್‌ಗಳಿಗೆ ಆಲೌಟ್ ಆಗಿ ಸೋಲು ಕಂಡಿತು.  

ಮಂದನಾ ಹೊರತುಪಡಿಸಿ, ಭಾರತದ ಇತರ ಬ್ಯಾಟ್ಸ್‌ಮನ್‌ಗಳಿಗೆ ಕ್ರೀಸ್ ನಲ್ಲಿ ತಳವೂರಲು ಸಾಧ್ಯವಾಗಲಿಲ್ಲ. ಮಂದನಾ 37 ಎಸೆತಗಳಲ್ಲಿ 12 ಬೌಂಡರಿಗಳೊಂದಿಗೆ 66 ರನ್ ಗಳಿಸಿದರು. ಅವರು 15 ನೇ ಓವರ್‌ನಲ್ಲಿ 115 ರನ್ ಆಗಿದ್ದಾಗ ನಾಲ್ಕನೇ ವಿಕೆಟ್ ರೂಪದಲ್ಲಿ ಔಟ್ ಆದರು. ನಂತರದ ಬ್ಯಾಟ್ಸ್‌ಮನ್ ಎಡಗೈ ಸ್ಪಿನ್ನರ್ ಜಾಸ್ ಜಾನ್ಸನ್‌ಗೆ ಒಪ್ಪಿಸಿದರು. ಜೊನಾಸನ್ ನಾಲ್ಕು ಓವರ್‌ಗಳಲ್ಲಿ ಕೇವಲ 12 ರನ್‌ಗಳಿಗೆ ಐದು ವಿಕೆಟ್‌ ಪಡೆದು ಬೀಗಿದರು.  

ಆಸ್ಟ್ರೇಲಿಯಾದ ಇನ್ನಿಂಗ್ಸ್‌ನಲ್ಲಿ ಅಜೇಯ 71 ರನ್ ಗಳಿಸಿದ ಆರಂಭಿಕ ಬೆಥ್ ಮೂನಿ ಅವರು ತಂಡದ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು.  ಆಶ್ಲೀ ಗಾರ್ಡ್ನರ್, ಹಾಗೂ ಮೆಗ್ ಲ್ಯಾನಿಂಗ್ 26 ರನ್ ಸಿಡಿಸಿದರು.