ವೃಕ್ಷಗಳು ಮಾನವನ ಬದುಕಿಗೆ ಸಂಜೀವಿನಿ: ಕೋಣಿ
Trees are the lifeline for human life: Koni
ಗೋಕಾಕ 27: ಹಗಲಿನಲ್ಲಿ ಆಮ್ಲಜನಕವನ್ನು ಹೊರಸೂಸಿ ಮಾನವನ ಬದುಕಿಗೆ ಸಂಜೀವಿನಿಯಾಗಿರುವ ಗಿಡ ಮರಗಳನ್ನು ನೆಟ್ಟು ಪೋಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಬೆಟಗೇರಿಯ ರಾಜಕೀಯ ಮುಖಂಡ ಬಸವಂತ ಮಾಯಪ್ಪ ಕೋಣಿ ಹೇಳಿದರು.
ಅವರು ಬೆಟಗೇರಿ ಮರಡಿಶಿವಾಪೂರ ರಸ್ತೆ ಗಿರಿ, ಶಿಖರದಲ್ಲಿಯ ಶ್ರೀ ಕೃಷ್ಣಗುರುಕುಲದ ಜಾನಪದ ಕಲಿಕಾ ಕೇಂದ್ರದ ಆವರಣದಲ್ಲಿ ಡಾ. ಎಸ್.ಬಿ. ದಂಡಿನ ಶಿಕ್ಷಣ ಮತ್ತು ಸಂಶೋದನಾ ಪ್ರತಿಷ್ಠಾನ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ ಮತ್ತು ಶ್ರೀ ಸರವೇಶ್ವರ ಪ್ರಸಾದಿತ ಶಿವ-ಕಾಳಿಕಾಂಬಾ ಸಾಂಸ್ಕೃತಿಕ ಸಂಘ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರನೆ ನಿಮಿತ್ಯ ಹಮ್ಮಿಕೊಂಡಿದ್ದ ವನ ಮಹೋತ್ಸವದಲ್ಲಿ ಹಣ್ಣಿನ ಸಸಿ ನೆಟ್ಟು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ, ಪ್ರತಿಷ್ಠಾನದ ಸದಸ್ಯ ಪ್ರೊ. ಚಂದ್ರಶೇಖರ ಅಕ್ಕಿ ಮಾತನಾಡಿ ಸಸ್ಯ ಸಂಕುಲವನ್ನು ಬೆಳೆಸಿ ಆರೋಗ್ಯಕರ ಪರಿಸರ ಕಾಪಾಡಿಕೊಳ್ಳುವುದು ಪ್ರಾಜ್ಞರ ಕರ್ತವ್ಯವಾಗಿದೆ. ಜೀವ ಸಂಕುಲದಂತೆ ಸಸ್ಯ ಸಂಕುಲವನ್ನು ನಾವೆಲ್ಲಾ ಉಳಿಸಿ ಬೆಳೆಸೋನವೆಂದರು.
ಜಾನಪದ ರಂಗ ಕಲಾವಿದ ಈಶ್ವರಚಂದ್ರ ಬೆಟಗೇರಿಯವರ ಕಲಾ ಬದುಕು ಕೃತಿ ಬಿಡುಗಡೆಗೊಳಿಸಿ ಜಾನಪದ ಸಾಹಿತಿ, ವಿಶ್ರಾಂತ ಪ್ರಾಧ್ಯಾಪಕ ಡಾ. ಸಿ.ಕೆ ನಾವಲಗಿ ಸ್ತ್ರೀ ಹಾಗೂ ಪುರುಷ ಪಾತ್ರಗಳಲ್ಲಿ ಅಭಿನಯಿಸುತ್ತಾ ಬರಹಗಾರರಾಗಿಯು ಗುರುತಿಸಿಕೊಂಡದ್ದು ಅಭಿಮಾನದ ಸಂಗತಿ ಎಂದು ಮಾತನಾಡಿದರು.
ಮಕ್ಕಳ ಸಾಹಿತಿ ಡಾ. ಲಕ್ಷ್ಮಣ ಚೌರಿ, ಸಾಹಿತಿ, ಕಲಾವಿದ ಜಯಾನಂದ ಮಾದರ, ಸರಕಾರಿ ಪ್ರೌಢಶಾಲೆಯ ಮುಖ್ಯೊಪಾಧ್ಯಾಯ ರಮೇಶ ಅಳಗುಂಡಿ, ಮಾಜಿ ಗ್ರಾ.ಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಮಲ್ಲಿಕಾರ್ಜುನ ಪನದಿ, ರಾಮಚಂದ್ರ ಬಡಿಗೇರ,ಬಸವರಾಜ ಪಣದಿ,ಪುಂಡಲೀಕ ಹುಣಚ್ಯಾಳ,ಶಕುಂತಲಾ ಅನೀಲ ತೋರೆ,ಮಂಗಲಾದೇವಿ ಬೆಟಗೇರಿ.ಗ್ರಾಮದ ಇತರ ಹಿರಿಯರು ಉಪಸ್ಥಿತರಿದ್ದರು.
ಕಲಾವಿದ ಈಶ್ವರಚಂದ್ರ ಬೆಟಗೇರಿ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 