ಯರಗೊಪ್ಪ ಗ್ರಾಮದಲ್ಲಿ ಗಿಡ ನಾಟಿ ಮಾಡುವ ಕಾರ್ಯಕ್ರಮ
Tree planting program in Yaragoppa village
ಬೈಲಹೊಂಗಲ 20 : ತಾಲೂಕಿನ ಯರಗೊಪ್ಪ ಗ್ರಾಮದಲ್ಲಿ 2025-26ನೇ ಸಾಲಿನಲ್ಲಿ ಯರಗೊಪ್ಪ ಸರ್ಕಾರಿ ಕೆರೆಯ ಹೂಳೆತ್ತಲಾದ ಕೆರೆ ಅಂಗಳದಲ್ಲಿ ಗಿಡ ನಾಟಿ ಮಾಡುವ ಕಾರ್ಯಕ್ರಮವನ್ನು ಧರ್ಮಸ್ಥಳ ಯೋಜನೆಯಿಂದ ಹಮ್ಮಿಕೊಳ್ಳಲಾಯಿತು. ಧಾರವಾಡ ಪ್ರಾದೇಶಿಕ ನಿರ್ದೆಶಕರಾದ ದಯಾಶೀಲ ಅವರು ಉದ್ಘಾಟನೆ ಮಾಡಿ ಕೆರೆ ಸುತ್ತಲೂ ಗಿಡ ನಾಟಿ ಮಾಡಿ ಕಾಪಾಡಿ ಬೆಳೆಸಿ ಪರಿಸರವನ್ನು ಮುಂದಿನ ಪೀಳಿಗೆ ಅನುಕೂಲಕರವಾಗುತ್ತದೆ ಎಂದರು.
ಬಸವರಾಜ ಹಲ್ಕಿ ಕೆರೆ ಸಮಿತಿ ಅಧ್ಯಕ್ಷರು ಶಿವಾನಂದ ಎಕ್ಕುಂಡಿ, ಶಾಲಾ ಶಿಕ್ಷಕರು ಧರ್ಮಸ್ಥಳ ಯೋಜನೆಯಿಂದ ಅನೇಕ ಸಾಮಾಜಿಕ ಕಾರ್ಯಕ್ರಮಗಳಿದ್ದು ಅವರು ಮಾಡಿಕೊಟ್ಟಿರುವ ಈಕೆರೆಯನ್ನು ಸ್ವಚ್ಛತೆ ಕಾಪಾಡಿಕೊಂಡು ಗಿಡಗಳ ರಕ್ಷಣೆ ಪಾಲನೆ ಮಾಡೋಣ ಎಂದರು. ಒಕ್ಕೂಟ ಅಧ್ಯಕ್ಷರು ಕೆರೆ ಸಮಿತಿ ಎಲ್ಲಾ ಸದಸ್ಯರು ರೈತ ಬಾಂಧವರು ಯೋಜನಾಧಿಕಾರಿಗಳು ವಲಯದ ಮೇಲ್ವಿಚಾರಕರು ಕೃಷಿ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಸಂಘದ ಸರ್ವ ಸದಸ್ಯರು ಶಾಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 