ದಿವ್ಯಾಂಗ ಮಕ್ಕಳನ್ನು ?ಪ್ರೀತಿ, ಗೌರವದಿಂದ' ಕಾಣಿ: ಶಂಕರ್ ಕುಂಬಾರ್
ಬೆಳಗಾವಿ: ದಿವ್ಯಾಂಗ ಮಕ್ಕಳು ಮುಗ್ಧರು, ಅವರನ್ನು ಪ್ರೀತಿ, ಗೌರವದಿಂದ ಕಾಣಬೇಕು. ಈ ಮಕ್ಕಳಲ್ಲಿ ವಿಶೇಷ ಶಕ್ತಿ, ಸಾಮರ್ಥ್ಯ, ಜ್ಞಾನ ಇರುತ್ತದೆ. ಅವರನ್ನು ಸಮಾಜದಲ್ಲಿ ಪ್ರೋತ್ಸಾಹಿಸಿ ಬೆಳೆಸುತ್ತಿರುವ ಆರಾಧನೆ ಶಾಲೆಯ ಎಲ್ಲ ಶಿಕ್ಷಕ ವೃಂದದ ಸೇವೆ ಮೆಚ್ಚುವಂತದ್ದು ಎಂದು ನಿವೃತ್ತ ಸೈನಿಕ, ಶಿಕ್ಷಕರಾದ ಶಂಕರ್ ಕುಂಬಾರ್ ಹೇಳಿದರು. ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನದಿಂದ ಹಿಂದುವಾಡಿ ಕಿಲ್ಲಾದಲ್ಲಿರುವ ಆರಾಧನಾ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ವಿಶ್ವ ದಿವ್ಯಾಂಗ ಚೇತನರ ದಿನಾಚರಣೆಯನ್ನು ಆಚರಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಿಜವಾಗಲೂ ಶಾಲೆಗೆ ಹ್ಯಾಪಿ ಸ್ಕೂಲ್ ಎಂದು ಹೆಸರು ನೀಡಿದ್ದು ತುಂಬಾ ಸಮಾಜಸವಾಗಿದೆ ಮತ್ತು ಈ ಎರಡು ಸಂಸ್ಥೆಗಳು ಇಂತಹ ಸಮಾಜಮುಖಿ ಕಾರ್ಯವನ್ನು ಮಾಡುತ್ತಿರುವುದು ಒಂದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಆರಾಧನಾ ಬುದ್ದಿ ಮಾಂದ್ಯ ಶಾಲೆಯ ಪ್ರಧಾನ ಗುರುಗಳಾದ ಗಜಾನನ್ ಸುತಾರ್ ಉತ್ತಮ ಶಿಕ್ಷಕ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇವರು ಈ ಎರಡು ಸಂಸ್ಥೆಯು ಮೊಟ್ಟ ಮೊದಲಿಗೆ ನಮ್ಮ ಶಾಲೆಗೆ ಬಂದು ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸಿದ ಸಂದರ್ಭವನ್ನು ಮರೆಯುವುದಿಲ್ಲ ಎಂದು ಹೇಳಿದರು. ನಮ್ಮ ಶಾಲೆಯ ಪ್ರಗತಿಯು ಕೂಡ ನಿಮ್ಮ ಎರಡು ಸಂಸ್ಥೆಗಳ ಸಹಕಾರದಿಂದ ಆಗಿದೆ ಸರಕಾರವು ಮಾಡಬೇಕಾದ ಕೆಲಸವನ್ನು ಈ ಎರಡು ಸಂಸ್ಥೆಗಳು ಮಾಡುತ್ತಿವೆ. ನಿಮ್ಮ ಈ ಸಹಾಯ ಸಹಕಾರವನ್ನು ನಾವು ಎಂದೂ ಮರೆಯುವುದಿಲ್ಲ ಎಂದು ಹೆಮ್ಮೆಯಿಂದ ಹೇಳಿದರು. ನಿವೃತ್ತ ಸೈನಿಕರಾದ ಶಂಕರ್ ಕುಂಬಾರ್ ಅವರಿಗೆ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಗಜಾನನ್ ಸುತಾರವರಿಗೆ ನಮ್ಮ ಎರಡು ಸಂಸ್ಥೆಗಳಿಂದ ಸನ್ಮಾನಿಸಲಾಯಿತು. ಮಂಡಲದ ಅಧ್ಯಕ್ಷರಾದ ಮಂಗಲ್ ಮಠ ಸ್ವಾಗತಿಸಿದರು. ಕಾರ್ಯದರ್ಶಿ ಭಾರತಿ ರತ್ನಪ್ಗೊಳ ಪ್ರಸ್ತಾವಿಕವಾಗಿ ಮಾತನಾಡಿದರು. ಗೀತಾ ಎಮ್ಮಿ, ಶೋಭಾ ಕಾಡನ್ನವರ್ ಪ್ರಾರ್ಥನಾ ಗೀತೆಯನ್ನು ಹಾಡಿದರು. ಮಮತಾ ಆಂಟಿ ನ ಮತ್ತು ರತ್ನಶ್ರೀ ಗುಡೆರ್ ಅತಿಥಿಗಳ ಪರಿಚಯವನ್ನು ಮಾಡಿದರು. ಆಶಾ ನೀಲಗಿ ವಂದಿಸಿದರು. ಅಕ್ಷತಾ ಪಾಟೀಲ್ ನಿರೂಪಿಸಿದರು. ಮಂಡಳದ ಎಲ್ಲ ಸದಸ್ಯರು ಹಾಗೂ ಮಾಜಿ ಯೋಧರು ಆರ್ ಬಿ ಬನಶಂಕರಿ ಇತರರು ಇದ್ದರು.