ಅನ್ವೇಷಣಾ ಮನೋಭಾವ ಬೆಳೆಸಲು ಸಂಚಾರಿ ತಾರಾಲಯ ಪೂರಕ

ಮಹಾಲಿಂಗಪುರ 13: ವಿದ್ಯಾರ್ಥಿಗಳು ವಿಜ್ಞಾನ ವಿಷಯದ ಆಳವಾದ ಜ್ಞಾನದಿಂದ  ಬ್ರಹ್ಮಾಂಡದ ಅಧ್ಯಯನ ಮಾಡಲು ಮಾತ್ರ ಸಾಧ್ಯ. ಇನ್ನೂ ಅನೇಕ ವಿಷಯಗಳು ಬ್ರಹ್ಮಾಂಡದಲ್ಲಿ ಅನ್ವೇಷಣೆ ಆಗದೆ ಹಾಗೆಯೇ ಉಳಿದು ಹೋಗಿವೆ ಅವುಗಳ ಅನ್ವೇಷಣೆಗೆ ವಿದ್ಯಾಥರ್ಿಗಳಿಗೆ ಪೂರಕ ಜ್ಞಾನ ಅಗತ್ಯ ಆ ನಿಟ್ಟಿನಲ್ಲಿ ಈ ಸಂಚಾರಿ ತಾರಾಲಯ ಉಪಯುಕ್ತ ಎಂದು ಮುಖ್ಯೋಪಾಧ್ಯಾಯ ಕೆ. ಎಂ. ವಿಜಾಪುರ ತಿಳಿಸಿದರು. 

ಸಮೀಪದ ಮದಭಾವಿ  ಸರಕಾರಿ ಪ್ರೌಢ ಶಾಲೆಯಲ್ಲಿ ಬೆಂಗಳೂರು ನೆಹರೂ ತಾರಾಲಯ ಪ್ರೌಢ ವಿಭಾಗದ 200  ಮತ್ತು ಪ್ರಾಥಮಿಕ ವಿಭಾಗದ 130  ವಿದ್ಯಾರ್ಥಿಗಳಿಗೆ  ಸಂಚಾರಿ ತಾರಾಲಯದಲ್ಲಿ ವಿಶ್ವದ ಬ್ರಹ್ಮಾಂಡದ ಉದಯ. ವಿಶ್ವದ ದರ್ಶನ ಹೀಗೆ ಅನೇಕ ವಿಸ್ಮಯಗಳ  ಸಾಕ್ಷಾತ್ಕಾರ ಮಾಡಿದರು. ತಾರಾಲಯದ ಮುಖ್ಯಸ್ಥ ಆನಂದ ಬೇಹೂರ ಅನೇಕ ವಿಷಯಗಳ ಬಗ್ಗೆ ವಿವರಣೆ ನೀಡಿದರು. 

 ಶಿಕ್ಷಕರಾದ ಡಾ. ಶಶಿಧರ ಕುಂಬಾರ, ಬಿ.ವಿ.ಯರಗಟ್ಟಿಕರ, ಆರ್.ಎಚ್.ಗಾಳಿ, ಐ.ಎಸ್.ಪಾಟೀಲ, ಎಲ್. ಎಂ. ಕುರುಬೇಟ, ಎಸ್. ಎಲ್.ಕುಂಬಾರ, ಸಿ. ಆರ್. ಕುದರಿಮನಿ, ಶಿಕ್ಷಕಿ ಹುಣಶ್ಯಾಳ ಇತರರು ಇದ್ದರು.