ಪ್ರವಾಸ ಕಥನಗಳು ಜ್ಞಾನವನ್ನು ವೃದ್ಧಿಸುತ್ತವೆ: ಡಾ. ಬಸು ಬೇವಿನಗಿಡದ

ಪ್ರವಾಸ ಕಥನಗಳು ಜ್ಞಾನವನ್ನು ವೃದ್ಧಿಸುತ್ತವೆ:  ಡಾ. ಬಸು ಬೇವಿನಗಿಡದ Travel stories increase knowledge: Dr. Basu Bevinagidad

ಧಾರವಾಡ. 06 ; ಪ್ರವಾಸ ಕಥನಗಳು ಕನ್ನಡ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಒಂದು ಪ್ರಕಾರವಾಗಿದ್ದು, ಅವುಗಳನ್ನು ಓದುವುದರ ಮೂಲಕ ಓದುಗ ಜ್ಞಾನರ್ಜನೆ ಪಡೆದು ಆನಂದವನ್ನು ಹೊಂದಬಹುದು. ಪ್ರವಾಸ ಕಥನಗಳು ಯಾವುದೇ ಒಂದು ದೇಶದ ವೈವಿಧ್ಯಮಯ ಮಾಹಿತಿಯನ್ನು ನೀಡುವ ಮೂಲಕ ಆ ದೇಶದ ಪರಿಚಯ ಮಾಡಿಕೊಡುವ ಸಾಹಿತ್ಯಪ್ರಕಾರ." ಎಂದು ಹಿರಿಯ ಸಾಹಿತಿ ಮತ್ತು ಧಾರವಾಡ ಆಕಾಶವಾಣಿ ಕೇಂದ್ರದ ಹಿಂದಿನ ನಿರ್ದೇಶಕರಾದ ಡಾ. ಬಸು ಬೇವಿನಗಿಡದ ಹೇಳಿದರು.  

ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ನಡೆದ ಎಚ್‌. ಪಿ. ಶೆಲ್ಲಿಕೇರಿಯವರ “ಮೇಪಲ್ ನಾಡಿನಲ್ಲಿ" ಕೃತಿಯನ್ನು ಲೋಕಾರೆ​‍್ಣ ಮಾಡುತ್ತ ಹೇಳಿದರು.   

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಕೆ.ಎ.ಎಸ್‌. ಅಧಿಕಾರಿ ಮತ್ತು ಸಾಹಿತಿಗಳಾದ ವೆಂಕಟೇಶ ಮಾಚಕನೂರ ಅವರು ಮಾತನಾಡುತ್ತ " ಶೆಲ್ಲಿಕೇರಿಯವರ ಪ್ರವಾಸ ಕಥನ ತನ್ನ ವಿಶಿಷ್ಟ  ಶೈಲಿಯಿಂದ ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿದೆ.ಕೆನಡಾ ದೇಶದ ಕುರಿತಾಗಿ ಬಂದಂತಹ ಒಂದು ಅಪರೂಪದ ಮತ್ತು ಮೊದಲ ಎನ್ನಬಹುದಾದ ಪ್ರವಾಸ ಕಥನ " ಎಂದರು. ಕೃತಿ ಅವಲೋಕನ ಮಾಡಿ ಮಾತನಾಡಿದ ಹಿರಿಯ ಲೇಖಕ ಶ್ರೀನಿವಾಸ ವಾಡಪ್ಪಿ  ಅವರು  "ಶೆಲ್ಲಿಕೇರಿಯವರ ಈ ಕೃತಿಯು ಕೆನಡಾ ದೇಶವನ್ನು ಸಮಗ್ರವಾಗಿ ಚಿತ್ರಿಸಿದ ಕೃತಿಯಾಗಿ ಓದುಗರನ್ನು ಸೆಳೆಯುತ್ತದೆ. ಅಲ್ಲದೆ ಅವರು ತುಂಬಾ ಶೃದ್ದೆ ಮತ್ತು ಶ್ರಮ ವಹಿಸಿ ಬರೆದಂಥ ಈ ಕೃತಿಯು ತನ್ನ ನಿರೂಪಣೆ ಮತ್ತು ಅಪರೂಪದ ಘಟನೆಗಳ ಉಲ್ಲೇಖಗಳಿಂದ ನಿರಾಯಾಸವಾಗಿ ಓದಿಸಿಕೊಂಡು ಹೋಗುತ್ತದೆ" ಎಂದರು. ಲೇಖಕ ಎಚ್‌. ಪಿ. ಶೆಲ್ಲಿಕೇರಿಯವರು ಸಂದರ್ಭೋಚಿತವಾಗಿ ಮಾತನಾಡಿದರು. 

ಗಾಯತ್ರಿ ಮತ್ತು ತಂಡದವರು ಪ್ರಾರ್ಥನೆ ಮಾಡಿದರು. ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ಪ್ರಾಸ್ತಾವಿಕ ಮತ್ತು ಸ್ವಾಗತ ನುಡಿಗಳನ್ನಾಡಿದರು. ಮನೋಹರ ಬ್ಯಾಹಟ್ಟಿ ಸಂದೇಶ ವಾಚಿಸಿದರು. ಬಾಗಲಕೋಟ ಜಿಲ್ಲಾ ಕ. ಸಾ. ಪ. ದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ವಂದನಾರೆ​‍್ಣ ಮಾಡಿದರು. ಉಳ್ಳಿಗೇರಿಯವರು ಕಾರ್ಯಕ್ರಮ ನಿರೂಪಿಸಿದರು. ವೇದಿಕೆ ಮೇಲೆ ಪ್ರಕಾಶಕಿ ಜಯಶ್ರೀ ಶೆಲ್ಲಿಕೇರಿ, ಶಂಕರ ಕುಂಬಿ ಉಪಸ್ಥಿತರಿದ್ದರು.