ಬಿ.ಎಸ್‌.ವೈ ಅಭಿಮಾನೋತ್ಸವಕ್ಕೆ ಸಾರಿಗೆ ವ್ಯವಸ್ಥೆ : ಭರತ ಬೊಮ್ಮಾಯಿ

ಬಿ.ಎಸ್‌.ವೈ ಅಭಿಮಾನೋತ್ಸವಕ್ಕೆ ಸಾರಿಗೆ ವ್ಯವಸ್ಥೆ : ಭರತ ಬೊಮ್ಮಾಯಿ Transportation arrangements for BSY fanfare: Bharat Bommai

ಶಿಗ್ಗಾವಿ 07 : ಚಿತ್ರದುರ್ಗದಲ್ಲಿ ಮೇ 9ರಂದು ಆಯೋಜಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರ​‍್ಪ ಅವರ ಅಭಿಮಾನೋತ್ಸವಕ್ಕೆ ಶಿಗ್ಗಾವಿ, ಸವಣೂರ ಪಟ್ಟಣ ಸೇರಿದಂತೆ ಕ್ಷೇತ್ರದ ಆರು ಜಿಪಂ ಕ್ಷೇತ್ರಕ್ಕೆ ತಲಾ ಒಂದು ಬಸ್ ವ್ಯವಸ್ಥೆ ಮಾಡಲಾಗಿದೆ. ವೈಯಕ್ತಿಕವಾಗಿಯೂ ವಾಹನ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಅಭಿಮಾನೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಭರತ ಬೊಮ್ಮಾಯಿ ಮನವಿ ಮಾಡಿದರು.  ಪಟ್ಟಣದ ಬಸವರಾಜ ಬೊಮ್ಮಾಯಿ ಅವರ ಸ್ವಗೃಹ ಸಭಾಭವನದಲ್ಲಿ ಏರಿ​‍್ಡಸಿದ್ದ ಅಭಿಮಾನೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಕೋವಿಡ್ ವೇಳೆ ಯಡಿಯೂರ​‍್ಪ, ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಆಡಳಿತದಲ್ಲಿ ಪರಿಹಾರದ ಮಾರ್ಗೋಪಾಯ ಕಲ್ಪಿಸಿ ಅಪಾರ ಜನರ ಜೀವ ಕಾಪಾಡಿದ್ದಾರೆ.

ಅಂದು ಗೃಹ ಸಚಿವರ ಮನೆಯನ್ನೇ ಕೋವಿಡ್ ಸೆಂಟರ್ ಮಾಡಿದ್ದರು ಎಂದು ಸ್ಮರಿಸಿದರು.  ಭರತ ಬೊಮ್ಮಾಯಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ತಮ್ಮಬಿ.ಎಸ್‌. ಯಡಿಯೂರ​‍್ಪ ಅವರು ಅಧಿಕಾರದಲ್ಲಿದ್ದಾಗ ಶಿಗ್ಗಾವಿ, ಸವಣೂರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೀಡಿದ ಅಭೂತಪೂರ್ವ ಕೊಡುಗೆಗಳು ಇಂದಿಗೂ ಸ್ಮರಣೀಯವಾಗಿವೆ ಎಂದರು. ಬಿಜೆಪಿ ಅಧ್ಯಕ್ಷ ವಿಶ್ವನಾಥ ಹರವಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಬಾಣದ, ಜಿಪಂ ಮಾಜಿ ಸದಸ್ಯ ಡಾ. ಮಲ್ಲೇಶಪ್ಪ ಹರಿಜನ ಮಾತನಾಡಿದರು. ಸವಣೂರ ತಾಲೂಕು ಅಧ್ಯಕ್ಷ ಶಿವಪುತ್ರ​‍್ಪ ಕಲಕೋಟಿ, ತಿಪ್ಪಣ್ಣ ಸಾತಣ್ಣವರ, ಎಂ.ಎನ್‌. ಹೊನಕೇರಿ, ಧರೆಯಪ್ಪಗೌಡ ಪಾಟೀಲ, ರುದ್ರಗೌಡ್ರ ಪಾಟೀಲ, ಎಂ.ಎಸ್‌. ಪಾಟೀಲ, ಮೋಹನ ಕಲಾಲ, ಉಷಾ ಬಿಳಿಕುದರಿ ಇತರರಿದ್ದರು