ಸಾರಿಗೆ ಸಚಿವರ ರಸ್ತೆ ಸುರಕ್ಷತೆ ಪ್ರಶಸ್ತಿ

ಹಾವೇರಿ04:   ವಾಯವ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆಯು ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿನ ಜೀವನಾಡಿಯಾಗಿದ್ದು, 'ಪ್ರಯಾಣಿಕರೇ ಪ್ರಭುಗಳು' ಎಂಬ ಧ್ಯೇಯ ವಾಕ್ಯದೊಂದಿಗೆ ಸಾರ್ವಜನಿಕ ಪ್ರಯಾಣಿಕರಿಗೆ ಸುರಕ್ಷಿತ, ಸುಖಕರ ಹಾಗೂ ಮಿತವ್ಯಯಕರ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. 

       ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಭಾರತ ಸಕರ್ಾರ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಂಘ ಮತ್ತು ಫೆಡರೇಶನ ಆಫ್ ಇಂಡಿಯನ್ ಚೇಂಬಸರ್್ ಆಫ್ ಕಾಮಸರ್್ ಮತ್ತು ಇಂಡಸ್ಟ್ರಿ ಸಹಯೋಗದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರಾದ ನಿತಿನ ಗಡ್ಕರಿ ರವರು ನವದೆಹಲಿಯಲ್ಲಿ ಉದ್ಘಾಟಿಸಿದ 3ಡಿಜ  ಇಜಣಠಟಿ ಠಜಿ ಟಿಣಜಡಿಟಿಚಿಣಠಟಿಚಿಟ ಅಠಟಿಜಿಜಡಿಜಟಿಛಿಜ & ಇಥಛಣಠಟಿ ಠಟಿ ಕಣಛಟಛಿ ಖಿಡಿಚಿಟಿಠಿಠಡಿಣ ಟಿಟಿಠತಚಿಣಠಟಿ-2020 (ಅಇಕಖಿ-2020)  ಕಾರ್ಯಕ್ರಮದಲ್ಲಿ 4001 ದಿಂದ 7500 ವಾಹನ ಬಲ ಹೊಂದಿರುವ ಭಾರತದ ಇತರ ಎಲ್ಲಾ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಹೋಲಿಸಿದಲ್ಲಿ 2018-19 ನೇ ಸಾಲಿನ ಕನಿಷ್ಠ ಅಪಘಾತ ಪ್ರಮಾಣಕ್ಕಾಗಿ ವಾಯವ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆಗೆ "ಸಾರಿಗೆ ಸಚಿವರ ರಸ್ತೆ ಸುರಕ್ಷತೆ ಪ್ರಶಸ್ತಿ-2018-19" ರಾಷ್ಟ್ರಮಟ್ಟದ ಪ್ರತಿಷ್ಟಿತ ಪ್ರಶಸ್ತಿ ಹಾಗೂ ರೂ.1,50,000/- ನಗದು ಪುರಸ್ಕಾರ ಲಭಿಸಿರುತ್ತದೆ.

 ಸಂಸ್ಥೆಯ ವ್ಯವಸ್ಥಾಪಕ ನಿದರ್ೇಶಕರಾದ ಪಿ. ರಾಜೇಂದ್ರ ಚೋಳನ ಇವರ ಪರವಾಗಿ ಮುಖ್ಯ ಸಂಚಾರ ವ್ಯವಸ್ಥಾಪಕ ವಿ. ಹೆಚ್. ಸಂತೋಷಕುಮಾರ ಹಾಗೂ ಮುಖ್ಯ ಅಂಕಿ ಸಂಖ್ಯಾಧಿಕಾರಿ ಜಯಕರ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದ್ದಾರೆ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.