ಅಡ್ಡಾದಿಡ್ಡಿ ಕಾರು ಚಾಲನೆ: ಬಿಜೆಪಿ ಸಂಸದೆ ರೂಪಾ ಗಂಗೂಲಿ ಪುತ್ರನ ಬಂಧನ

ಕೋಲ್ಕತಾ, ಆಗಸ್ಟ್ 16      ಅಡ್ಡಾದಿಡ್ಡಿ ಮತ್ತು ಅಜಾಗರೂಕವಾಗಿ ಕಾರು ಚಾಲನೆ ಮಾಡಿ  ಕೊಲ್ಕತ್ತಾ ಗಾಲ್ಫ್ ಕ್ಲಬ್  ಗೋಡೆಗೆ  ಹಾನಿ ಮಾಡಿದ  ಕಾರಣಕ್ಕಾಗಿ ಬಿಜೆಪಿ ಸಂಸದೆ  ರೂಪಾ ಗಂಗೂಲಿ ಅವರ ಪುತ್ರ ಆಕಾಶ್ ಮುಖಜರ್ಿ ಅವರನ್ನು ಪೊಲೀಸರು  ಬಂಧಿಸಿದ್ದಾರೆ  

ಕಳೆದ  15 ರಂದು ರಾತ್ರಿ  ಬಿಜೆಪಿ ನಾಯಕನ ಮನೆಯ ಬಳಿ ಕಾರು ಅಪಘಾತ ಸಂಭವಿಸಿದ ನಂತರ ಚಾಂಪಿಯನ್ ಓರ್ಸ್ಮನ್ ಆಗಿರುವ ಆಕಾಶ್ ಮುಖರ್ಜಿ ಅವರನ್ನು ಜಾದವ್ಪುರ ಪೊಲೀಸ್ ಠಾಣೆಯ ಪೊಲೀಸರು  ಬಂಧಿಸಿದ್ದಾರೆ.  

279, 427 ಮತ್ತು ಸೆಕ್ಷನ್ ಯಡಿಯಲ್ಲಿ  ಪ್ರಕರಣ ದಾಖಲಿಸಲಾಗಿದೆ.  ಇಂದು ಅವರನ್ನು ಅಲಿಪೋರ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಪ್ರಕರಣದಲ್ಲಿ ಕಾನೂನು ತನ್ನದೇ ಕ್ರಮ ಜರುಗಿಸಲಿದೆ  ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯೆ   ರೂಪಾ ಗಂಗೂಲಿ ತಿಳಿಸಿ  ಮಗ ಬುಧವಾರ ರಾತ್ರಿ ಮನೆಗೆ ಹಿಂದಿರುಗುತ್ತಿದ್ದಾಗ ಕಾರು ಅಪಘಾತ ಸಂಭವಿಸಿದೆ ಎಂಬ ಸಂಗತಿಯನ್ನು ಪೊಲೀಸರು ತಿಳಿಸಿರುವುದನ್ನೂ ಅವರು  ಖಚಿತಪಡಿಸಿದ್ದಾರೆ . 

ರಾಯಲ್ ಕೋಲ್ಕತ್ತಾ ಗಾಲ್ಫ್ ಕೋರ್ಸ್  ಗೋಡೆಗೆ ಕಾರು ಅಪ್ಪಳಿಸಿದ್ದರಿಂದ  ಕಾರಿನ ಮುಂಭಾಗಕ್ಕೆ  ಹಾನಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ . ಆರೋಪಿ ಮದ್ಯದ ಪ್ರಭಾವದಲ್ಲಿದ್ದರೆಯೇ ಎಂದು ಪರೀಕ್ಷಿಸಲೂ ವೈದ್ಯಕೀಯ ಪರೀಕ್ಷೆ  ಸಹ ನಡೆಸಲಾಗಿದೆ ಎಂದು  ಪೊಲೀಸರು ತಿಳಿಸಿದ್ದಾರೆ.