ರಾಣೇಬೆನ್ನೂರು08: ಹೆಸ್ಕಾಂನವರ ನಿರ್ಲಕ್ಷ್ಯತನದಿಂದಾಗಿ ಮುಷ್ಟೂರು ಗ್ರಾಮದಲ್ಲಿ ಮತ್ತು ಅಕ್ಕ-ಪಕ್ಕದ ಗ್ರಾಮಾಂತರದಲ್ಲಿ ವಿದ್ಯುತ್ ಕಡಿತದಿಂದ ನೀರಿನ ಅಭಾವ ಮತ್ತು ಹಿಟ್ಟಿನ ಗಿರಣಿ ಬಂದ್ ನಿಂದ ನಾಗರೀಕರು, ಮಹಿಳೆಯರು ಪರದಾಡುವಂತಾಯಿತು. ಇದಕ್ಕೆ ಸಂಬಂಧಿಸಿದಂತೆ ಗ್ರಾಮದ ಮಹಿಳೆಯರು ಖಾಲಿ ಕೊಡಗಳನ್ನಿಟ್ಟು ಪ್ರತಿಭಟನೆಗೆ ಮುಂದಾಗಿದ್ದರು. ಈ ಸಂಧರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ಕನರ್ಾಟಕ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದಶರ್ಿ ರವೀಂದ್ರಗೌಡ ಪಾಟೀಲ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿಯ ಮೂಲಕ ಸಂಪಕರ್ಿಸಿ ಕ್ರಮಕ್ಕೆ ಆಗ್ರಹಿಸಿದ್ದರು.
ಸಂಬಂಧಿಸಿದ ಅಧಿಕಾರಿಗಳು ಗ್ರಾಮಕ್ಕೆ ಧಾವಿಸಿ ಅಲ್ಲಿ ಸಂಪೂರ್ಣ ಸುಟ್ಟು ಹೋಗಿದ್ದ ಟ್ರಾಸ್ಪಾಮರ್ ಬದಲಾಯಿಸಿ ಕೂಡಲೇ ವಿದ್ಯುತ್ ಸರಬರಾಜು ಮಾಡುವಲ್ಲಿ ತಮ್ಮ ಕರ್ತವ್ಯ ಧಕ್ಷತೆಯನ್ನು ಮೆರೆದಿರುವುದಕ್ಕೆ ಗ್ರಾಮಸ್ಥರು ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ರವೀಂದ್ರಗೌಡ ಪಾಟೀಲ ಅವರು, ಅಧಿಕಾರಿಗಳ ಇಂತಹ ಸ್ಪಂಧನೆ ಇಂದ ಗ್ರಾಮಾಂತರ ನಾಗರೀಕರು ಸಂತೋಷಗೊಂಡಿದ್ದಾರೆ. ಅದಕ್ಕಾಗಿ ಈ ಎಲ್ಲ ಅಧಿಕಾರಿಗಳಿಗೆ ಹಲಗೇರಿ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳ ಸಮ್ಮುಕದಲ್ಲಿ ಹೆಸ್ಕಾಂನ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು ಎಂದು ಮಾಧ್ಯಮಕ್ಕೆ ತಿಳಿಸಿದರು.
ಈ ಸಂದರ್ಭದಲ್ಲಿ ಎಇಇ ಪ್ರಕಾಶ ಬುಳ್ಳಾಪುರ, ಎಸ್.ಓ.ಹಲಗೇರಿ, ಕೆ.ಹರೀಶ್, ಹಲಗೇರಿ ಠಾಣಾ ಪೊಲೀಸ್ ಅಧಿಕಾರಿಗಳಾದ ಎಎಸ್ಐ ಎಸ್.ಡಿ.ಕುರಿಯವರ, ಅಂಜನಪ್ಪ ನಾಗೇನಹಳ್ಳಿ, ಕೆ.ಆರ್.ಸಂತೋಷ್ ಮೊದಲಾದವರನ್ನು ಸನ್ಮಾನಿಸಿದರು.
ಜಮಾಲ್ಸಾಬ್ ಸೇತಸನದಿ, ಗೌರಮ್ಮ ತೋಟಗಂಟಿ, ಹರಿಹರಗೌಡ ಪಾಟೀಲ, ಅಸ್ಮತ ಭಾನು ರಾಣೇಬೆನ್ನೂರು, ಶೋಭಾ ಉದಗಟ್ಟಿ, ಮಲ್ಕಪ್ಪ ಲಿಂಗದಹಳ್ಳಿ ಸೇರಿದಂತೆ ಗ್ರಾಮದ ಅನೇಕ ಗಣ್ಯರು ಉಪಸ್ಥಿತರಿದ್ದರು.