ಬಾಗಲಕೋಟೆ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಜಿ.ಪಂ ಸಭಾಭವನದಲ್ಲಿ ಪ್ಯಾನಲ್ ನ್ಯಾಯವಾದಿಗಳಿಗೆ ತರಬೇತಿ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅನಿಲ ಕಟ್ಟಿ ಅವರು ಪ್ಯಾನಲ್ ವಕೀಲರ ಸೇವೆ ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ನೂರಕ್ಕೆ ನೂರರಷ್ಟು ಯಶಸ್ವಿಯಾಗಿಲ್ಲ. ಪ್ಯಾನಲ್ ವಕೀಲರುಗಳು ಪ್ರತಿನಿತ್ಯ ಬದಲಾಗುತ್ತಿರುವ ಕಾನೂನುಗಳ ಬಗ್ಗೆ ತಿಳಿದುಕೊಂಡು ಅಪ್ಡೆಟ್ ಆಗಬೇಕು. ಓದುವ ಹವ್ಯಾಸವನ್ನು ಪ್ರತಿಯೊಬ್ಬ ವಕೀಲರು ರೂಡಿಸಿಕೊಳ್ಳಬೇಕು. ಪ್ರಸ್ತುತ ದಿನಮಾನಗಳಿಗೆ ತಕ್ಕಂತೆ ಪ್ಯಾನಲ್ ವಕೀಲರು ಧಕ್ಷತೆ, ಚಾಣಾಕ್ಷತೆಯಿಂದ ಕಾರ್ಯ ನಿರ್ವಹಿಸಲು ತಿಳಿಸಿದರು.
ಜಿಲ್ಲಾ ವಕೀಲರ ಸಂಘ ಅದ್ಯಕ್ಷ ಸಿ.ಬಿ.ಪಾಟೀಲ ಮಾತನಾಡಿ ಸಮಾಜದಲ್ಲಿ ಅತ್ಯಂತ ಕಡು ಬಡತನದ ಪರಿಸ್ಥಿತಿಯಲ್ಲಿ ಜನರು ನ್ಯಾಯಾಲಯಕ್ಕೆ ಬರಲು ಆಗುತ್ತಿಲ್ಲ. ಕೇವಲ ಪ್ಯಾನಲ್ ವಕೀಲರಗಳಿಂದ ಮಾತ್ರ ಅವರಿಗೆ ನ್ಯಾಯ ದೊರೆಯಲು ಸಾದ್ಯ, ಸಮಾಜಸೇವೆ ಮಾಡುವ ಜವಾಬ್ದಾರಿ ನಿಮ್ಮದ್ದಾಗಿದ್ದು ,ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಆಯ್.ಎಸ್.ಅಂಟಿನ ಮಾತನಾಡಿ ಉಚಿತ ಕಾನೂನು ನೆರವು ನಿಮ್ಮದಾಗಿದ್ದು, ಕಾನೂನಿನ ಸಂಪೂರ್ಣ ಅರಿವು ಜ್ಞಾನ ತಮ್ಮಿಲ್ಲರಬೇಕು. ಪ್ಯಾನಲ್ ವಕೀಲರು ಕಾರ್ಯನಿರ್ವಹಿಸುವಾಗ ಕಮರ್ಷಿಯಲ್ ಆಸಕ್ತಿ ಹೊಂದಿರಬಾರದು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಬಿ ಹೂಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ತರಬೇತಿ ಕಾರ್ಯಕ್ರಮದಲ್ಲಿ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಸಂತೋಷ ಸಿ.ಬಿ. ಪ್ರಧಾನ ಹಿರಿಯ ದಿವಾನಿ ನ್ಯಾಯಾಧೀಶ ಮತ್ತು ಸಿ.ಜೆ.ಎಮ್ ಪ್ರಕಾಶ ವಿ.ದೀವಾನಿ ನ್ಯಾಯಾಧೀಶರು ಹಾಗೂ ಜೆ.ಎಮ್.ಎಪ್.ಸಿ ಪದ್ಮಾಕರ್ ವನಕುದರಿ, ಹಿರಿಯ ನ್ಯಾಯವಾದಿ ಎಸ್.ಕೆ.ಯಡಹಳ್ಳಿ, ಎ.ಸ್.ಸವಣೂರ ಮತ್ತೀತರರು ಉಪಸ್ಥಿತರಿದ್ದರು. ಸೂಮನ ಚಿತ್ತರಗಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರದಲ್ಲಿ ಆಯಾ ತಾಲೂಕಿನಿಂದ 96 ಪ್ಯಾನಲ್ ವಕೀಲರು ಪಾಲ್ಗೊಂಡಿದ್ದರು