ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಯೋಜನೆಯಡಿ ರೈತರಿಗೆ ತರಬೇತಿ ಕಾರ್ಯಕ್ರಮ
Training program for farmers under the scheme for conservation and promotion of indigenous varieties
ಬೆಳಗಾವಿ 19 : ಐಸಿಎಆರ್ ಹಿಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಹಾಗೂ ಕೃಷಿ ಇಲಾಖೆ, ಬೆಳಗಾವಿ ಇವರ ಸಂಯುಕ್ತ ಸಹಯೋಗದಲ್ಲಿ 2025ಹಿ26ನೇ ಸಾಲಿನ “ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಯೋಜನೆ” ಅಡಿಯಲ್ಲಿ “ದೇಸಿ ತಳಿ ಕೃಷಿ ಪದ್ಧತಿ” ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಿನ ರೈತರಿಗೆ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಜಂಟಿ ಕೃಷಿ ನಿರ್ದೇಶಕರಾದ ಹೆಚ್.ಡಿ. ಕೋಳೇಕರ ಉದ್ಘಾಟಿಸಿದರು. ಪ್ರತಿಭಾವಂತ ರೈತರ ಸಲಹೆ ಹಾಗೂ ಬೇಡಿಕೆಯ ಮೇರೆಗೆ ಕೃಷಿ ಇಲಾಖೆಯು ಈ ಯೋಜನೆಯನ್ನು ಪ್ರಾರಂಭಿಸಿದ್ದು, ಇದರ ಭಾಗವಾಗಿ ಕೃಷಿ ವಿಜ್ಞಾನಕೇಂದ್ರ, ಮತ್ತಿಕೊಪ್ಪ ಆವರಣದಲ್ಲಿ ಆಯೋಜಿಸಲಾದ ತರಬೇತಿಯಲ್ಲಿ ದೇಸಿ ತಳಿಗಳ ಸಂರಕ್ಷಣೆ ಮತ್ತು ಪೋಷಕಾಂಶಗಳ ಮಹತ್ವ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು ಎಂದು ಅವರು ತಿಳಿಸಿದರು.
ದೇಸಿ ತಳಿಗಳು ಪೋಷಕಾಂಶಗಳ ಆಗರವಾಗಿದ್ದು ಓಷಧೀಯ ಗುಣ ಧರ್ಮಗಳನ್ನು ಹೊಂದಿವೆ. ಕಡಿಮೆ ತೇವಾಂಶ ಮತ್ತುಕಡಿಮೆ ಫಲವತ್ತತೆಯಲ್ಲಿಯೂ ಉತ್ತಮವಾಗಿ ಬೆಳೆಯುವ ಸಾಮರ್ಥ್ಯ ಇವುಗಳ ವಿಶೇಷತೆ. ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಇವುಗಳ ಮಹತ್ವ ಇನ್ನಷ್ಟು ಹೆಚ್ಚಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿ ಮಾತನಾಡಿ, ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಕೃಷಿ ನಮ್ಮ ಆರ್ಥಿಕತೆಯ ಬೆನ್ನೆಲುಬು ಎಂದು ಹೇಳಿದರು. ಹಿಂದಿನ ಕಾಲದಲ್ಲಿ ರೈತರು ಸ್ಥಳೀಯ ಜಾತಿಯ ಬೀಜಗಳನ್ನು ಬಳಸಿ ರಾಗಿ, ಜೋಳ, ನವಣೆ, ಸಜ್ಜೆ ಮತ್ತು ಸ್ಥಳೀಯ ಅಕ್ಕಿ ಜಾತಿಗಳನ್ನು ಬೆಳೆದಿದ್ದರು. ಇವು ಕಡಿಮೆ ನೀರಿನಲ್ಲಿಯೇ ಬೆಳೆಯುವ ಹಾಗೂ ಬರಹಿಅತಿಮಳೆಯಂತಹ ಪರಿಸ್ಥಿತಿಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಜೋಳ ಬೆಳೆಯ ಪ್ರಧಾನ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಎನ್. ಜಿ. ಹನಮರಹಟ್ಟಿ ಜೋಳದ ಸಾಂಪ್ರದಾಯಿಕ ತಳಿಗಳ ಸಂರಕ್ಷಣೆ ಮತ್ತು ಉಪಯೋಗಗಳ ಕುರಿತು ವಿವರಿಸಿದರು.
ಎಣ್ಣೆಕಾಳು ತಳಿ ಸಂಶೋಧಕ ಹಾಗೂ ಮುಖ್ಯಸ್ಥರಾದ ಡಾ. ಬಿ. ಎನ್. ಮೋಟಗಿ ವಿವಿಧ ಬೆಳೆಗಳ ಸಾಂಪ್ರದಾಯಿಕ ತಳಿಗಳ ವಿಶ್ಲೇಷಣೆ ಮತ್ತು ಬೀಜೋತ್ಪಾದನಾ ತಾಂತ್ರಿಕತೆಗಳ ಕುರಿತು ಮಾಹಿತಿ ನೀಡಿದರು. ಭತ್ತದ ದೇಸಿ ತಳಿಗಳ ಸಂರಕ್ಷಕರಾದ ಡಾ. ಶಂಕರ ಲಂಗಟಿ ದೇಸಿ ಭತ್ತದ ತಳಿಗಳು ಹಾಗೂ ಅವುಗಳ ವೈಶಿಷ್ಟ್ಯಗಳ ಕುರಿತು ಚರ್ಚಿಸಿದರು. ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಸಿ.ಐ. ಹೂಗಾರ ಸಾಂಪ್ರದಾಯಿಕ ದೇಸಿ ತಳಿಗಳ ಸಂರಕ್ಷಣೆಯಲ್ಲಿ ಇಲಾಖೆಯ ಕೈಗೊಳ್ಳುತ್ತಿರುವ ಕ್ರಮಗಳನ್ನು ರೈತರಿಗೆ ವಿವರಿಸಿದರು. ವಿಜ್ಞಾನಿ ಜಿ. ಬಿ. ವಿಶ್ವನಾಥ ಕಾರ್ಯಕ್ರಮದ ಕುರಿತು ಮಾತನಾಡಿದರು. ಎಸ್.ಎಂ. ವಾರದ ಸ್ವಾಗತಿಸಿದರು ಹಾಗೂ ಶಂಕರಗೌಡ ಪಾಟೀಲ ವಂದಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ನೂರಕ್ಕೂ ಅಧಿಕ ರೈತರು ಭಾಗವಹಿಸಿ ತರಬೇತಿಯಿಂದ ಪ್ರಯೋಜನ ಪಡೆದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 