ನಬಾರ್ಡ ವತಿಯಿಂದ ತರಬೇತಿ ಕಾರ್ಯಕ್ರಮ

ಬೆಳಗಾವಿ: 03 : ಯಾದವಾಡ ದಾಲ್ಮೀಯ ಸಿಮೆಂಟ ಕಾಖರ್ಾನೆಯ ದಾಲ್ಮೀಯಾ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಡಿ, ದೀಕ್ಷಾ ಕೌಶಲ್ಯ ಕೇಂದ್ರದಲ್ಲಿ ಸೌಂದರ್ಯ ಥೆರಪಿ ಹಾಗೂ ಹೊಲಿಗೆ ಯಂತ್ರ ಆಯೋಜಕ ತರಬೇತಿಗಳನ್ನು ಪಡೆದ ವಿದ್ಯಾಥರ್ಿ/ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ನಬಾರ್ಡನ ಂಉಒ ಆಗಿರುವ ಶ್ರೀಮತಿ. ಉಮಾ ಭಾರತಿ ಅವರು ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಸೌಂದರ್ಯ ಹಾಗೂ ಹೊಲಿಗೆ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. 

ನಿರುದ್ಯೋಗಿಗಳು ಅಂತಹ ಅವಕಾಶಗಳನ್ನು ಬಳಸಿಕೊಂಡು ಉದ್ಯಮ ಆರಂಭಿಸಬೇಕು. ನಿರುದ್ಯೋಗಿಗಳಿಗೆ ನಬಾರ್ಡ ವತಿಯಿಂದ ದೀಕ್ಷಾ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ನಿರಂತರ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು ಹಾಗೂ ದಾಲ್ಮೀಯಾ ಭಾರತ ಫೌಂಡೇಶನ ಜೊತೆಗೆ ಕೈ ಜೋಡಿಸಲು ತುಂಬಾ ಸಂತೋಷವಾಗುತ್ತದೆ. ನಬಾರ್ಡ ವತಿಯಿಂದ ದಾಲ್ಮೀಯಾ ಸಹಯೋಗದಲ್ಲಿ ಇನ್ನೂ ಹೆಚ್ಚಿನ ವಿದ್ಯಾಥರ್ಿಗಳಿಗೆ ತರಬೇತಿ ನೀಡಲು ಯೋಜನೆಗಳನ್ನು ರೂಪಿಸುತ್ತಿದ್ದೇವೆ ಎಂದರು.

ಈ ತರಬೇತಿಯ ಪ್ರಯೋಜನ ಪಡೆದುಕೊಂಡ ಶಿಬಿರಾಥರ್ಿಗಳು ತಮ್ಮ ಅನುಭವ ಹಾಗೂ ತಮಗೆ ಆದ ಅನುಕೂಲತೆಗಳನ್ನು ಹಂಚಿಕೊಂಡರು. 

ದಾಲ್ಮೀಯ ಭಾರತ ಫೌಂಡೇಶನ ಕಾರ್ಯಕ್ರಮದ ಅಧಿಕಾರಿಯಾದಂತಹ ಶ್ರೀಯುತ ಚೇತನ ವಾಘಮೋರೆ ಅವರು ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾಥರ್ಿಗಳಿಗೆ ಶುಭಾಶಯ ಕೋರಿದರು. ತರಬೇತಿಯ ಸದುಪಯೋಗ ಪಡೆದುಕೊಂಡ ವಿದ್ಯಾಥರ್ಿಗಳು ಬೇರೆಯವರಿಗೆ ಮಾದರಿಯಾಗಬೇಕು ಹಾಗೂ ಇನ್ನೂ ಹೆಚ್ಚಿನ ಗ್ರಾಮೀಣ ವಿದ್ಯಾಥರ್ಿಗಳು ತರಬೇತಿ ಪಡೆಯುವಂತೆ ಮಾಹಿತಿ ನೀಡಬೇಕು ಎಂದರು. 

ನಗರದ ದೀಕ್ಷಾ ಕೌಶಲ್ಯ ಕೇಂದ್ರದ ಮುಖ್ಯಸ್ಥೆ ಹಾಗೂ ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ.ತೇಜಸ್ವಿ, ಕೇಂದ್ರದ ತರಬೇತುದಾರರಾದ ಆಸ್ಮಾ ತೊಟದ, ಜ್ಯೋತಿ ಜಿಗಜಿನ್ನಿ ಮತ್ತಿತರರು ಉಪಸ್ಥಿತರಿದ್ದರು.