ವಿದ್ಯಾರ್ಥಿಗಳನ್ನು ಕೈಗಾರಿಕಾ ಅವಶ್ಯಕತೆಗಳಿಗೆ ತಕ್ಕಂತೆ ಸಿದ್ದಗೊಳಿಸುವ ಉದ್ದೇಶದಿಂದ ತರಬೇತಿ ಕಾರ್ಯಕ್ರಮ

ವಿದ್ಯಾರ್ಥಿಗಳನ್ನು ಕೈಗಾರಿಕಾ ಅವಶ್ಯಕತೆಗಳಿಗೆ ತಕ್ಕಂತೆ ಸಿದ್ದಗೊಳಿಸುವ ಉದ್ದೇಶದಿಂದ ತರಬೇತಿ ಕಾರ್ಯಕ್ರಮ Training program aimed at preparing students for industrial requirements

ಸವದತ್ತಿ 14 : ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ ಮಾಹಿತಿ ಆಧಾರ ವ್ಯವಸ್ಥೆ ಹಾಗೂ ವಿವಿಧ ಅಪ್ಲಿಕೇಶನ್ಗಳ ನಡುವೆ ಸಂರ​‍್ಕ ಸಾಧಿಸಲು ಎ.ಪಿ.ಐ. ತಂತ್ರಜ್ಞಾನ ಅವಶ್ಯ. ಈ ಎ.ಪಿ.ಐ. ತಂತ್ರಜ್ಞಾನವು ಎರಡು ಬೇರೆ ಬೇರೆ ತಂತ್ರಾಂಶಗಳ ನಡುವೆ ಸಂವಹನ ನಡೆಸಲು ಸಹಾಯ ಮಾಡುವ ಸೇತುವೆಯಾಗಿದೆ. ಇದನ್ನು ಸಮರ​‍್ಕವಾಗಿ ಅರಿತುಕೊಳ್ಳುವುದು ಅಗತ್ಯವಾಗಿದೆ ಎಂದು ಬೆಂಗಳೂರಿನ ತಂತ್ರಾಂಶ ತರಬೇತುದಾರ  ಅರ್ಚಿತ್ ತೇಜಸ್ ಹೇಳಿದರು.   

ಇಲ್ಲಿನ ಕೆ.ಎಲ್‌.ಇ ಸಂಸ್ಥೆಯ ಎಸ್‌.ವಿ.ಎಸ್ ಬೆಳ್ಳುಬ್ಬಿ ಕಾಲೇಜಿನ ಬಿ.ಸಿ.ಎ ವಿಭಾಗವು ಆಯೋಜಿಸಿದ್ದ “ಡೇಟಾಬೇಸ್ ಮ್ಯಾನೇಜ್ಮೆಂಟ್ ಮತ್ತು  ಎ.ಪಿ.ಐ.  ಇಂಟಿಗ್ರೇಶನ್‌” ವಿಷಯದ ಕುರಿತಾದ ಏಳು ದಿನಗಳ ಸರ್ಟಿಫಿಕೇಟ್ ಕೋರ್ಸ್‌ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.ಪ್ರಸ್ತುತ ಸಾಫ್ಟ್ವೇರ್ ಮತ್ತು ವೆಬ್ ಅಪ್ಲಿಕೇಶನ್ ಕ್ಷೇತ್ರದಲ್ಲಿ ಡೇಟಾ ನಿರ್ವಹಣೆ ಹಾಗೂ ಎ.ಪಿ.ಐ.  ಇಂಟಿಗ್ರೇಶನ್ ಕೌಶಲ್ಯಗಳಿಗೆ ಹೆಚ್ಚಿನ ಬೇಡಿಕೆಯಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಕೈಗಾರಿಕಾ ಅವಶ್ಯಕತೆಗಳಿಗೆ ತಕ್ಕಂತೆ ಸಿದ್ದಗೊಳಿಸುವ ಉದ್ದೇಶದಿಂದ ಈ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಕೋರ್ಸ್ನಲ್ಲಿ ಬಿ.ಸಿ.ಎ. 4ನೇ ಸೆಮಿಸ್ಟರ್ನ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು. ಡಿ.ಬಿ.ಎಂ.ಎಸ್‌. ಮೂಲಭೂತಾಂಶಗಳು, ರಿಲೇಷನಲ್ ಡೇಟಾಬೇಸ್ ಪರಿಕಲ್ಪನೆ, ಎಸ್‌.ಕ್ಯೂ.ಎಲ್‌.ಕ್ವೆರಿ ಬರವಣಿಗೆ, ಡೇಟಾಬೇಸ್ ವಿನ್ಯಾಸ, ಕ್ರೂಡ್ ಕಾರ್ಯಚರಣೆಗಳು, ರೆಸ್ಟ್‌ ಎ.ಪಿ.ಐ. ಪರಿಕಲ್ಪನೆ,  ಎ.ಪಿ.ಐ. ರಚನೆ ಇಂಟಿಗ್ರೇಶನ್ ವಿಧಾನಗಳ ಕುರಿತು ವಿವರವಾದ ಮಾಹಿತಿ ನೀಡಲಾಯಿತು. ತರಬೇತಿ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಹ್ಯಾಂಡ್ಸ್‌- ಆನ್ ಸೆಷನ್ಗಳ ಮೂಲಕ ಪ್ರಾಯೋಗಿಕ ಜ್ಞಾನ ನೀಡಲಾಗಿದ್ದು, ಮಿನಿ ಪ್ರಾಜೆಕ್ಟ್‌ ಹಾಗೂ ಲೈವ್ ಡೆಮೋಗಳ ಮೂಲಕ ಕಲಿಕೆಯನ್ನು ಪರಿಣಾಮಕಾರಿಯಾಗಿ ಮಾಡಲಾಯಿತು.  

ವಿದ್ಯಾರ್ಥಿಗಳು ಸಂವಾದದಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.ಈ ವೇಳೆ ಪ್ರಾಚಾರ್ಯ ಡಾ.ಎನ್‌.ಆರ್‌.ಸವತಿಕರ, ಬಿ.ಸಿ.ಎ.ವಿಭಾಗದ ಕಿರಣಕುಮಾರ ಲಮಾಣಿ, ಸ್ನೇಹಾ ಗಂಗಲ, ಪ್ರೊಫೆಸರ್‌.ಕೆ.ರಾಮರೆಡ್ಡಿ, ಡಾ.ಎ.ಎಫ್‌.ಬದಾಮಿ, ವಿ.ಎಸ್‌.ಮೀಶಿ, ಮೋಹನ್‌.ಬಿ. ಪೃಥ್ವಿ ಪಾಟೀಲ್, ಮತ್ತು ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು.