ಮಾಸ್ಕೋ, ಫೆಬ್ರವರಿ 3 ಕರೋನ ವೈರಸ್ ಹಾವಳಿಯ ಕಾರಣ ರಷ್ಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ರೊಸಾವಿಯಾಟ್ಸಿಯಾ ಮೂರು ರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಚೀನಾಕ್ಕೆ ವಿಮಾನ ಹಾರಾಟ ಸ್ಥಗಿತಗೊಳಿಸಿವೆ. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಚೀನಾದ ಪ್ರಮುಖ ನಗರಗಳಿಗೆ ವಿಮಾನ ಹಾರಾಟ ಸ್ಥಗಿತ ಮಾಡಿದ್ದು ಈಗ ರಷ್ಯ ಸಹ ಹೊಸದಾಗಿ ಸೇರಿಕೊಂಡಿದೆ ಚೀನಾಕ್ಕೆ ಹಾರಾಟ ನಡೆಸುವ 11 ರಷ್ಯಾದ ವಿಮಾನಯಾನ ಸಂಸ್ಥೆಗಳಲ್ಲಿ, ಐದು - ಏರೋಫ್ಲೋಟ್, ಉರಲ್ ಏರ್ಲೈನ್ಸ್, ಸೈಬೀರಿಯಾ, ಐಫ್ಲೈ ಮತ್ತು ಇರ್ ಏರೋ - ಫೆಬ್ರವರಿ 3 ರವರೆಗೆ ಸಂಚಾರ ಮುಂದುವರೆಸಿದೆ ಎಂದೂ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಈ ನಡುವೆ ಸೈಬೀರಿಯಾ ತನ್ನ ಚೀನಾಕ್ಕೆ ವಿಮಾನಯಾನವನ್ನು ಮಂಗಳವಾರದಿಂದಲೇ ರದ್ದು ಪಡಿಸುವುದಾಗಿ ಹೇಳಿದೆ.