ಕಾರ್ಮಿಕರ ವೇತನ ಕಡಿತ ವಿರೋಧಿಸಿ ಟ್ರೇಡ್ ಯೂನಿಯನ್ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು, ಮೇ 22, ಕೊರೊನಾ ಲಾಕ್‌ ಡೌನ್ ಅವಧಿಯಲ್ಲಿ ಎಲ್ಲಾ ವರ್ಗದ ಕಾರ್ಮಿಕರಿಗೆ ವೇತನವನ್ನು ಒದಗಿಸಬೇಕು.  ಗುತ್ತಿಗೆ ಕಾರ್ಮಿಕರನ್ನೊಳಗೊಂಡಂತೆ ಯಾರನ್ನೂ ಸಹ ಕೆಲಸದಿಂದ ತೆಗೆದುಹಾಕಬಾರದೆಂದು ಒತ್ತಾಯಿಸಿ ಭಾರತೀಯ ನ್ಯಾಷನಲ್ ಟ್ರೇಡ್  ಯೂನಿಯನ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೆಪಿಸಿಸಿ ಕಾರ್ಮಿಕ ಸೆಲ್ ಅಧ್ಯಕ್ಷ ಎಸ್.ಎಸ್.ಪ್ರಕಾಶಂ ಮಾತನಾಡಿ,  ಲಾಕ್ ಡೌನ್ ಬಳಿಕ ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆಗಳ ಕಾಲ ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ನಿಲುವು ಸರಿಯಲ್ಲ . ನೂರು ಜನಕ್ಕಿಂತಲೂ ಹಚ್ಚು ಕೆಲಸ ಮಾಡುವ  ಸಂಸ್ಥೆ ಗಳಲ್ಲಿ ಸರ್ಕಾರದ ಅನುಮತಿಯಿಲ್ಲದೇ ಲೇ ಆಪ್ ರಿಟ್ರೇಂಚ್ ಮೆಂಟ್  ಹಾಗೂ ಮುಚ್ಚಲು ಅವಕಾಶ ನೀಡಬಾರದು, ಕಾರ್ಮಿಕ ಕಾನೂನುಗಳನ್ನು ಅಮಾನತುಗೊಳಿಸಲು ನಡೆಯುತ್ತಿರುವ ಎಲ್ಲ ಪ್ರಯತ್ನಗಳನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.ಗುರುತಿಸಿರುವ ಎಲ್ಲಾ ಸಂಘಟಿತ ಕಾರ್ಮಿಕರಿಗೆ ನೇರ ಆರ್ಥಿಕ ನೆರವು ನೀಡಬೇಕು, ಕೆಲಸದ ಭದ್ರತೆ ನೀಡಬೇಕು ಎಂದು ಪ್ರಕಾಶಂ ಸರ್ಕಾರವನ್ನು ಆಗ್ರಹಿಸಿದರು.