ಯುಟರ್ನ ಹೊಡೆದ ಪ್ರವಾಸೋದ್ಯಮ ಇಲಾಖೆ : ನದಿ ಹಿನ್ನೀರಿನಲ್ಲಿ ಬೋಟಿಂಗ್ ಮುಂದುವರಿಕೆ

ಯುಟರ್ನ ಹೊಡೆದ ಪ್ರವಾಸೋದ್ಯಮ ಇಲಾಖೆ : ನದಿ ಹಿನ್ನೀರಿನಲ್ಲಿ ಬೋಟಿಂಗ್  ಮುಂದುವರಿಕೆ  Tourism Department of Utter Nata: Boating to continue in river backwaters

ಕಾರವಾರ 21 : ಹವಾಮಾನ ವೈಪರೀತ್ಯ ಕಡಿಮೆಯಾದ ಕಾರಣ ಕಡಲತೀರ, ನದಿ ಹಿನ್ನೀರಿನಲ್ಲಿ ಬೋಟಿಂಗ್ ಪ್ರೀವೆಡ್ಡಿಂಗ್ ಶೂಟ್ , ಸ್ಕೂಬಾ ಡೈವಿಂಗ್, ಜಲ ಸಾಹಸ ಕ್ರೀಡೆಗಳನ್ನು ಮುಂದುವರಿಸಬಹುದು ಎಂದು ಉತ್ತರ ಕನ್ನಡ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಮಂಗಳ ಗೌರಿ ಮರು ಆದೇಶ ಹೊರಡಿಸಿದ್ದಾರೆ. ಅವರು ಮಂಗಳವಾರ ಹೊರಡಿಸಿದ ಆದೇಶದಿಂದ ಹಿಂದೆ ಸರಿದಿದ್ದು, ಯುಟರ್ನ ತೆಗೆದುಕೊಂಡಿದ್ದಾರೆ.

ಉಪ ನಿರ್ದೇಶಕರು, ಜಿಲ್ಲಾಧಿಕಾರಿ ಗಮನಕ್ಕೆ ವಿಷಯ ತಾರದೇ ಆದೇಶ ಹೊರಡಿಸಿದ್ದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಹವಾಮಾನ ಇಲಾಖೆಯಿಂದ ಚಂಡಮಾರುತ ಹಾಗೂ ಭಾರಿ ಗಾಳಿ ಬೀಸುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಅಲ್ಲದೆ ಮಳೆಗಾಲ ಕೂಡ ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ, ಬೋಟಿಂಗ್ ಮತ್ತು ಜಲ ಸಾಹಸ ಕ್ರೀಡೆಗಳು ಸೇರಿದಂತೆ ಎಲ್ಲಾ ಚಟುವಟಿಕೆಯನ್ನು ಸ್ಥಗಿತಗೊಳಿಸಲು ತಿಳಿಸಲಾಗಿತ್ತು. ಆದರೆ ಮೇ 19 ರ ಸಂಜೆ ಯಿಂದ ಕಡಲ ತೀರದಲ್ಲಿ ಅಬ್ಬರದ ಅಲೆಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುತ್ತದೆ.  

ಅಲ್ಲದೇ ದೂರದ ಊರುಗಳಿಂದ ಬರುವ ಪ್ರವಾಸಿಗರಿಗೆ ನಿರಾಶೆಯಾಗಬಾರದೆಂಬ ದೃಷ್ಠಿಯಿಂದ ವಾತಾವರಣವನ್ನು ಪರಿಗಣಿಸಿಕೊಂಡು, ಸುರಕ್ಷಿತಾ ಕ್ರಮಗಳನ್ನು ಅನುಸರಿಸಿಕೊಂಡು ಸದರಿ ಎಲ್ಲಾ ಚಟುವಟಿಕೆಗಳನ್ನು ಮುಂದಿನ ಆದೇಶದ ವರೆಗೆ ಕೈಗೊಳ್ಳಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು ಹಾಗೂ ರಿವರ್ ರಾಪ್ಟಿಂಗ್ ಮತ್ತು ಜಲ ಸಾಹಸ ಕ್ರೀಡೆ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಹೊಸ ಆದೇಶ ದಿಂದ ಪ್ರವಾಸೋದ್ಯಮ ಇಲಾಖೆ ಮಂಗಳವಾರ ಹೊರಡಿಸಿದ ಆದೇಶ ದಿಂದ ಹಿಂದೆ ಸರಿದಂತಾಗಿದೆ.