ನಾಳೆ ನಾಮಪತ್ರ: ಲಖನ್

ಲೋಕದರ್ಶನ ವರದಿ

ಗೋಕಾಕ: ಸೋಮವಾರ 10 ಗಂಟೆಗೆ ನಾನು ನಾಮಪತ್ರ ಸಲ್ಲಿಸುವೆ. ನಾನು ರಮೇಶ ಜಾರಕಿಹೊಳಿ ಅಂತೆ ಲಕ್ಷ ಜನರನ್ನ ಸೇರಿಸುವುದಿಲ್ಲ. ನಿಮಗೆ ನಮ್ಮ ಶಕ್ತಿ ಗೊತ್ತಾಗಲಿದೆ. ಗೋಕಾಕ ರಾಜಕಾರಣ ಯಾರಿಗೂ ಗೊತ್ತಾಗುದಿಲ್ಲ. ಗೋಕಾಕ ರಾಜಕಾರಣ ಬಗ್ಗೆ ಜಾರಕಿಹೊಳಿ ಕುಟುಂಬಕ್ಕೆ ಮಾತ್ರ ಗೊತ್ತಿದೆ ಎಂದು ಕಾಂಗ್ರೇಸ್ ನಿಯೋಜಿತ ಅಭ್ಯಥರ್ಿ ಲಖನ್ ಜಾರಕಿಹೊಳಿ ಹೇಳಿದರು.

   ಅವರು, ಶನಿವಾರದಂದು ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ರಮೇಶ ಜಾರಕಿಹೊಳಿಗೆ ಅಳಿಯಂದಿರು ಚೂರಿ ಹಾಕಿದ್ದಾರೆ. ಬರೀ ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಮಾಚ್ ಫಿಕ್ಸಿಂಗ್ ಇಲ್ಲ. ಅದು ನಾನು ಹಾಕಿದಂತೆ ಅನಿಸುತ್ತಿದೆ. ರೋಬೋಟ್ ಚಿತ್ರದಂತೆ ನಾವು ರಮೇಶ ಜಾರಕಿಹೊಳಿಯನ್ನ ರೆಡಿ ಮಾಡಿದ್ವಿ. ಈಗ ಅವರ ಅಳಿಯಂದಿರು ಚೀಫ್ ಚೇಂಜ್ ಮಾಡಿದ್ದಾರೆ. ರಮೇಶ ಅಳಿಯಂದಿರು ಭ್ರಷ್ಟಾಚಾರ ಮಾಡಿದನ್ನ ನಾವು ಕಣ್ಣಮುಚ್ಚಿ ನೋಡಬೇಕಾ, ಜನರಗಾಗಿ ನಾನು ಹೋರಾಟ ಮಾಡಬೇಕು ಎಂದರು.  ಅದಕ್ಕಾಗಿ ನಾನು ರಮೇಶ ಜಾರಕಿಹೊಳಿಯಿಂದ ದೂರ ಬಂದಿದ್ದೇನೆ. ಕಾಂಗ್ರೆಸ್ಸಿನ ನಮ್ಮ ನಾಯಕರು ನನಗೆ ಟಿಕೆಟ್ ಅಂತಾ ಘೋಷಣೆ ಮಾಡಿದ್ದಾರೆ. ನನ್ನ ಹೋರಾಟ ರಮೇಶ ಜಾರಕಿಹೊಳಿ ಅಳಿಯಂದಿರು ವಿರುದ್ಧ. ನಾನು ಅವರ ವಿರುದ್ಧ ಚುನಾವಣೆ ಮಾಡುತ್ತೇನೆ. 

ನಾನಿಗೆ ನಮ್ಮ ತಂತ್ರಗಾರಿಕೆ ಲೀಕ್ ಆಗದಂತೆ ಎಚ್ಚರಿಕೆವಹಿಸಿದ್ದೇನೆ. ಕೋಷನ್ ಪೇಪರ್ ಲೀಕ್ ಮಾಡುವುದಿಲ್ಲ. ನಮ್ಮ ಕ್ಯಾನ್ವಸ್ ಬೇರೆ ನಮ್ಮ ಸ್ಟೈಲ್ ಬೇರೆ. ಗೋಕಾಕನಲ್ಲಿ ನಾನು ರಾಜಕೀಯ ಮಾಡ್ತಿವಿ. ಜಾರಕಿಹೊಳಿ ಕುಟುಂಬಕ್ಕೆ ಮಾತ್ರ ರಾಜಕೀಯ ಗಣಿತ ಗೊತ್ತಾಗಲಿದೆ. ಭ್ರಷ್ಟಾಚಾರ ತೊಡೆದು ಹಾಕಲು ನನ್ನ ಹೋರಾಟ ಅಂತಾ ಲಖನ್ ಜಾರಕಿಹೊಳಿ ಹೇಳಿದ್ದಾರೆ.