ಶೌಚಾಲಯ ತೆರವು ವಿವಾದ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ
Toilet clearance controversy: Tahsildar visits the spot
ಶೌಚಾಲಯ ತೆರವು ವಿವಾದ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ
ತಾಳಿಕೋಟಿ 09: ತಾಲೂಕಿನ ಗಡಿ ಸೋಮನಾಳ ಗ್ರಾಮದಲ್ಲಿ ಮಹಿಳೆಯರ ಬಯಲು ಶೌಚಾಲಯ ಸ್ಥಳ ತೆರವುಗೊಳಿಸಿದ ವಿವಾದದ ಹಿನ್ನೆಲೆಯಲ್ಲಿ ತಹಶೀಲ್ದಾರ ಡಾ.ವಿನಯಾ ಹೂಗಾರ ಅವರು ರವಿವಾರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕೆಲವು ಮಹಿಳೆಯರು ಗ್ರಾಮದಲ್ಲಿರುವ ಬಯಲು ಶೌಚಾಲಯದ ಏಕೈಕ ಸ್ಥಳವನ್ನು ಏಕಾಏಕಿ ತೆರವುಗೊಳಿಸಿರುವುದರಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ತಹಸಿಲ್ದಾರ್ ಗೆ ತಿಳಿಸಿ ಯಾವ ಕಾರಣಕ್ಕೂ ಶೌಚದ ಆ ಸ್ಥಳವನ್ನು ತೆರವುಗೊಳಿಸಬಾರದೆಂದು ಆಗ್ರಹಿಸಿದರು. ಮುಖಂಡ ಮಡುಸೌಕಾರ ಬಿರಾದಾರ ಅವರು ಮಾತನಾಡಿ ಶಾಸಕರಾದ ರಾಜುಗೌಡ ಪಾಟೀಲರು ನಮ್ಮ ಗ್ರಾಮದ ಕುರಿತು ಆಸಕ್ತಿ ವಹಿಸಿ ಈಗಾಗಲೇ ಸಿಸಿ ರಸ್ತೆ ಸೇರಿದಂತೆ ಹಲವಾರು ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡಿದ್ದಾರೆ ಇದೀಗ ಆರೋಗ್ಯ ದೃಷ್ಟಿಯಿಂದ ಎಲ್ಲರಿಗೂ ಅತ್ಯಗತ್ಯವಾದ ಸರ್ಕಾರಿ ಆಸ್ಪತ್ರೆಯನ್ನು ಮಂಜೂರು ಮಾಡಿಸಿಕೊಟ್ಟಿದ್ದಾರೆ. ಇದು ಅತೀ ಹಿಂದುಳಿದ ತಾಲೂಕಿನ ಗ್ರಾಮದ ವಿಶೇಷ ಅನುದಾನದ ಯೋಜನೆಯಾಗಿದೆ ಇದರ ಸದ್ಬಳಕೆ ಮಾಡದಿದ್ದಲ್ಲಿ ಮುಂದೆ ಅನುದಾನ ಸಿಗುವುದಿಲ್ಲ ಆದ್ದರಿಂದ ಸದರಿ ಸರ್ಕಾರದ ಜಾಗೆಯಲ್ಲಿ ಆಸ್ಪತ್ರೆಯನ್ನು ಮಾಡಲು ಎಲ್ಲರೂ ಸಹಕರಿಸಬೇಕು ಆಸ್ಪತ್ರೆಗೆ ಅನುದಾನ ಪಡೆಯಲು ಈ ಜಾಗದ ಉತಾರೆಯನ್ನೇ ನೀಡಲಾಗಿದೆ ಎಂದು ತಿಳಿಸಿದರು. ತಹಸಿಲ್ದಾರ್ ಡಾ.ವಿನಯಾ ಹೂಗಾರ ಅವರು ಸ್ಥಳದಲ್ಲಿದ್ದ ಗ್ರಾಮ ಪಂಚಾಯತ್ ಪಿಡಿಒ ಈರಣ್ಣ ಬಡಿಗೇರ ಅವರಿಗೆ ಈ ಕುರಿತು ಮಾಹಿತಿ ಕೋರಿದರು. ಪಿಡಿಒ ಬಡಿಗೇರ ಅವರು ಮಾತನಾಡಿ ಬಯಲು ಶೌಚಾಲಯಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಪಂಚಾಯತಿಯಿಂದ ಹಣವನ್ನು ನೀಡಲಾಗಿದೆ ಆದರೂ ಸಹಿತ ಶೌಚಾಲಯ ನಿರ್ಮಾಣ ಮಾಡಿಕೊಂಡಿಲ್ಲ. ಈಗ ಆಸ್ಪತ್ರೆ ನಿರ್ಮಾಣ ಮಾಡಲು ನಿರ್ಧರಿಸಿರುವ ಸ್ಥಳದ ಹತ್ತಿರ ಜಾಗದ ಅವಕಾಶವಿದ್ದು ಅಲ್ಲಿ ಸರ್ಕಾರದ ಅನುದಾನದಿಂದ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಬಹುದು ಎಂದು ತಿಳಿಸಿದರು. ತಹಸಿಲ್ದಾರ್ ಡಾ. ಹೂಗಾರ ಅವರು ಮಾತನಾಡಿ ಬಯಲು ಶೌಚಾಲಯಕ್ಕೆ ಅವಕಾಶ ನೀಡಲು ಬರುವುದಿಲ್ಲ ಇದು ಆರೋಗ್ಯದ ದೃಷ್ಟಿಯಿಂದಲೂ ಸರಿಯಲ್ಲ ಎಲ್ಲರೂ ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಳ್ಳಬೇಕು ಇನ್ನು ನಿಮ್ಮ ಗ್ರಾಮಕ್ಕೆ ಆಸ್ಪತ್ರೆ ಮಂಜುರಾಗಿದೆ ನಿಮಗೆಲ್ಲರಿಗೂ ಇದರ ಅಗತ್ಯವಿದೆ, ಅಲ್ಲಿ ಸಮೀಪದಲ್ಲಿಯೇ ಸ್ಥಳದ ಅವಕಾಶವಿದ್ದರೆ ಸರ್ಕಾರದ ಅನುದಾನ ಪಡೆದುಕೊಂಡು ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲು ಕ್ರಮವಹಿಸಲಾಗುವುದು ಇದಕ್ಕೆ ಎಲ್ಲ ಗ್ರಾಮಸ್ಥರು ಹಾಗೂ ಮಹಿಳೆಯರು ಸಹಕರಿಸಬೇಕು ಎಂದು ತಿಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈ ಸಮಯದಲ್ಲಿ ಗ್ರಾಮದ ಪ್ರಮುಖರಾದ ನಿಂಗನಗೌಡ ಬಿರಾದಾರ,ಭೀಮನಗೌಡ ತಂಗಡಗಿ, ಶೇಖುಗೌಡ,ಮುತ್ತು ಧೂಳೇಕರ, ಜಯಪ್ಪ ಹರಿಜನ್, ತಿಪ್ಪಣ್ಣ ಪೂಜಾರಿ, ಸುರೇಶ್ ಕಂಗಳ, ಪಿಎಸ್‌ಐ ಜ್ಯೋತಿ ಖೋತ್ ಹಾಗೂ ಗ್ರಾಮಸ್ಥರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 