ಇಂದು 8ನೇ ವಾರ್ಷೀಕೋತ್ಸವ, ವಿಶ್ವಪರಿಸರ ದಿನಾಚರಣೆ
Today is the 8th anniversary of World Environment Day.
ಇಂದು 8ನೇ ವಾರ್ಷೀಕೋತ್ಸವ, ವಿಶ್ವಪರಿಸರ ದಿನಾಚರಣೆ
ತಾಳಿಕೋಟೆ, 08 : ಪಟ್ಟಣದ ಹಸಿರು ಸಂಪದ ಬಳಗದ 8 ನೆಯ ವಾರ್ಷೀಕೋತ್ಸವ ಹಾಗೂ ವಿಶ್ವಪರಿಸರ ದಿನವನ್ನು ಭಾನುವಾರ ಬೆಳಿಗ್ಗೆ 7.00 ಗಂಟೆಗೆ ದೇವರ ಹಿಪ್ಪರಗಿ ರಸ್ತೆಯಲ್ಲಿರುವ ಲಕ್ಷ್ಮೀ ದೇವಸ್ಥಾನದ ಉದ್ಯಾನದಲ್ಲಿ ಸಸಿ ನೆಡುವ ಮೂಲಕ ಆಚರಿಸಲಾಗುವುದು ಎಂದು ಹಸಿರು ಸಂಪದ ಬಳಗದ ಪ್ರಮುಖ ರಾಜು ಹಂಚಾಟೆ ತಿಳಿಸಿದರು.
ಅರಣ್ಯ ಇಲಾಖೆ, ಪುರಸಭೆ ಸಹಯೋಗದಲ್ಲಿ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು. ಇದೇ ಸಂದರ್ಭದಲ್ಲಿ ಬಳಗದ ಸದಸ್ಯ ಶಫೀಕ ಇನಾಮದಾರ ಅವರು ಬಕ್ರಿದ್ ಹಬ್ಬದ ಪ್ರಯುಕ್ತ ಹಾಜರಿದ್ದ ಸದಸ್ಯರುಗಳಿಗೆ ಸಿಹಿ ಸುರಕುರಂ ವಿತರಣೆ ಮಾಡಿ, ಬಕ್ರಿದ ಹಬ್ಬದ ಮಹತ್ವ ಕುರಿತು ತಿಳಿಸಿದರು. ಸಭೆಯಲ್ಲಿ ಡಾ.ಶ್ರೀಶೈಲ ಹುಕ್ಕೇರಿ, ಆರಿ್ವ.ಜಾಲವಾದಿ, ಶ್ರೀಕಾಂತ ಪತ್ತಾರ, ಅಪ್ಪಾಸಾಹೇಬ ಮೂಲಿಮನಿ, ಕಾಶಿನಾಥ ಸಜ್ಜನ, ಯಲ್ಲೇಶ ದಾಯಪುಲೆ, ಕಿರಣ ಬಡಿಗೇರ, ಸಂಚಾಲಕ ಎಸ್.ಎಸ್.ಗಡೇದ, ಅನಿಲ ಇರಾಜ, ಸಿ.ವಿ.ಮೆಣಸಿನಕಾಯಿ, ಅರಣ್ಯ ಇಲಾಖೆಯ ಮಹಾಂತೇಶ ಹಾದಿಮನಿ, ಪರಮಣ್ಣ ಪಾಟೀಲ ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 