ಇಂದು ಹಿರೇಮಣ್ಣೂರಿನಲ್ಲಿ ಚೆನ್ನಕೇಶವ ಜಯಂತಿ: ಸಹಸ್ರ ಶಂಖಾಭಿಷೇಕ
Today is Chennakesava Jayanti in Hiremannur: Sahasra Shankhabhiseka
ವಿಜಯಪುರ 03: ಹಿರೇಮಣ್ಣೂರಿನಲ್ಲಿ ಡಿ. 4ರಂದು ಚೆನ್ನಕೇಶವ ಜಯಂತಿ, ಸಹಸ್ರ ಶಂಖಾಭೀಷೇಕ ಹಾಗೂ 5ರಂದು ರಘುನಾಥತೀರ್ಥ ಮಹಾಸ್ವಾಮಿಗಳ ಆರಾಧನೆ ಜರುಗಲಿದೆ ಎಂದು ಚೆನ್ನಕೇಶವ ದೇವಸ್ಥಾನ ಟ್ರಸ್ಟ ಅಧ್ಯಕ್ಷ ವಾದಿರಾಜ ಎಸ್ ಜಹಾಗೀರದಾರ ಹಾಗೂ ಕಾರ್ಯದರ್ಶಿ ನ್ಯಾಯವಾದಿ ಸಂಜೀವ ಜಹಾಗೀರದಾರ ಅವರುಗಳು ಸಂಯುಕ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
4ರಂದು ಬೆಳಿಗ್ಗೆ ಸುಪ್ರಭಾತ, ಪಂಚಾಮೃತಾಭೀಷೇಕ, ಸಹಸ್ರ ಶಂಖಾಭೀಷೇಕ, ರಂಗಪೂಜೆ, ರಥೋತ್ಸವ, ಲಕ್ಷ ಪುಷ್ಪಾರ್ಚನೆ, ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ನಡೆಯಲಿದೆ. ಸಾಯಂಕಾಲ ದಾಸವಾಣಿ ನಡೆಯಲಿದೆ.
5ರಂದು ಆದ್ಯರಿಗೆ ಆದ್ಯತ್ವವನ್ನು ಅನುಗ್ರಹಿಸಿದ ರಘುನಾಥ ತೀರ್ಥರ ಆರಾಧನೆಯು ಜರುಗಲಿದೆ. ಸುಪ್ರಭಾತ, ರಘುನಾಥ ತೀರ್ಥ, ಆದ್ಯ ವರದರಾಜಾಚಾರ್ಯ, ಕೃಷ್ಣದ್ವೈಪಾಯನಾಚಾರ್ಯ ಹಾಗೂ ರಾಮಕೇಶವಾಚಾರ್ಯ ಪಾದುಕೆಗಳ ಶೋಭಾಯಾತ್ರೆ ನದಿಯಿಂದ ದೇವಾಲಯ ಪರ್ಯಂತ ನಡೆಯಲಿದೆ, ಪಂಡಿತರಿಂದ ಪ್ರವಚನ ರಥೋತ್ಸವ, ಭಜನೆ ನಡೆಯಲಿದೆ. ಗುಡಿಯ ಹಿಂಭಾಗ ಸಮುದಾಯ ಭವನ ನಿರ್ಮಾಣವಾಗುತ್ತಿದೆ.
ಈ ಎರಡು ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಚೆನ್ನಕೇಶವ ದೇವರ ಕೃಪೆಗೆ ಪಾತ್ರರಾಗಬೇಕೆಂದು ಚೆನ್ನಕೇಶವ ದೇವಸ್ಥಾನ ಟ್ರಸ್ಟ ಅಧ್ಯಕ್ಷ ವಾದಿರಾಜ ಎಸ್ ಜಹಾಗೀರದಾರ ಹಾಗೂ ಕಾರ್ಯದರ್ಶಿ ನ್ಯಾಯವಾದಿ ಸಂಜೀವ ಜಹಾಗೀರದಾರ ಅವರುಗಳು ಸಂಯುಕ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 