ಇಂದು ಬೆಂಗಳೂರು ಚಲೋ: ನಾಳೆ ಬೃಹತ್ ಹೋರಾಟ

 ಲೋಕದರ್ಶನ ವರದಿ

ಮುದ್ದೇಬಿಹಾಳ 06: ಬೇಡ ಜಂಗಮರಿಗೆ ಸಕರ್ಾರದಿಂದ ದೊರಕಬೇಕಾದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ದೊರಕಿಸಿಕೊಡಲು ಸಕರ್ಾರದ ಮೇಲೆ ಒತ್ತಡ ಹೇರುವುದಕ್ಕಾಗಿ ಮಾ.8ರಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಪಾಲ್ಗೊಳ್ಳಲು ಮಾ.7ರಂದು ಬೆಂಗಳೂರು ಚಲೋ ನಡೆಸಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಸಾವಿರಾರು ಬೇಡ ಜಂಗಮರು ರಾಜಧಾನಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ಜಂಗಮ ಸಮಾಜದ ಧುರೀಣ ದಾನಯ್ಯಸ್ವಾಮಿ ಹಿರೇಮಠ ತಿಳಿಸಿದ್ದಾರೆ.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ. ಬ್ರಿಟೀಷ್ ಸಕರ್ಾರ ಇದ್ದಾಗ ಕನರ್ಾಟಕದ ಜಂಗಮರನ್ನು ಬೇಡಜಂಗಮರು ಎಂದು ಗುತರ್ಿಸಲಾಗಿತ್ತು. ಆದರೆ ನಂತರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಈ ಸಮಾಜವನ್ನು ಎಲ್ಲರೂ ದೂರ ಸರಿಸುತ್ತಲೇ ಬಂದರು. ನಮ್ಮವರೇ ನಮಗೆ ಸಿಗಬೇಕಾದ ಸೌಲಭ್ಯ ನಾಶಪಡಿಸಿದರು ಎಂದು ಅವರು ದೂರಿದ ಅವರು ಅಖಿಲಕನರ್ಾಟಕ ಜಂಗಮ ಸಮಾಜದ ಅಧ್ಯಕ್ಷರಾಗಿದ್ದ ನವಲಿ ಹಿರೇಮಠ, ಸಂಘಟನೆ ಚುಕ್ಕಾಣಿ ಹಿಡಿದಿದ್ದ ವಿಶ್ವನಾಥ, ಹುಣಸಿಕಟ್ಟಿಮಠರವರು ಜವಾಬ್ಧಾರಿ ಸರಿಯಾಗಿ ನಿರ್ವಹಣೆ ಮಾಡಲಿಲ್ಲ. ಸಮಾಜಕ್ಕೆ ಸಕರ್ಾರದ ಸೌಲಭ್ಯ ದೊರಕಿಸಿಕೊಡಲು ವಿಫಲರಾಗಿದ್ದಾರೆ. ಅಖಂಡ ಜಂಗಮ ಸಮಾಜಕ್ಕಾಗಿ ಅವರು ಕೆಲಸ ಮಾಡಲಿಲ್ಲ. ಸಮಾಜವನ್ನು ಮೇಲೆತ್ತಲು ನೈಜ ಹೋರಾಟ ನಡೆಯಲಿಲ್ಲ ಎಂದು ಆಪಾದಿಸಿದರು.

ಸಂಘಟನೆಗೆ ಹೊಸದಾಗಿ ಅಧ್ಯಕ್ಷರಾಗಿರುವವರು ಉತ್ಸಾಹಿ ವಕೀಲರಾಗಿದ್ದು ಸಮಾಜದ ಕಳಕಳಿ ಇದ್ದವರಿದ್ದಾರೆ. ಸಮರ್ಥವಾಗಿ ನಮ್ಮ ಹಕ್ಕು ಪಡೆಯುವಲ್ಲಿ ಹಿಂದಿನ ನಾಯಕರು ವಿಫಲರಾಗಿದ್ದರಿಂದ ನಮಗೆ ಅನ್ಯಾಯ ಆಗಿದ್ದು ಅದನ್ನು ಸರಿಪಡಿಸಲು ಹೋರಾಟ ಅನಿವಾರ್ಯವಾಗಿದೆ. ಹೀಗಾಗಿ ಬೇಡ ಜಂಗಮ ಸೌಲಭ್ಯ ಅಪೇಕ್ಷಿಸುವ ಎಲ್ಲರೂ ಮಾ.7ರಂದು ಬೆಂಗಳೂರು ಚಲೋ ನಡೆಸಿ, ಮಾ.8ರಂದು ಬೆಂಗಳೂರಿನಲ್ಲಿ ನಡೆಯುವ ಬೃಹತ್ ಹೋರಾಟದಲ್ಲಿ ಭಾಗವಹಿಸಿ ಸಕರ್ಾರಕ್ಕೆ ಬಿಸಿ ಮುಟ್ಟಿಸಬೇಕು ಎಂದು ಕರೆ ನೀಡಿದರು.

ಸಮಾಜದ ತಾಲೂಕು ಅಧ್ಯಕ್ಷ ಗೌರಿಶಂಕರ ಪುರಾಣಿಕಮಠ, ಗೌರವಾಧ್ಯಕ್ಷ ಅರವಿಂದ ಲದ್ದಿಮಠ, ಪ್ರಮುಖರಾದ ಮಹಾಂತೇಶ ಬುದಿಹಾಳಮಠ, ವೀರೇಶ ಗುರುಮಠ, ಗುರುಪಾದಯ್ಯ ಸಾಲಿಮಠ, ಗುರಯ್ಯ ಮುದ್ನೂರಮಠ, ಶಿವಾನಂದ ಹಿರೇಮಠ, ಸದಾಶಿವ ಘನಕುಮಾರಮಠ ಮತ್ತಿತರರು ಇದ್ದರು.