ದಿ. ಡಾ. ಶಂಬಾ ಜೋಶಿ ದತ್ತಿ ಅಂಗವಾಗಿ ಇಂದು ಕಾರ್ಯಕ್ರಮ

 ದಿ. ಡಾ. ಶಂಬಾ ಜೋಶಿ ದತ್ತಿ ಅಂಗವಾಗಿ ಇಂದು  ಕಾರ್ಯಕ್ರಮ  Today's program as part of the Dr. Shamba Joshi Foundation

               

ಧಾರವಾಡ 02:  ಕರ್ನಾಟಕ ವಿದ್ಯಾವರ್ಧಕ ಸಂಘವು, ದಿ. ಡಾ. ಶಂಬಾ ಜೋಶಿ ದತ್ತಿ ಅಂಗವಾಗಿ ದಿನಾಂಕ: 3-1-2026 ರಂದು ಸಂಜೆ 6 ಗಂಟೆಗೆ ಸಂಘದರಾ.ಹ. ದೇಶಪಾಂಡೆ ಸಭಾಭವನದಲ್ಲಿ ಕನ್ನಡ ಭಾಷಾ ಸಂಶೋಧನಾ ದಿನ ನಿಮಿತ್ತ ‘ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಯಕ್ಷಗಾನ ಪಾತ್ರ’ ಕುರಿತು ಉಪನ್ಯಾಸ ಕಾರ್ಯಕ್ರಮ ಏರಿ​‍್ಡಸಿದೆ. 

ಧಾರವಾಡದ ವಿಶ್ರಾಂತಆಕಾಶವಾಣಿ ಅಧಿಕಾರಿ ದಿವಾಕರ ಹೆಗಡೆಅತಿಥಿ ಉಪನ್ಯಾಸಕರಾಗಿ ಆಗಮಿಸುವರು. ಧಾರವಾಡ ಮಾನವಧರ್ಮ ಪ್ರತಿಷ್ಠಾನ ಕಾರ್ಯದರ್ಶಿ ವ್ಹಿ. ಜಿ. ಭಟ್ ಗೌರವ ಉಪಸ್ಥಿತರಿರುವರು. ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಅಧ್ಯಕ್ಷತೆ ವಹಿಸುವರು.  

ಸಾಹಿತಿಗಳು, ಚಿಂತಕರು, ಕಲಾವಿದರು, ತಾಯಂದಿರು, ವಿದ್ಯಾರ್ಥಿಗಳು, ಸಂಘದ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿಕೋರಿದ್ದಾರೆ. 

ಡಾ. ಶಂಬಾ ಜೋಶಿ ಪರಿಚಯ 

ಶಂಕರ ಬಾಳದೀಕ್ಷಿತ ಜೋಶಿ (ಶಂಬಾ) ಅವರು ಸವದತ್ತಿ ತಾಲೂಕಿನ ಗುರ್ಲಹೊಸೂರಲ್ಲಿ ದಿನಾಂಕ 4-1-1896 ರಂದು ಜನಿಸಿದರು. ಕನ್ನಡದ ಶ್ರೇಷ್ಠ ಸಂಶೋಧಕರಾಗಿದ್ದ ಇವರು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ ಸತ್ಯ ಸಂಗತಿಗಳನ್ನು ತಮ್ಮ ಸಂಶೋಧನೆಗಳ ಮುಖಾಂತರವಾಗಿ ಕನ್ನಡ ನಾಡಿನಲ್ಲಿ ಅವರೊಬ್ಬ ಅಪರೂಪದ ಸಂಶೋಧಕರಾಗಿ ಪ್ರಸಿದ್ಧಿ ಹೊಂದಿದ್ದಾರೆ. 

ಕನ್ನಡ ನಾಡು-ನುಡಿಯ ಹಿರಿಮೆಯನ್ನು ವೇದಗಳಲ್ಲಿ ಸಂಸ್ಕೃತಿಯ ಶೋಧಕರಾಗಿ ಪ್ರಸಿದ್ಧರಾಗಿ ಅವರು ತಮ್ಮ ಆರೂವರೆ ದಶಕಗಳ ಸಂಸ್ಕೃತಿ ಅಧ್ಯಯನದಲ್ಲಿ ಕಂಡರಸಿದ ಸಂಗತಿಗಳು ಇಂದಿಗೂ ಸಂಸ್ಕೃತಿ ಶೋಧದ ಮಹತ್ವದ ಚರ್ಚೆಗಳಾಗಿವೆ. ಹಲ್ಮಿಡಿ ಶಾಸನ ಪೂರ್ವದ ಕನ್ನಡಿಗರ ಅಸ್ತಿತ್ವವನ್ನು ಅಧಿಕೃತಗೊಳಿಸುವ ಪ್ರಬಲ ಪುರಾವೆಗಳು ಅಲಭ್ಯವಾದ ಸಂದರ್ಭದಲ್ಲಿ ಬಹುಶಿಸ್ತೀಯ ಸಂಶೋಧನಾ ಮಾದರಿಯನ್ನು ಅನುಸರಿಸಿ, ಆಕರ ಸಂಗ್ರಹ, ಆಕರ ವಿಶ್ಲೇಷಣೆ ಮತ್ತು ವ್ಯಾಖ್ಯಾನಗಳನ್ನು ನಿರ್ವಹಿಸುವ ಸಂಕೀರ್ಣ ಮಾರ್ಗದಲ್ಲಿ ಮುನ್ನಡೆಸಿದವರು. ಧರ್ಮ, ತತ್ವ, ಸಾಹಿತ್ಯ, ಶಾಸ್ತ್ರಗಳ ಬೆಳಕಿನಲ್ಲಿ ಕನ್ನಡದಕರ್ನಾಟಕ ಸಂಸ್ಕೃತಿಯ ಜನಾಂಗಿಕ, ಭೌಗೋಳಿಕ, ಚಾರಿತ್ರಿಕ ಮತ್ತು ಭಾಷಿಕ ಇತಿಹಾಸದ ಅಗೋಚರ ಆಯಾಮಗಳನ್ನು ಬೆಳಕಿಗೆ ತಂದವರು. ಕನ್ನಡಿಗರ ಆಳತ್ವವನ್ನು ವೇದ ಪೂರ್ವದಉತ್ತರ ಭಾರತದಲ್ಲಿ ಗುರುತಿಸಿದ ಮೊದಲಿಗರು. 

ಕರ್ನಾಟಕ ವಿದ್ಯಾವರ್ಧಕ ಸಂಘದ ಸಹ ಕಾರ್ಯದರ್ಶಿಯಾಗಿ, ಗೋಕಾಕ ಚಳುವಳಿಯಲ್ಲಿ ಸಕ್ರಿಯವಾಗಿದ್ದ ಶಂಬಾ ನಾಡು ನುಡಿಯ ಅಭಿವೃದ್ಧಿಗಾಗಿ ಕ್ರಿಯಾಶೀಲರಾಗಿದ್ದವರು. ಕನ್ನಡ ಪ್ರಜ್ಞೆಯ ಪ್ರಖರ ಸತ್ವವಾಗಿದ್ದ ಸ್ಮರಣೀಯರಾದ ಅವರು 28-09-1991 ರಂದು ದೈವಾಧೀನರಾದರು. ಅವರ ಸ್ಮರಣೆಯಲ್ಲಿ ಮಾನವಧರ್ಮ ಪ್ರತಿಷ್ಠಾನ(ರಿ), ಧಾರವಾಡ ಇವರು ಸಂಘದಲ್ಲಿದತ್ತಿ ಇಟ್ಟು ಪ್ರತಿವರ್ಷ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ. ಬನ್ನಿ ಪಾಲ್ಗೊಳ್ಳಿ.