ತಂಬಾಕು ಬೆಲೆ ಹೆಚ್ಚಳ ಸಾಧ್ಯತೆ ; ಮಾರಾಟಕ್ಕೆ ಸಿದ್ಧ ಮಾಡುತ್ತಿರುವ ತಂಬಾಕು ಬೆಳೆಗಾರರು

ತಂಬಾಕು ಬೆಲೆ ಹೆಚ್ಚಳ ಸಾಧ್ಯತೆ ; ಮಾರಾಟಕ್ಕೆ ಸಿದ್ಧ ಮಾಡುತ್ತಿರುವ ತಂಬಾಕು ಬೆಳೆಗಾರರು  Tobacco prices likely to increase; Tobacco growers preparing for sale

ಲೋಕದರ್ಶನ ವರದಿ 

ಮಾಂಜರಿ 14 : ಪ್ರಸಕ್ತ ಸಾಲಿನಲ್ಲಿ ತಂಬಾಕು ಬೆಲೆ ಹೆಚ್ಚಳವಾಗುವ ಸಾಧ್ಯತೆ ದಟ್ಟಾಗಿದ್ದು ಸಣ್ಣ-ಪುಟ್ಟ ವ್ಯಾಪಾರಿಗಳು ಸಣ್ಣ-ಪುಟ್ಟ ರೈತರಿಂದ ಪ್ರತಿ ಕಿಲೊ ತಂಬಾಕಿಗೆ 130 ರಿಂದ 140 ರೂ. ಖರೀದಿ ದಿ ಮಾಡುತ್ತಿದ್ದಾರೆ. ಮಾಡ ಇದರಿಂದಾಗಿ ತಂಬಾಕು ಉತ್ಪಾದಕರ ಮುಖದಲ್ಲಿ ಸ್ವಲ್ಪ ಮಂದಹಾಸ ಮೂಡಿದೆ.  ತಂಬಾಕು ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಸಾಂಪ್ರದಾಯಿಕ ರೊಕ್ಕದ ಬೆಳೆ. ಉತ್ತಮ ಗುಣಮಟ್ಟದ ಬೀಡಿ ಮತ್ತು ಜರ್ದಾ(ಜಗಿಯುವ ಸಂಸ್ಕರಿತ ತಂಬಾಕು) ತಯಾರಿಕೆಗೆ ಇಲ್ಲಿನ ತಂಬಾಕು ಯೋಗ್ಯವಾಗಿದೆ. ಪ್ರಸಕ್ತ ವರ್ಷ ಉತ್ತಮ ದರ್ಜೆಯ ತಂಬಾಕು ಉತ್ಪಾದನೆಯಾಗಿದೆ. 

ಕಳೆದ 3 ದಶಕಗಳ ಹಿಂದೆ ನಿಪ್ಪಾಣಿ-ಚಿಕ್ಕೋಡಿ ತಾಲೂಕಿನಲ್ಲಿ ಸುಮಾರು 20 ರಿಂದ 25 ಸಾವಿರ ಹೆಕ್ಟೇರ್‌ವರೆಗೆ ತಂಬಾಕು ಉತ್ಪಾದನೆ ಮಾಡುತ್ತಿದ್ದರು. : ಕಳೆದ 2-3 ವರ್ಷಗಳಿಂದ 6000 ಹೆಕ್ಟೇರ್ ಬೆಳೆದಿದ್ದರು. ಆದರೆ ಈ ಸಾಲಿನಲ್ಲಿ ಹವಾಮಾನ ಸಾಥ ನೀಡಿದ್ದರಿಂದ 7500ಕ್ಕೂ ಹೆಚ್ಚು ಹೆಕ್ಟೇರ್ ಬೆಳೆದಿದ್ದಾರೆ. ಈ ಸಾಲಿನಲ್ಲಿ ಸುಮಾರು 1500 ಹೆಕ್ಟೇರ್ ತಂಬಾಕು ಹೆಚ್ಚಿಗೆ ಬೆಳೆಯಲಾಗಿದೆ. 

ಚಿಕ್ಕೋಡಿ ತಾಲೂಕಿನ ಪಶ್ಚಿಮ ಭಾಗದ ನಿಪ್ಪಾಣಿ ಪರಿಸರದ ಅಕ್ಕೋಳ, ಖಡಕಲಾಟ, ಪಟ್ಟಣಕುಡಿ, ಗಳತಗಾ, ತಪಕರವಾಡಿ, ಶಿವಾಪುರವಾಡಿ, ಕೋಗ್ನಿ, ಸಿದ್ದಾಳ, ಕುನ್ನೂರ, ಹುನ್ನರಗಿ, ಶಿರಗಾಂವ, ಗಿರಗಾಂವ, ರಾಮಪುರ ಮುಂತಾದ ಗ್ರಾಮಗಳಲ್ಲಿ ಮಾತ್ರ ಹೆಚ್ಚಿನಪ್ರಮಾಣದಲ್ಲಿ ಇಂದಿಗೂ ರೈತರು ತಂಬಾಕು ಬೆಳೆಯುತ್ತಾರೆ. ಕಳೆದ ಸಾಲಿನಲ್ಲಿ ತಂಬಾಕು ಸರಾಸರಿ 130 ರಿಂದ 190 ರೂ. ಕಿಲೋಗೆ ಮಾರಾಟವಾಗಿತ್ತು.

ಈ ವರ್ಷ ಹವಾಮಾನ ಸಾಥ್ ನೀಡಿರುವುದರಿಂದ ಉತ್ತಮ ದರ್ಜೆಯ ತಂಬಾಕು ಉತ್ಪಾದನೆಯಾಗಿದ್ದು ವೈಜ್ಞಾನಿಕ ? ಸಿಗಬಹುದು ಎಂಬುದು ಉತ್ಪಾದಕರ ಆಶಯವಾಗಿದೆ. ತಂಬಾಕು ಬೆಳೆಯಲು ಅಧಿಕ ಪರಿಶ್ರಮದ ಅಗತ್ಯವಿದ್ದು ನಾಟಿ ಮಾಡಿದ ದಿನದಿಂದ ಬೆಳೆ ಕಟಾವು ಮಾಡಿ ಸಂಸ್ಕರಿಸುವ ತನಕವೂ ತೀವ್ರ ನಿಗಾ ವಹಿಸಬೇಕಾಗುತ್ತದೆ. ಗೊಬ್ಬರ, ಕೀಟನಾಶಕ, ಕೂಲಿಕಾರ್ಮಿಕರ ಸಂಬಳ ಹೀಗೆಉತ್ಪದನಾ ವೆಚ್ಚ ಅಧಿಕವಾಗಿದ್ದು ಒಟ್ಟಿನಲ್ಲಿ ಪ್ರಸಕ್ತಸಾಲಿನಲ್ಲಿ ಸರಾಸರಿ 200 ರೂ. ವರೆಗೆ ಮಾರಾಟವಾಗಬಹುದು ಎಂಬ ನೀರೀಕ್ಷೆಯಲ್ಲಿದ್ದಾರೆ ತಂಬಾಕು ಉತ್ಪಾದಕರು.