ಬಳ್ಳಾರಿ:- 9ನಿಮಿಷಗಳ ಕಾಲ 9ದೀಪ ಬೆಳಗಿಸಿ ಕರೊನಾ ವಿರುದ್ಧ ಕೈ ಜೋಡಿಸಿ ಎಂದು ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಸಂದೇಶಕ್ಕೆ ಗಣಿ ಜಿಲ್ಲೆಯ ಜನತೆ ದೀಪ ಬೆಳಗಿಸುವ ಮೂಲಕ ಸಾಂಸ್ಕೃತಿಕ ವೈಭವ ಮೆರೆದರು.
ಬಳ್ಳಾರಿ ನಗರ, ಹೊಸಪೇಟೆ, ಹಡಗಲಿ, ಹಗರಿಬೊಮ್ಮನಹಳ್ಳಿ, ಸಿರುಗುಪ್ಪ, ಕಂಪ್ಲಿ, ಸಂಡೂರು, ಕುರುಗೋಡು ಸೇರಿದಂತೆ ಪ್ರತಿ ತಾಲೂಕು, ಹಳ್ಳಿ, ಪಟ್ಟಣಗಳ ಮನೆ, ಮನೆಯ ಹೊರಗಡೆ, ಬಾಲ್ಕನಿಗಳಲ್ಲಿ ಗೃಹಿಣಿಯರು, ಯುವತಿಯರು, ಮಹಿಳೆಯರು 9ನಿಮಿಷಗಳ ಕಾಲ ದೀಪ ಬೆಳಗಿಸಿ ಸಂಭ್ರಮಿಸಿದರು.
ಮನೆಯಲ್ಲಿರುವ ವಿದ್ಯುತ್ ಆಫ್ ಮಾಡಿ ದೀಪ ಬೆಳಗಿಸಿದ್ದರಿಂದ ಸಂಕ್ರಮಣ ಕಾಲದ ಅಯ್ಯಪ್ಪ ಸ್ವಾಮಿಯ ಜ್ಯೋತಿಯ ದರ್ಶನದಂತೆ ದೀಪಗಳು ಎಲ್ಲೆಡೆ ಕಂಗೊಳಿಸಿದವು.
ಕೆಲವರು ಮೊಬೈಲ್ ಟಾಚರ್್ ಆನ್ ಮಾಡುವ ಮೂಲಕ ದೀಪದ ಕಾರ್ಯಕ್ಕೆ ಕೈ ಜೋಡಿಸಿದರು.
ಏಕಾಏಕಿ ವಿದ್ಯುತ್ ಬಂದ್ ಮಾಡಿ ನಿಗಧಿತ ಸಮಯ 9ಗಂಟೆಗೆ ದೀಪ ಬೆಳಗಿಸುವ ಮೂಲಕ ಜನತೆ ಧನ್ಯತಾ ಭಾವ ಮೆರೆದರು.