ಗುರುವಾರ ಸಂಪುಟ ವಿಸ್ತರಣೆ ನಿಶ್ಚಿತ : ಬಿ.ಎಸ್.ಯಡಿಯೂರಪ್ಪ

ಕಲಬುರಗಿ. ಫೆ 5 : ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಗುರುವಾರ ನಡೆಯುವುದು ನಿಶ್ಚಿತ ಎಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. 

        ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟದಲ್ಲಿ ಯಾರ್ಯಾರಿಗೆ ಸಚಿವ ಸ್ಥಾನ ನಿಡಬೇಕು, ಎಷ್ಟು ಸಂಖ್ಯೆಯಲ್ಲಿ ಸಚಿವ ಸ್ಥಾನ ನೀಡಬೇಕು ಎಂಬ ಕುರಿತು ವರಿಷ್ಠರು ಸೂಕ್ತ ಸಂದೇಶ ನೀಡಲಿದ್ದಾರೆ ಎಂದರು. 

      ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ದೂರದೃಷ್ಟಿಯ ಹಿನ್ನೆಲೆಯಿಂದ ಬರುವ ಮಾರ್ಚ್ 5 ರಂದು ರಾಜ್ಯದ ರೈತ ಮತ್ತು ಮಹಿಳಾಪರ  ಅಯವ್ಯಯ ಮಂಡಿಸಲಿದ್ದೇನೆ ಎಂದರು.

        ಈ ಸಂದರ್ಭದಲ್ಲಿ ರಾಜ್ಯದ ಉಪಮುಖ್ಯಮಂತ್ರಿಗಳು, ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ, ಶಾಸಕರಾದ ಬಸವರಾಜ ಮತ್ತಿಮೂಡ, ರಾಜಕುಮಾರ್ ಪಾಟೀಲ್ ತೆಲ್ಕುರ್, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಶಿಕಲಾ ವಿ. ಟೆಂಗಳಿ, ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಸುನೀಲ ವಲ್ಯಾಪೂರೆ, ಮಾಜಿ ಶಾಸಕ ವಾಲ್ಮೀಕಿ ಚವ್ಹಾಣ, ಜಿಲ್ಲಾಧಿಕಾರಿ ಶರತ್ ಬಿ. ಸೇರಿದಂತೆ ಇನ್ನಿತರರು ಇದ್ದರು.