ಅರಣ್ಯ ಪ್ರದೇಶದಲ್ಲಿ ಹೆಣ್ಣು ಕಾಡಾನೆ ಯೊಂದು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದೆ

ಅರಣ್ಯ ಪ್ರದೇಶದಲ್ಲಿ ಹೆಣ್ಣು ಕಾಡಾನೆ ಯೊಂದು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದೆ A female wild elephant died of electrocution in a forest area

ದಾಂಡೇಲಿ 18: ವನ್ಯಜೀವಿ ವಿಭಾಗದ ಅಂಬಿಕಾನಗರ (ಜಮಗಾ) ಅರಣ್ಯ ಪ್ರದೇಶದಲ್ಲಿ ಹೆಣ್ಣು ಕಾಡಾನೆ ಯೊಂದು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ಜರುಗಿದೆ ಎಂದು ಕುಳಗಿ ಎಸಿಎಫ್ ಕಳ್ಳಿಮಠ ಸ್ಥಳಕ್ಕೆ ಭೇಟಿ ನೀಡಿದ ಕಾರವಾರ ಮಾಧ್ಯಮಗಳಿಗೆ ವಿವರಿಸಿದರು.

ಅಂಬಿಕಾನಗರ ಪವರ್ ಸ್ಟೆಟಶನ್ ನಿಂದ ಹೈಟೆನ್ಶನ್ ಮಾರ್ಗ ಗೋವಾ ಕಡೆಗೆ , ಮತ್ತೊಂದು ಲೈನ್ ಹುಬ್ಬಳ್ಳಿ ಕಡೆಗೆ ದಟ್ಟ ಕಾಡಿನ ಮಧ್ಯೆ ಹಾದು ಹೋಗಿದೆ.ಅಂಬಿಕಾನಗರದಿಂದ 2 ಕಿ. ಮೀ. ದೂರದಲ್ಲಿರುವ 220 ಕೆ.ವಿ. ಲೈನ್ ನ ಪಕ್ಕದಲ್ಲಿರುವ ಮರಕ್ಕೆ ಹೆಣ್ಣಾನೆಮೈ ಉಜ್ಜುವಾಗ ಬಾಗಿದ ಮರದ ಟೊಂಗೆಯೊಂದು 220 ಕೆ.ವಿ. ಲೈನ್ ಗೆ ತಾಗಿದ್ದರಿಂದ ವಿದ್ಯುತ್ ಸ್ಪರ್ಶವಾಗಿ ಹೆಣ್ಣಾನೆ ಸ್ಥಳದಲ್ಲೆ ಮೃತಪಟ್ಟಿದೆ. ಕಾಳಿ ವಿದ್ಯುತ್ ಯೋಜನೆಯ ನಾಗಝರಿ ಪವರ್ ಹೌಸ್ ನಲ್ಲಿ ಉತ್ಪಾದಿಸುವ ವಿದ್ಯುತ್ ನ್ನು 220 ಕೆ.ವಿ. ಹೆವಿಲೈನ್ ಮೂಲಕ ಹುಬ್ಬಳ್ಳಿ ಹಾಗೂ ಗೋವಾಕ್ಕೆ ಪೂರೈಸಲಾಗುತ್ತದೆ. ಮಳೆಗಾಲದ ಈ ಸಂದರ್ಭದಲ್ಲಿ ವಿದ್ಯುತ್ ಮಾರ್ಗದ ಲೈನ್ ಕಾಡಿನ ಕೆಲವು ಕಡೆ ಗಿಡ, ಮರ, ಬಿದಿರುಗಳು ಗಾಳಿ ಮಳೆಗೆ ವಾಲುವುದರಿಂದ ಲೈನ್ ಗೆ ತಾಗಿ ವಿದ್ಯುತ್ ಭೂಸ್ಪರ್ಶವಾಗಿ ಪ್ರಸರಣವಾಗುವ ಸಾಧ್ಯತೆಯುಂಟು. ಇದಕ್ಕಾಗಿ 220 ಕೆ.ವಿ. ಲೈನ್ ಗೆ ತಾಗದಂತೆ ಅಕ್ಕ ಪಕ್ಕದ ಗಿಡ ಮರದ ಟೊಂಗೆ, ಬಿದಿರುಗಳನ್ನು ಜಂಗಲ್ ಕ್ಲಿಯರೆನ್ಸ್‌ ನಿರ್ವಹಣೆಯನ್ನು ಹುಬ್ಬಳ್ಳಿಯ ಹೆಸ್ಕಾಂ ಮೇಜರ್ ವರ್ಕ್ಸ್‌ ಡಿವಿಜನ್ ನಿಂದ ಮಾಡಿಸಲಾಗುತ್ತದೆ. ಆದರೂ ಸಹ ಈ ಮಾರ್ಗದಲ್ಲಿ ಸಂಚರಿಸುವ ಆನೆಗಳು ಅಪಾಯಕ್ಕೆ ಆಗಾಗ ಸಿಲುಕುವ ಸಾಧ್ಯತೆ ಇದೆ. 12 ವರ್ಷದ ಹಿಂದೆ ಆನೆ ವಿದ್ಯುತ್ ತಗುಲಿ ಸಾವನ್ನಪ್ಪಿತ್ತು ಎಂದು ಕುಳಗಿ ಎಸಿಎಫ್ ಕಳ್ಳಿಮಠ ವಿವರಿಸಿದರು. .

ಈಗ ಮೃತಪ್ಪಟ್ಟ ಹೆಣ್ಣಾನೆಗೆ 14 ವರ್ಷ ಇರಬೇಕೆಂದು ಅಂದಾಜಿಸಲಾಗಿದೆ. ವನ್ಯಜೀವಿ ಇಲಾಖೆಯ ಅಧಿಕಾರಿಗಳು, ಹೆಸ್ಕಾಂ ಅಧಿಕಾರಿಗಳು ಸ್ಥಳ ಪರೀಶೀಲನೆ ಮಾಡಿದ್ದು ಬುಧವಾರ ಮೃತ ಆನೆಯ ಅಂತ್ಯಸಂಸ್ಕಾರ ಮಾಡಲಾಯಿತು ಎಂದು ವನ್ಯಜೀವಿ ಇಲಾಖೆಯ ಎಸಿಎಫ್ ಮಾಹಿತಿ ನೀಡಿದರು.