ಅರಸೀಕರೆ ಬಳಿ ಎರಡು ಸರಕು ವಾಹನಗಳಿಗೆ ಬಸ್ ಡಿಕ್ಕಿ-ಮೂವರು ಸಾವು, 11 ಮಂದಿಗೆ ಗಾಯ

accident

ಹಾಸನ, ಜನವರಿ 30- ಜಿಲ್ಲೆಯ ಅರಸಿಕೇರೆ ತಾಲ್ಲೂಕಿನ ಬೆಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206 ರ ಸೊಲೆಕೆರೆ ಗೇಟ್‍ನಲ್ಲಿ ಗುರುವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ ಆರ್ ಟಿಸಿ)ದ ಬಸ್ ವೊಂದು ಎರಡು ಸರಕು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟು, ಇತರ 11 ಮಂದಿ ಗಾಯಗೊಂಡಿದ್ದಾರೆ.

ಮೃತರನ್ನು ಬಸವರಾಜು (48), ಯಲ್ಲಯ್ಯ (50) ಮತ್ತು ರಮೇಶ್ (24) ಎಂದು ಗುರುತಿಸಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಸರಕು ವಾಹನವನ್ನು ಹಿಂದಿಕ್ಕುವ ಭರದಲ್ಲಿ ಬಸ್ ಎರಡು ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಸೀಕೆರೆ ಪೊಲೀಸರು ಸ್ಥಳಕ್ಕೆ ಭೇಟಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.