ಅಕ್ರಮ ಮರಳು ಸಾಗಾಣಿಕೆ ತಡೆದ ಗ್ರಾಮ ಆಡಳಿತಾಧಿಕಾರಿಗೆ ಬೆದರಿಕೆ; ತಾಲೂಕಡಳಿತ ಸೌಧದ ಮುಂದೆ ಪ್ರತಿಭಟನೆ; ಶ್ವೇತಾ ಬೀಡಿಕರ ಅವರಿಗೆ ಮನವಿ

ಅಕ್ರಮ ಮರಳು ಸಾಗಾಣಿಕೆ ತಡೆದ ಗ್ರಾಮ ಆಡಳಿತಾಧಿಕಾರಿಗೆ ಬೆದರಿಕೆ; ತಾಲೂಕಡಳಿತ ಸೌಧದ ಮುಂದೆ ಪ್ರತಿಭಟನೆ; ಶ್ವೇತಾ ಬೀಡಿಕರ ಅವರಿಗೆ ಮನವಿ Threats to village administrator who stopped illegal sand transportation; Protest in front of Taluka

ಲೋಕದರ್ಶನ ವರದಿ 

ಜಮಖಂಡಿ  20 : ತಾಲೂಕಿನ ಸನಾಳ ಗ್ರಾಮದಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಸುತ್ತಿರುವುದನ್ನು ತಡೆದ ಕಾರಣಕ್ಕೆ ಗ್ರಾಮ ಆಡಳಿತಾಧಿಕಾರಿ ಗಂಗಯ್ಯ ಹಿರೇಮಠ ಎಂಬುವರ ಮನೆಗೆ ನುಗ್ಗಿದ ಕೆಲ ದುಶ್ಕರ್ಮಿಗಳು ಅಧಿಕಾರಿ ಹಾಗೂ ಮನೆಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಸನಾಳ ಗ್ರಾಮದ ಹನುಮಂತ ಕುರಣಿ, ಬಾಹುಬಲಿ ನ್ಯಾಮಗೌಡ, ಹಾಗೂ ಲಕ್ಷ್ಮಣ ಕೊಟ್ಟೆಪ್ಪಗೊಳ ಎಂಬುವರು ಅಕ್ರಮ ಮರಳು ಸಾಗಾಣಿಕೆ ನಡೆಸುತ್ತಿದ್ದರು ಎಂದು ಸುದ್ದಿ ತಿಳಿದಾಕ್ಷಣ ಗ್ರಾಮ ಆಡಳಿತ ಅಧಿಕಾರಿ ತಹಸೀಲ್ದಾರ ಹಾಗೂ ಉಪವಿಭಾಗಾಧಿಕಾರಿಗಳಿಗೆ ಮಾಹಿತಿ ನೀಡಿ, ಅಕ್ರಮ ಮರಳು ಸಾಗಾಣಿಕೆ ನಡೆಸದಂತೆ ತಾಕೀತು ಮಾಡಿದ್ದಾರೆ ಇದರಿಂದ ರೊಚ್ಚಿಗೆದ್ದ ಮೂವರು ಅಧಿಕಾರಿಯನ್ನು ನಿಂದಿಸಿದ್ದಾರಲ್ಲದೇ ರಾತ್ರಿ ಸಮಯದಲ್ಲಿ ಮನೆಗೆ ತೆರಳಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.  

ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ತಾಲೂಕಡಳಿತ ಸೌಧದ ಮುಂದೆ ಪ್ರತಿಭಟನೆ ನಡೆಸಿ. ನಂತರ ಉಪವಿಭಾಗಧಿಕಾರಿ ಶ್ವೇತಾ ಬೀಡಿಕರ ಹಾಗೂ ತಹಶೀಲ್ದಾರ ಅನೀಲ ಬಡಿಗೇರ ಅವರಿಗೆ ಮನವಿ ಸಲಿಸಿದರು. ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಗ್ರಾಮ ಆಡಳಿತಾಧಿಕಾರಿ ಗಂಗಯ್ಯ ಹಿರೇಮಠ ಅವರು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.