ಕಾರವಾರ29 : ವರದಿಗಾಗಿ ತೆರಳಿದ್ದ ದೃಶ್ಯ ಮಾಧ್ಯಮವೊಂದರ ವರದಿಗಾರ ಹಾಗೂ ಕ್ಯಾಮರಾಮನ್ಗೆ ಜಿಲ್ಲಾಧಿಕಾರಿ ಕಚೇರಿ ತಾಂತ್ರಿಕ ಸಹಾಯಕ ಹಾಗೂ ಪದನಿಮಿತ್ತ ಭೂ ದಾಖಲೆಗಳ ಉಪ ನಿದರ್ೇಶಕ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಮಂಗಳವಾರ ನಡೆದಿದ್ದು, ಬುಧುವಾರ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಡಿವೈಎಸ್ಪಿ ಜಿ.ಟಿ.ನಾಯಕ ಅವರಿಗೆ ಕಾರವಾರ ದೃಶ್ಯ ಹಾಗೂ ಮುದ್ರಣ ಮಾಧ್ಯಮ ಪತ್ರಕರ್ತರು ದೂರು ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಂಕಿರ್ಣದಲ್ಲಿನ ಭೂ ದಾಖಲೆ ಉಪನಿದರ್ೇಶಕರ ಕಚೇರಿಗೆ ತೆರಳಿದ್ದ ಪತ್ರಕರ್ತ ಹಾಗೂ ಕ್ಯಾಮರಾಮನ್ ಸುದ್ದಿಗಾಗಿ ತೆರಳಿದ್ದರು. ಕಚೇರಿ ಪ್ರವೇಶಿಸುತ್ತಿದ್ದಂತೆ ಅಧಿಕಾರಿ ಕೂಗಾಡಿದ್ದು ವರದಿಗಾರರ ಕ್ಯಾಮರಾದಲ್ಲಿ ಸೆರೆಯಾಗಿದೆ. ರಾಸ್ಕಲ್ ನಿನ್ನಂಥವರನ್ನು ತುಂಬಾ ಜನ ನೋಡಿದ್ದೇನೆ. ನಿನ್ನನ್ನು ನೋಡಿಕೊಳ್ಳುತ್ತೇನೆ. ಮೊದಲು ಇಲ್ಲಿಂದ ಹೊರ ಹೋಗು ಎಂದು ಕೂಗಾಡಿದ್ದಾರೆ. ಪದನಿಮಿತ್ತ ಉಪ ನಿದರ್ೇಶಕ 15 ದಿನಗಳಿಗೆ ಒಮ್ಮೆ ಕಚೇರಿಗೆ ಬಂದು , ಒಂದೇ ದಿನ ಎಲ್ಲಾ ಸಹಿ ಮಾಡುತ್ತಿದ್ದ ಆರೋಪವಿತ್ತು. ಈ ಬಗ್ಗೆ ಮಾಹಿತಿ ಹಾಗೂ ಪ್ರತಿಕ್ರಿಯೆ ಪಡೆಯಲು ಸುದ್ದಿಗಾರರು ತೆರಳಿದ್ದರು. ಭೂ ದಾಖಲೆಗಳ ಸವರ್ೆ ಮತ್ತು ನಂಬರ್ ನೀಡಿಕೆ ವಿಷಯದಲ್ಲಿ ಸಹ ಸಾರ್ವಜನಿಕರಿಗೆ ಉಪ ನಿದರ್ೇಶಕರು ಕಿರುಕುಳ ನೀಡುತ್ತಾರೆ ಎಂಬ ದೂರುಗಳು ಬಂದಿದ್ದವು.
ಕಾರವಾರಕ್ಕೆ ವಗರ್ಾವಣೆಯಾಗಿ ಬರುವ ಮುನ್ನ ಹಿರಿಯ ಐಎಎಸ್ ಅಧಿಕಾರಿಗೆ ಕಿರಿಕ್ ಮಾಡಿದ ಆರೋಪ ಸಹ ವೇಣುಗೋಪಾಲ್ ಮೇಲೆ ಇತ್ತು ಎಂದು ಹೇಳಲಾಗುತ್ತಿದೆ.
ಪದನಿಮಿತ್ತ ಭೂ ದಾಖಲೆ ಇಲಾಖೆಯ ಉಪನಿದರ್ೇಶಕರ ಅಹಂಕಾರದ ಮಾತುಗಳು, ಅವರ ಮನೋಭಾವವನ್ನು ಬಿಂಬಿಸುತ್ತಿದೆ.ವೇಣುಗೋಪಾಲ ಅವರ ಮೇಲೆ ಈ ಹಿಂದೆಯೂ ಕೆಲ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರ ಮೇಲೆ ಅಧಿಕಾರಿ ನಡೆಸಿದ ದುರ್ವರ್ತನೆಯನ್ನು ಖಂಡಿಸುತ್ತೇವೆ. ಅಧಿಕಾರಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಡಿವೈಎಸ್ಪಿ ಜಿ.ಟಿ.ನಾಯಕ ಮನವಿ ಸ್ವೀಕರಿಸಿದರು. ಮನವಿ ನೀಡುವ ವೇಳೆ ಟಿವಿ 9 ವರದಿಗಾರ ಸಂದೀಪ ಸಾಗರ, ಪಬ್ಲಿಕ್ ಟಿವಿ ವರದಿಗಾರ ನವೀನ್ ಸಾಗರ, ಪ್ರಜಾ ವಿಟಿ ವರದಿಗಾರ ಸಂದೀಪ,ವಾಸು ಗೌಡ,ದೀಪಕ್ ಶೆಣೈ,ರವಿ ಗೌಡ, ಗೌತಮ್ ಬಾಡಕರ,ಅಚ್ಯುತ್ ಕುಮಾರ್,ಪ್ರಶಾಂತ ಮಹಾಲೆ,ದೀಪಕ್ ಶೆಟ್ಟಿ, ಅರವಿಂದ ಗುನಗಿ,ಶಶಿ, ಭೀಮರಾವ್ , ವೆಂಕಟೇಶ್,
ಸುಭಾಷ್ ದೂಪದೊಂಡ,ಕಡತೋಕಾ ಮಂಜು, ದರ್ಶನ್ ನಾಯ್ಕ, ಗಿರೀಶ್ ನಾಯ್ಕ ಬಾಡ, ಉದಯ್ ಬಗರ್ಿ, ನಾಗರಾಜ ಹರಪನಹಳ್ಳಿ, ಗಿರೀಶ್ ಬಾಂದೇಕರ್, ಸಾಯಿಕಿರಣ್ ಇತರರು ಇದ್ದರು.