ಬೆಳೆ ಹಾನಿ ತಪ್ಪಿಸುವಂತೆ ಗುಂಡವಾಡೆ ಸರ್ಕಾರಕ್ಕೆ ಒತ್ತಾಯ

ಲೋಕದರ್ಶನ ವರದಿ

ಶೇಡಬಾಳ:  ಹಿಪ್ಪರಗಿ ಬ್ಯಾರೇಜಿಗೆ ಕೃಷ್ಣಾ ನದಿಯಿಂದ ಬರುವ ನೀರಿನ ಒಳ ಹರಿವಿನ ಪ್ರಮಾಣಕ್ಕಿಂತ ಹೊರ ಹರಿವಿನ ಪ್ರಮಾಣ ಕಡಿಮೆ ಇರುವದರಿಂದ ಮತ್ತು ಅಂಕಲಿ ಮಾಂಜರಿ ಗ್ರಾಮಗಳ ನಡುವೆ ಕೃಷ್ಣಾ ನದಿಗೆ ನಿಮರ್ಿಸಲಾಗಿರುವ ಸೇತುವೆಯ ಎರಡು ಬದಿಗೆ ದಿಬ್ಬುಗಳನ್ನು ಹಾಕಿ ರಸ್ತೆ ನಿಮರ್ಿಸಿರುವುದರಿಂದ  ಹಾಗೂ ಚಿಕ್ಕೋಡಿ ತಾಲೂಕಿನ ಇಂಗಳಿ ಗಾವಠಾಣದಿಂದ ಇಂಗಳಿ ಗ್ರಾಮದವರೆಗೆ ರಸ್ತೆಯನ್ನು ಎತ್ತರ ಮಾಡಿರುವದರಿಂದ ಕೃಷ್ಣಾ ನದಿಗೆ ಮಹಾಪೂರ ಬಂದಾಗ ನೀರು ಸರಾಗವಾಗಿ ಹೋಗಲು ದಾರಿ ಇಲ್ಲದೇ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿ ಸಂಭವಿಸುತ್ತಿದೆ. 

ಅವೈಜ್ಞಾನಿಕವಾಗಿರು ಈ ಕಾಮಗಾರಿಗಳಿಗೆ ಪಯರ್ಾಯ ವ್ಯವಸ್ಥೆಯನ್ನು ಕಲ್ಪಿಸಿ ಬೆಳೆ ಹಾನಿ ತಪ್ಪಿಸುವಂತೆ ಕಾಗವಾಡ ತಾಲೂಕಿನ ಮೋಳವಾಡ ಗ್ರಾಮದ ಪ್ರಗತಿಪರ ರೈತರಾದ ದೇವಗೌಡ ಆರ್. ಗುಂಡವಾಡೆ ಸಕರ್ಾರವನ್ನು ಒತ್ತಾಯಿಸಿದ್ದಾರೆ.

ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಮಾಂಜರಿ - ಅಂಕಲಿ ಕೃಷ್ಣಾ ನದಿಗೆ ನಿಮರ್ಿಸಲಾಗಿರುವ ಸೇತುವೆಯ ಎರಡು ಬದಿಗೆ ರಸ್ತೆಯನ್ನು ಎತ್ತರಗೊಳಿಸುವಗೋಸ್ಕರ ದೊಡ್ಡ ದೊಡ್ಡ ದಿಬ್ಬುಗಳನ್ನು ನಿಮರ್ಿಸುವದರಿಂದ ನೀರು ಸರಾಗವಾಗಿ ಹೋಗಲು ದಾರಿ ಇಲ್ಲದೇ ಇರುವದರಿಂದ ನದಿಯ ಹಿನ್ನೀರು ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಸಂಭವಿಸುತ್ತಿದೆ. 

ಅದರಂತೆ ಇಂಗಳಿ ಗಾವಠಾಣದಿಂದ ಇಂಗಳಿ ಗ್ರಾಮದವರೆಗೆ ರಸ್ತೆಯನ್ನು ಎತ್ತರಗೊಳಿಸಿರುವದರಿಂದ ಇಲ್ಲಿಯೂ ಅದೇ ಸಮಸ್ಯೆ ಉಂಟಾಗಿದೆ. ಹಿಂದಿನ ಕಾಲದಲ್ಲಿ ಮಹಾಪೂರ ಬಂದಾಗ ಕೃಷ್ಣೆಯು ವಿಶಾಲ ಆಕಾರವನ್ನು ಪಡೆದು ಹರಿಯುತ್ತಿದ್ದಳು.ಆವಾಗ ರೈತರ ಜಮೀನುಗಳಿಗೆ ನೀರು ಸೇರುವ ಪ್ರಮೇಯೇ ಬರುತ್ತಿರಲಿಲ್ಲ. ಬೆಳೆ ಹಾನಿಯೂ ಸಂಭವಿಸುತ್ತಿರಲಿಲ್ಲ. 

2005 ರಿಂದ ಈ ಭಾಗದಲ್ಲಿ ಈ ಸಮಸ್ಯೆ ಉಂಟಾಗಿದ್ದು, ಕೃಷ್ಣಾ ನದಿ ತೀರದ ರೈತರು ಪ್ರತಿ ವರ್ಷ ಈ ಸಮಸ್ಯೆಯನ್ನು ಎದುರಿಸುವಂತಾಗಿದೆ. ಮಳೆಗಾಲ ಬಂತೆಂದರೆ ಈ ಭಾಗದ ಜನ ಜೀವವನ್ನು ಕೈಯಲ್ಲಿ ಹಿಡಿದು ಬದುಕುವ ಪರಿಸ್ಥಿತಿ ಬಂದೊದಗಿದೆ. ಕಾರಣ ಕೃಷ್ಣಾ ನದಿಗೆ ಅವೈಜ್ಞಾನಿಕವಾಗಿ ನಿಮರ್ಿಸಲಾಗಿರುವ ಕಾಮಗಾರಿಗಳಿಗೆ ಸಕರ್ಾರ ಶಾಶ್ವತ ಪರಿಹಾರವನ್ನು ದೊರಕಿಸಿಕೊಡುವಂತೆ ಪ್ರಗತಿಪರ ರೈತರಾದ ದೇವಗೌಡ ಆರ್. ಗುಂಡವಾಡೆ ಸಕರ್ಾರವನ್ನು ಒತ್ತಾಯಿಸಿದ್ದಾರೆ.