ಮುಂಬೈ, ಡಿ 23, ಮೂಲಭೂತ ಸೌಕರ್ಯಗಳ
ಪ್ರಮುಖ ಸಂಸ್ಥೆ ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್ ಸೋಮವಾರ 1, 250 ಕೋಟಿ ರೂ. ಮೌಲ್ಯದ ಪ್ರಕರಣದಲ್ಲಿ ಗೆಲುವು ಸಾಧಿಸಿದೆ.
ಇದು ಕೇಂದ್ರ ಸರ್ಕಾರದ ಸಹಭಾಗಿತ್ವದ ದಾಮೋದರ್ ವ್ಯಾಲಿ
ಕಾರ್ಪೊರೇಷನ್ (ಡಿವಿಸಿ) ವಿರುದ್ಧ ದಾವೆ ಹೂಡಿತ್ತು. ವಿಚಾರಣೆ ನಡೆಸಿದ ಮೂರು ಸದಸ್ಯರು ಅರ್ಬಿಟ್ರೇಷನ್
ನ್ಯಾಯಾಧಿಕರಣ ಒಮ್ಮತದಿಂದ ಡಿಸೆಂಬರ್ 31ರಂದು ರಿಲಯನ್ಸ್
ಇನ್ ಫ್ರಾಸ್ಟ್ರಕ್ಚರ್ ಪರ ತೀರ್ಪು ನೀಡಿದೆ. ರಿಲಯನ್ಸ್
ಇನ್ ಫ್ರಾಸ್ಟ್ರಕ್ಚರ್ ಪಶ್ಚಿಮ ಬಂಗಾಳದಲ್ಲಿ 2012ರಲ್ಲಿ ಆರಂಭಗೊಂಡ ದಾಮೋದರ್ ವ್ಯಾಲಿ ಕಾರ್ಪೊರೇಷನ್
ನ 2-600 ಮೆಗಾ ವ್ಯಾಟ್ನ ರಘುನಾಥಪುರ ಉಷ್ಣ ವಿದ್ಯುತ್ ಸ್ಥಾವರದ ಇಂಜಿನಿಯರಿಂತ್
ನಿರ್ಮಾಣದ ಗುತ್ತಿಗೆ ವಹಿಸಿಕೊಂಡಿತ್ತು. ಈ ಗುತ್ತಿಗೆ ಸಂಬಂಧ ಹಣಕಾಸಿನಲ್ಲಿ ವ್ಯಾಜ್ಯ ಉಂಟಾಗಿದ್ದರಿಂದ
ಪ್ರಕರಣ ನ್ಯಾಯಾಧಿಕರಣದ ಮೆಟ್ಟಿಲೇರಿತ್ತು. ಈಗ ನ್ಯಾಯಾಧಿಕರಣ
ಸಂಸ್ಥೆ 896 ಕೋಟಿ ರೂ. ಪಾವತಿಸಬೇಕು ಮತ್ತು ಈಗಾಗಲೇ ಸಂಸ್ಥೆ ಪಾವತಿಸಿರುವ 354 ಕೋಟಿ ರೂ. ಗ್ಯಾರಂಟಿ
ಹಣವನ್ನು ನಾಲ್ಕು ವಾರಗಳಲ್ಲಿ ಮರಳಿಸಬೇಕು ಎಂದು ಪ್ರತಿವಾದಿ
ಸಂಸ್ಥೆಗೆ ನಿರ್ದೇಶಿಸಿದೆ.