ಬುದ್ಧ-ಬಸವ-ಬಾಬಾಸಾಹೇಬರ ಚಿಂತನೆ
Thoughts of Buddha-Basava-Babasaheb
ಲೋಕದರ್ಶನ ವರದಿ
ವಿಜಯಪುರ 26: ಸಾಮಾಜಿಕ ಜಾಲತಾಣದಲ್ಲಿ ಮುಳುಗಿ ಹೋಗಿರುವ ಯುವಕರಿಗೆ ಹೊತ್ತಿಗೆಯ ಬಗ್ಗೆ ಒಲವು ಮೂಡಿಸಿ ಅವರಲ್ಲಿ ಬುದ್ಧ-ಬಸವ-ಬಾಬಾಸಾಹೇಬರ ಚಿಂತನೆಯನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಥಮ ಪ್ರಯತ್ನವಾಗಿ ಮೇ ಸಾಹಿತ್ಯ ಬಳಗದಿಂದ ಸಂಘಟಿಸಲಾಗಿದ್ದ ಪುಸ್ತಕ ಮೇಳ ಯಶಸ್ವಿಯಾಗಿದ್ದು, ಐದು ಲಕ್ಷ ರೂ. ಮಿಕ್ಕಿ ವಹಿವಾಟು ನಡೆದಿದೆ, ಜನರು ಪುಸ್ತಕದ ಬಗ್ಗೆ ಒಲವು ಕಡಿಮೆಯಾಗಿಲ್ಲ ಎನ್ನುವುದು ಇದಕ್ಕೆ ಮತ್ತೊಮ್ಮೆ ಸಾಕ್ಷೀಕರಿಸಿದೆ, ಈ ಮೇಳವನ್ನು ಮುಂದಿನ ವರ್ಷವೂ ಅತ್ಯಂತ ಅಚ್ಚುಕಟ್ಟುತನಿಂದ ಆಯೋಜಿಸಲಾಗುವುದು ಎಂದು ಮೇ ಸಾಹಿತ್ಯ ಬಳಗದ ಅನೀಲ ಹೊಸಮನಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ಮೇ ಸಾಹಿತ್ಯ ಬಳಗ ಸಂಘಟಿಸಿದ ಪುಸ್ತಕ ಮೇಳ ಯಶಸ್ವಿಯಾಗಿದೆ, ಬುದ್ಧ, ಬಸವ ಹಾಗೂ ಬಾಬಾಸಾಹೇಬರ ತತ್ವ ಚಿಂತನೆ, ಆಶಯಗಳ ಆಧರಿಸಿ ಸಮಾಜ ಇನ್ನೂ ನಿರ್ಮಾಣವಾಗಿಲ್ಲ, ಈ ಮಹನೀಯರ ಸಮ ಸಮಾಜದ ಕನಸು ನನಸಾಗಿಸಲು ಪ್ರತಿಯೊಬ್ಬರು ಶ್ರಮಿಸಬೇಕಿದೆ, ಈ ಪ್ರಯತ್ನದ ಭಾಗವಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮುಳುಗಿ ಹೋಗಿರುವ ಯುವಜನರಿಗೆ ಹೊತ್ತಿಗೆಯ ಒಲವು ಮೂಡಿಸುವ ನಿಟ್ಟಿನಲ್ಲಿ ಈ ಪುಸ್ತಕ ಮೇಳವನ್ನು ಆಯೋಜಿಸಲಾಗಿತ್ತು, ನಮ್ಮ ಕರೆಗೆ ಓಗೊಟ್ಟು 35 ಕ್ಕೂ ಹೆಚ್ಚು ಪ್ರಕಾಶನ ಸಂಸ್ಥೆಗಳು ಆಗಮಿಸಿದ್ದವು ಎಂದರು.
ವಿಜಯಪುರದಲ್ಲಿ ಪುಸ್ತಕ ಖರೀದಿ ಆಗುವುದಿಲ್ಲ ಎಂಬ ಮನೋಭಾವ ಹೊಂದಿದ್ದರು, ಆದರೆ ಇಲ್ಲಿ ಬಂದ ಮೇಲೆ ಅವರ ಅಭಿಪ್ರಾಯ ಹಾಗೂ ಮನೋಭಾವ ಬದಲಾಗಿದ್ದು, ಅನೇಕರು ಆಸಕ್ತಿಯಿಂದ ಪುಸ್ತಕ ಖರೀದಿ ಮಾಡಿರುವುದು ಅನೇಕ ಪ್ರಕಾಶಕರಿಗೆ ಸಂತೋಷ ತಂದಿದೆ, 5 ಲಕ್ಷ ರೂ.ಗಳಿಗೂ ಮಿಕ್ಕಿ ಪುಸ್ತಕದ ವ್ಯಾಪಾರ-ವಹಿವಾಟು ನಡೆದಿರುವುದು ಜನತೆ ಪುಸ್ತಕದ ಬಗ್ಗೆ ಹೊಂದಿರುವ ಒಲವಿಗೆ ಸಾಕ್ಷಿ ಎಂದರು.
ಸಾಮಾನ್ಯ ಬಡ ಕುಟುಂಬದಿಂದ ಬಂದವರೇ ಸಂಘಟಿಸಿದ ಈ ಪುಸ್ತಕ ಮೇಳಕ್ಕೆ ಅನೇಕರು ಉದಾರವಾದ ಸಹಾಯ ಹಸ್ತ ಚಾಚಿದ್ದಾರೆ, ಅವರಿಗೆ ಮೇಳ ಚಿರ ಋಣಿಯಾಗಿದೆ, ಅನೇಕ ಸ್ವಯಂ ಪ್ರೇರಿತವಾಗಿ ಶ್ರಮಿಸಿದ ದೊಡ್ಡ ಪಡೆಯೇ ಇದೆ ಎಂದರು. ಅವರಿವರೆನ್ನದೆ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮೇ ಸಾಹಿತ್ಯ ಬಳಗದ ಪ್ರಮುಖರಾದ ಚೆನ್ನು ಕಟ್ಟಿಮನಿ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ, ವೈ.ಎಸ್. ಗುಣಕಿ, ಸಾಯಬಣ್ಣ ಹಳ್ಳಿ, ಸೋಮಲಿಂಗ ರಣದೇವಿ, ಲಿಂಗರಾಜ್ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 